ಚಾಲಕನ ನಿಯಂತ್ರಣ ತಪ್ಪಿದ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ – ತಪ್ಪಿದ ಭಾರಿ ದುರಂತ

ಉಡುಪಿ : ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸಿಮೆಂಟ್ ರೆಡಿಮಿಕ್ಸ್ ಲಾರಿಯೊಂದು ಪಲ್ಟಿಯಾದ ಘಟನೆ ಅಂಬಾಗಿಲು – ಪೆರಂಪಳ್ಳಿ ಕ್ರಾಸ್‌ನಲ್ಲಿ ಸಂಭವಿಸಿದೆ.
ಚಾಲಕ ಅಪಾಯದಿಂದ ಪಾರಾಗಿದ್ದು, ಯಾವುದೇ ವಾಹನ ಇಲ್ಲದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ. ಸಿಮೆಂಟ್ ರೆಡಿಮಿಕ್ಸ್ ಲಾರಿ ಅಂಬಾಗಿಲಿನಿಂದ ಮಣಿಪಾಲದ ಕಡೆಗೆ ತೆರಳುತ್ತಿದ್ದು, ಪೆರಂಪಳ್ಳಿಗೆ ತೆರಳುವ ಕ್ರಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Related posts

ರಸ್ತೆ ದಾಟುತ್ತಿದ್ದ ಬಾಲಕನಿಗೆ ಅತೀ ವೇಗವಾಗಿ ಬಂದ ಕಾರು ಢಿಕ್ಕಿ; ಬಾಲಕ ಸಾವು

ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ ಆರೋಪ; ಕಾನ್‌ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು

ಬೈಂದೂರು ಮನೆಕಳ್ಳತನ ಪ್ರಕರಣ : ಮೂವರು ಆರೋಪಿಗಳ ಬಂಧನ