ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್‌ ಆನಂದ್‌ ಸಿ.ಎಲ್‌. ವರ್ಗಾವಣೆ ಆದೇಶ ರದ್ದುಗೊಳಿಸಿದ ಸರಕಾರ

ಮಂಗಳೂರು : ಮಹಾನಗರ ಪಾಲಿಕೆಯ ಕಮಿಷನರ್‌ ಆನಂದ್‌ ಸಿ.ಎಲ್‌. ಅವರ ವರ್ಗಾವಣೆ ಆದೇಶವನ್ನು ಸರಕಾರ ರದ್ದುಗೊಳಿಸಿದೆ. ಅನಂದ್‌‌ರವರು 2023ರ ಜೂ. 28ರಂದು ಮಂಗಳೂರು ಪಾಲಿಕೆಯ ಕಮಿಷನರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಸರಕಾರ ಜುಲೈ 4ರಂದು ಹುದ್ದೆ ಗೊತ್ತುಪಡಿಸದೆ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಮೊದಲು ಮಂಗಳೂರಿನಲ್ಲಿ ಎ.ಸಿ ಯಾಗಿದ್ದ ಪ್ರಸ್ತುತ ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ರವಿಚಂದ್ರ ನಾಯಕ್‌ ಅವರನ್ನು ಮಹಾನಗರ ಪಾಲಿಕೆಯ ಕಮಿಷನರ್‌ ಸ್ಥಾನಕ್ಕೆ ನಿಯೋಜನೆ ಮಾಡಿತ್ತು.

ಅವಧಿಗೂ ಮುನ್ನವೇ ವರ್ಗಾವಣೆ ಆದೇಶ ಬಂದಿದೆ ಎನ್ನುವ ಕಾರಣಕ್ಕೆ ಆನಂದ್‌ ಸಿ.ಎಲ್‌. ಅವರು ಸರಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಆದೇಶವನ್ನು ರದ್ದುಪಡಿಸಲಾಗಿದೆ. ಆನಂದ್‌‌ರವರು ಮಂಗಳೂರು ಪಾಲಿಕೆಯ ಕಮಿಷನರ್‌ ಆಗಿ ಮುಂದುವರಿದಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ