ಮಂಗಳವಾರ ರಾತ್ರಿಯ ಹುಣ್ಣಿಮೆ ಬೆಳ್ಳಂಬೆಳದಿಂಗಳು ಹಾಲು ಚೆಲ್ಲಿದಂತೆ – ಡಾ. ಎ ಪಿ ಭಟ್

ಉಡುಪಿ : ಭಾದ್ರಪದದ ಹುಣ್ಣಿಮೆ ಈ ವರ್ಷದ ಸುಂದರ ಹುಣ್ಣಿಮೆ. ಇಂದೇ ಸೂಪರ್‌ಮೂನ್. ಈ ವರ್ಷದ ನಾಲ್ಕು ಸೂಪರ್ ಮೂನ್ ಹುಣ್ಣಿಮೆಗಳಲ್ಲಿ ಈ ತಿಂಗಳಿನ ಸೂಪರ್‌ಮೂನ್ ಹುಣ್ಣಿಮೆ ಭವ್ಯವಾದುದು. ಏಕೆಂದರೆ ಈ ಬಾರಿ, ಚಂದ್ರ ಭೂಮಿಗೆ ಅತೀ ಸಮೀಪ 3ಲಕ್ಷದ 57 ಸಾವಿರದ 485 ಕಿಮೀ‌ಗೆ ಬಂದು ದೊಡ್ಡದಾಗಿ ಹೆಚ್ಚಿನ ಪ್ರಭೆಯಲ್ಲಿ ಗೋಚರಿಸುವನು. ಇದು ಈ ವರ್ಷದಲ್ಲೇ ಅತೀ ಸಮೀಪ ದೂರ. ಹಾಗಾಗಿ ಮಂಗಳವಾರ ರಾತ್ರಿ ಹುಣ್ಣಿಮೆ ಬೆಳ್ಳಂಬೆಳದಿಂಗಳು ಹಾಲು ಚೆಲ್ಲಿದಂತೆ ಗೋಚರಿಸಬಹುದು ಎಂದು ಉಡುಪಿಯ ವಿಜ್ಞಾನಿ ಡಾ ಎ ಪಿ ಭಟ್ ಮಾಹಿತಿ ನೀಡಿದ್ದಾರೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ