ಆಯತಪ್ಪಿ ಬೋಟಿಗೆ ಬಿದ್ದ ಕಾರ್ಮಿಕ ಮೃತ್ಯು

ಮಲ್ಪೆ : ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟೊಂದರಲ್ಲಿ ಕಲಾಸಿಯಾಗಿ ಕಾರ್ಯ‌ನಿರ್ವಹಿಸುತಿದ್ದ ಕಾರ್ಮಿಕ ಆಯತಪ್ಪಿ ಬೋಟಿನಲ್ಲಿ ಬಿದ್ದು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ. ಬ್ರಹ್ಮಾವರದ ನರಸಿಂಹ (62) ಮೃತ ಕಾರ್ಮಿಕ.

ನರಸಿಂಹ ಎಂಬವರು ಮಾ.19ರಂದು ನವೀನ್ ಎಂಬವರ ಮಾಲಕತ್ವದ ವೀರಾಂಜನೇಯ ಪರ್ಸಿನ್ ಬೋಟಿನಲ್ಲಿ ಕೆಲಸ ಮಾಡುತಿದ್ದಾಗ ಬೆಳಗ್ಗೆ 6:30ರ ಸುಮಾರಿಗೆ ಆಯತಪ್ಪಿ ಬೋಟಿನಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ – ಸಚಿವರಿಗೆ ಸಂಸದ ಕೋಟ ಪತ್ರ