ಶಾಸನಸಭೆಗೆ ವಿಶೇಷ ಗೌರವ ಇದೆ.. ಅದನ್ನು ಶಾಸಕರು ಪಾಲಿಸಬೇಕು – ವಾಟಾಳ್ ನಾಗರಾಜ್

ಉಡುಪಿ : ವಿಧಾನಸೌಧದ ಶಾಸನ ಸಭೆಗೆ ತನ್ನದೇ ಆದ ಶಕ್ತಿಯಿದೆ. ಆ ಸಭೆಯಲ್ಲಿ ಚರ್ಚೆಗಳು ಆದರ್ಶ ಚಿಂತನೆ ನಡೆಯಬೇಕು. ಆಯವ್ಯಯ ಬಗ್ಗೆ ಸಮಗ್ರ ಚರ್ಚೆ ಆಗಬೇಕು, ಪ್ರತಿ ಇಲಾಖೆ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು. ಇತ್ತೀಚಿನ ವರ್ಷಗಳಲ್ಲಿ ಅದು ಆಗುತ್ತಿಲ್ಲ ಎಂದು ಕನ್ನಡ ಹೋರಾಟಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್, ಬೆಂಗಳೂರು ಮತ್ತು ಬೆಳಗಾವಿಯ ಅಧಿವೇಶನಗಳು ಸಂಪೂರ್ಣ ವಿಫಲ ಆಗುತ್ತಿವೆ. ರಾಜ್ಯದ ಸಮಸ್ಯೆಗಳನ್ನು ಯಾರೂ ಚರ್ಚೆ ಮಾಡಲ್ಲ. ಶಾಸಕರು ಅನಗತ್ಯ ಚರ್ಚೆ ಪ್ರತಿಭಟನೆಯಲ್ಲಿ ತೊಡಗುತ್ತಾರೆ. ಸ್ಪೀಕರ್ ಸದಸ್ಯರುಗಳನ್ನು ಹೊರಗೆ ಹಾಕುವ ಮಟ್ಟಕ್ಕೆ ಹೋಗಬಾರದು. ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳೋದು ಸರಿಯಲ್ಲ. ಆರೇಳು ತಿಂಗಳು ಸಸ್ಪೆಂಡ್ ಮಾಡ್ತೇನೆ ಅನ್ನೋದು ತಪ್ಪು ಎಂದರು.

ವಿಪಕ್ಷದವರು ತಮ್ಮ ಸ್ಥಾನದಲ್ಲೇ ನಿಂತು ಕೂತು ಮಾತನಾಡಿ ಪ್ರತಿಭಟನೆ ದಾಖಲಿಸಬೇಕು. 1967ರಲ್ಲಿ ನನಗೆ 25 ವರ್ಷ, ಸಿಎಂ ನಿಜಲಿಂಗಪ್ಪ ಅವರ ಕಾಲದ ಯುವ ಶಾಸಕ ನಾನು. ಶಾಸಕನಾಗಿರುವ ಸುವರ್ಣಕಾಲವನ್ನು ಬಳಸಬೇಕು. ಅಧಿಕಾರಿ, ಪತ್ರಕರ್ತರು ಜನರ ನಡುವೆ ಕುಳಿತು ಮಾತನಾಡಬೇಕು ಎಂದು ಶಾಸಕರಿಗೆ ವಾಟಾಳ್ ಸಲಹೆ ನೀಡಿದರು. ಚುನಾವಣೆ ವ್ಯಾಪಾರವಾಗಿದೆ ಎಂದು ವಾಟಾಳ್ ಅಸಮಾಧಾನ ವ್ಯಕ್ತಪಡಿಸಿದರು.

Related posts

ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರಾಗಿ ಆಸ್ಟ್ರೋ ಮೋಹನ್ ನೇಮಕ

ಕೆಎಂಸಿ ಉದ್ಯೋಗಿಯ ಮಾಂಗಲ್ಯ ಸರ ಎಗರಿಸಿದ ಆರೋಪಿ ಅರೆಸ್ಟ್

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಏಷ್ಯಾದ ಮೊದಲ ಮಾಮಾ ಅನ್ನಿ ಹೈ-ಫಿಡೆಲಿಟಿ ಬರ್ತಿಂಗ್ ಸಿಮ್ಯುಲೇಟರ್ ಪರಿಚಯ