ಹಬ್ಬಕ್ಕೆ ನೃತ್ಯದ ರಂಗು – ಕುಡುಬಿ ಸಮುದಾಯದ ಹೋಳಿ ಆಚರಣೆಯೇ ವಿಭಿನ್ನ

ಬ್ರಹ್ಮಾವರ : ನಾಡಿನಾದ್ಯಂತ ಹೋಳಿ ಹುಣ್ಣಿಮೆಯ ಸಂಭ್ರಮ ಮನೆಮಾಡಿದೆ. ಬಣ್ಣದ ಪುಡಿ, ರಂಗಿನ ನೀರು ಎರಚಿ ಜನ ಹೋಳಿ ಆಚರಣೆ ಮಾಡುತ್ತಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ಕುಡುಬಿ ಸಮುದಾಯ ಸಾಂಪ್ರದಾಯಕ ಹೋಳಿ ಆಚರಣೆಯಲ್ಲಿ ತೊಡಗಿಸಿಕೊಂಡಿದೆ. ವಿಭಿನ್ನ ವೇಷಭೂಷಣ, ಹೂವಿನ ಅಲಂಕಾರ ಮಾಡಿ ಗುಮ್ಟಿ ನುಡಿಸುತ್ತಾ ಹಾಡು ಹಾಡುತ್ತಾ ಸಾಂಪ್ರದಾಯಕ ಹೆಜ್ಜೆ ಹಾಕಿ ಕುಣಿಯುತ್ತಾರೆ. ಮಲ್ಲಿಕಾರ್ಜುನ ದೇವರ ಭಕ್ತರಾಗಿರುವ ಕುಡಬಿ ಸಮುದಾಯದ ನೂರಾರು ಜನ ಒಂದು ವಾರಗಳ ಕಾಲ ಕೂಡುಕಟ್ಟಿನ ಕುಟುಂಬದ ಮನೆಗಳಿಗೆ, ಆಹ್ವಾನ ನೀಡಿದ ಮನೆಗಳಿಗೆ ತೆರಳಿ ನೃತ್ಯ ಸೇವೆಯನ್ನು ನೀಡುತ್ತಿದ್ದಾರೆ.

Related posts

40 ಮರಾಠ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ

ವ್ಯಾಸರಾಜ ಶ್ರೀಗಳಿಂದ ಸಂಸ್ಥಾನ ಪೂಜೆ

ಮೀನು ವ್ಯಾಪಾರಿಗೆ 90 ಲಕ್ಷ ರೂ.ವಂಚನೆ – ದೂರು ದಾಖಲು