ಅಧಿಕ ಲಾಭಾಂಶದ ಆಮಿಷ – ವ್ಯಕ್ತಿಗೆ 4,86,885 ರೂ. ವಂಚನೆ

ಉಡುಪಿ : ಅಧಿಕ ಲಾಭಾಂಶದ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಸಂಭವಿಸಿದ್ದು ದೂರು ದಾಖಲಾಗಿದೆ.


ಬಾಗಲಕೋಟೆ ಮೂಲದ ಉಡುಪಿಯಲ್ಲಿ ನೆಲೆಸಿರುವ ಮುಜಮ್ಮಿಲ್‌ ಖಾನ್‌ ಪಠಾನ(19) ವಂಚನೆಗೊಳಗಾದವರು. ಇವರನ್ನು A3 stock Market elite chat Group ಎಂಬ ವಾಟ್ಸಾಪ್‌ ಗುಂಪಿಗೆ ಯಾರೋ ಅಪರಿಚಿತರು ಸೇರ್ಪಡೆ ಮಾಡಿ ಅದರಲ್ಲಿ ಸ್ಟಾಕ್‌ ಮಾರುಕಟ್ಟೆ ಬಗ್ಗೆ ಮಾಹಿತಿ ನೀಡುತ್ತಿದ್ದರು.

ತಾವು ಹೇಳಿದ ಷೇರಿನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದಾಗಿ ನಂಬಿಸಿ ಆರೋಪಿಗಳು ತಮ್ಮ ವಿವಿಧ ಖಾತೆಗಳಿಗೆ 4,86,885 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಅನಂತರ ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶ ನೀಡದೆ ವಂಚಿಸಿದ್ದಾರೆ ಎಂದು ಉಡುಪಿಯ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ