ಹೂಡಿಕೆಯಿಂದ ಅಧಿಕ ಲಾಭದ ಆಮಿಷ; ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 43 ಲಕ್ಷ ಪಂಗನಾಮ

ಮಂಗಳೂರು : ಕಂಪೆನಿಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೆಪಿಸಿ ಲಕ್ಷಾಂತರ ವಂಚಿಸಿದ ಆರೋಪದ ಮೇಲೆ ಆನ್‌ಲೈನ್ ಖದೀಮರ ವಿರುದ್ಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾರೋ ಅಪರಿಚತ ವ್ಯಕ್ತಿ ಮಂಜು ಪಚಿಸಿಯಾ ಎಂಬ ಹೆಸರಿನಿಂದ ವಾಟ್ಸ್ಆಪ್ ಮುಖಾಂತರ ಪರಿಚಯಿಸಿಕೊಂಡು ತಾನು ASSITANT IN IIFL SECURITIES LIMITEDನಲ್ಲಿ ಕರ್ತವ್ಯ ನಿರವಹಿಸುವುದಾಗಿ ತಿಳಿಸಿ ನಂತರ ಷೇರ್ ಮತ್ತು ಇಪೋ ಬಗ್ಗೆ ತಿಳಿಸಿ ಹೂಡಿಕೆ ಮಾಡಿ ಲಾಭ ಪಡೆಯಬಹುದಾಗಿ ನಂಬಿಸಿದ್ದಾನೆ.

iiflನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಗಳಿಸುವಂತೆ ಪ್ರೇರೇಪಿಸಿ ಹಂತ ಹಂತವಾಗಿ, ಬ್ಯಾಂಕ್ ಆಪ್ ಬರೋಡಾ ಖಾತೆಯಿಂದ 22,00,000/-ರೂ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 19,82,502/- ರೂ ಮತ್ತು ಆಕ್ಸಿಸ್ ಬ್ಯಾಂಕ್ ಖಾತೆಯಿಂದ 1,50,000/- ರೂಗಳು ಒಟ್ಟು 43,32,502/- ರೂಗಳನ್ನು ಅಪರಿಚಿತ ವ್ಯಕ್ತಿಯು ನೀಡಿದ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ನಂತರ ತಾವು ಹೂಡಿದ ಹಣ ಹಿಂಪಡೆಯುವoತೆ ಮುಂದಾದಾಗ ಅಪರಿಚಿತ ವ್ಯಕ್ತಿಗಳು ಶೇ 25 ರಷ್ಟು ಕಮಿಷನ್ ಹಣ ಪಾವತಿಸುವಂತೆ ಒತ್ತಾಯಿಸಿದಾಗ ತಾವು ಆನ್ ಲೈನ್ ಮೋಸ ಹೋಗಿರುವ ವಿಚಾರ ತಿಳಿದು ದೂರು ನೀಡಿದ್ದಾರೆ.

Related posts

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ