ಸರಕಾರಿ ಬಸ್ ಬರುತ್ತದೆ ಎಂದು ಕಾದ ಊರವರು, ಸಾರ್ವಜನಿಕರು ಸುಸ್ತು!

ಉಡುಪಿ : ಕೊನೆಗೂ ತಮ್ಮ ಊರಿಗೆ ಸರಕಾರಿ ಬಸ್ಸು ಬರುತ್ತೆ ಅಂತ ಜನ ಖುಷಿಯಿಂದ ಕಾದದ್ದೇ ಬಂತು‌. ಉಡುಪಿ ಜಿಲ್ಲೆಯ ಪೆರಣಂಕಿಲ ಸಮೀಪದ ಹಂಗಾರಕಟ್ಟೆಯಲ್ಲಿ ನಿಗದಿಯಾದಂತೆ ಇಂದು ಸರ್ಕಾರಿ ಬಸ್ ಬರಬೇಕಿತ್ತು. ಜನರು ಹಾರ, ತುರಾಯಿಗಳೊಂದಿಗೆ ಬಸ್ಸನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ತಾಂತ್ರಿಕ ನೆಪವೊಡ್ಡಿ ನಿಗದಿಯಾಗಿದ್ದ ಬಸ್ಸು ಊರಿಗೆ ಬರಲೇ ಇಲ್ಲ. ಈ‌ ಮೂಲಕ ಸಾರ್ವಜನಿಕರಿಗೆ ಭಾರೀ ನಿರಾಸೆಯಾಗಿದೆ.

ಬ್ಯಾನರ್, ಬಂಟಿಂಗ್ಸ್‌ಗಳನ್ನು ಅಳವಡಿಸಿ, ಬಸ್ಸಿಗೆ ಕಟ್ಟಲು ಬಾಳೆ, ಶೃಂಗಾರ ಮಾಡಲು ಹೂವು ತೆಗೆದುಕೊಂಡು ಬಸ್ಸನ್ನು ಸ್ವಾಗತಿಸಲು ಮಾಡಿದ ಎಲ್ಲಾ ತಯಾರಿಗಳು ವೇಸ್ಟ್ ಆಗಿವೆ. ಈ ಮಾರ್ಗದಲ್ಲಿ ಬಸ್ ಸಂಚರಿಸದೆ ಇರುವುದು ಸಾರ್ವಜನಿಕರಿಗೆ ನಿರಾಸೆ ಉಂಟು ಮಾಡಿದೆ. ಗುಂಡುಪಾದೆಯಲ್ಲಿಯೂ ಸಾರ್ವಜನಿಕರು ಸರಕಾರಿ ಬಸ್ಸು ಸಂಚರಿಸುತ್ತದೆ ಎಂದು ತಿಳಿದು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದರು. ಅಲ್ಲಿ‌ ಕೂಡಾ ಪ್ರಯಾಣಿಕರಿಗೆ ನಿರಾಸೆಯಾಗಿದೆ. ತಾಂತ್ರಿಕ ದೋಷದಿಂದ ಬಸ್ಸು ಹೊರಡಲಿಲ್ಲ ಎಂದು ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ.

ಕೊರೋನಾ ನಂತರ ಇಲ್ಲಿ ಖಾಸಗಿ ಬಸ್ಸು ಸಂಚಾರ ಸ್ಥಗಿತಗೊಂಡಿತ್ತು. ಈ ಭಾಗದ ಶಾಲೆ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ಇತರ ಜನರು ಬಸ್ಸು ಬಾರದೆ ಹೈರಾಣಾಗಿದ್ದಾರೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ