ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್

ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಠಾಣೆಯ ನೇಜಾರ್ ಎಂಬಲ್ಲಿ 2023ರ ನವೆಂಬರ್ 12ರಂದು ಪ್ರವೀಣ್ ಅರುಣ್ ಚೌಗುಲೆ ಒಂದೇ ಕುಟುಂಬದ ಐನಾಜ್, ಹಸೀನಾ, ಅಫ್ನಾನ್, ಅಸೀಮ್ ಎಂಬುವರ ಹತ್ಯೆ ನಡೆಸಿದ್ದ. ಸಾಂದರ್ಭಿಕ ಸಾಕ್ಷಿ, ಸಿಸಿಟಿವಿ ದೃಶ್ಯಾವಳಿ, ಆರೋಪಿಯ ಕೂದಲಿನ ಡಿಎನ್ಎ ಆಧರಿಸಿ ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ವಾದ ಮಾಡಿದರು. ವಿಚಾರಣೆ ನಡೆಸಿದ ನ್ಯಾ.ಎಂ.ಜಿ. ಉಮಾ ಅವರಿದ್ದ ಹೈಕೋರ್ಟ್ ಪೀಠ ಜಾಮೀನು ಅರ್ಜಿ ತಿರಸ್ಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಕಳೆದ ಫೆಬ್ರವರಿಯಲ್ಲಿ 15 ಸಂಪುಟಗಳ 2,202 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Related posts

ಮಲ್ಪೆ ಆದಿ ಉಡುಪಿ ಹೆದ್ದಾರಿ ಕಾಮಗಾರಿ ಅಧಿಕಾರಿಗಳೊಂದಿಗೆ ಶಾಸಕ ಯಶ್‌ಪಾಲ್ ಸುವರ್ಣ ಸಭೆ

ಮಂಗಳೂರಿನಲ್ಲಿ ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಕೇರಳದಿಂದ ಕೊಲ್ಲೂರಿಗೆ ಹೊರಟಿದ್ದ ಟಿಟಿ ವಾಹನ ಪಲ್ಟಿ – ಹಲವರಿಗೆ ಗಾಯ