ಅರಣ್ಯ ಇಲಾಖೆಗೆ ತಲೆನೋವಾಗಿದ್ದ ಮೊಸಳೆ ಕೊನೆಗೂ ಸೆರೆ! ನಿಟ್ಟುಸಿರಿಟ್ಟ ಗ್ರಾಮಸ್ಥರು

ಬೈಂದೂರು : ಇಲ್ಲಿಗೆ ಸಮೀಪದ ನಾಗೂರಿನಲ್ಲಿ ಕಾಣಿಸಿಕೊಂಡು ಆತಂಕ ಉಂಟು ಮಾಡಿದ್ದ ಬೃಹತ್ ಗಾತ್ರದ ಮೊಸಳೆ ಕೊನೆಗೂ ಸೆರೆ ಸಿಕ್ಕಿದೆ. ಇಲ್ಲಿನ ತೋಟದ ಬಾವಿಯಲ್ಲಿದ್ದ ಮೊಸಳೆ ಸೆರೆಗೆ ನಿನ್ನೆಯಿಂದ ಅರಣ್ಯ ಇಲಾಖೆ ಹರಸಾಹಸ ಪಟ್ಟಿತ್ತು. ನಿನ್ನೆ ಇಡೀ ದಿನ ಮೊಸಳೆ ಹಿಡಿಯಲು ನಾನಾ ತಂತ್ರ ಉಪಯೋಗಿಸಿ ವಿಫಲಗೊಂಡಿದ್ದ ಇಲಾಖೆಗೆ ಇಂದು ಸ್ಥಳೀಯ ಮೀನುಗಾರರು ಸಾಥ್ ನೀಡಿದರು.

ಇವತ್ತು ಇಲ್ಲಿನ ಮೀನುಗಾರ ಮಂಜು ಖಾರ್ವಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಮೊಸಳೆ‌ಯನ್ನು ಬಲೆಗೆ ಕೆಡವಲಾಯಿತು.
ಬಲೆ ಇನ್ನಿತರ ಪರಿಕರ ಬಳಸಿ ಮೀನುಗಾರರು ಮೊಸಳೆಯನ್ನು ಸೆರೆ ಹಿಡಿದ ಬಳಿಕ ಅದರ ಆರೋಗ್ಯ ತಪಾಸಣೆ ನಡೆಸಿ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಯಿತು.

ಕೆಲವು ದಿನಗಳ ಹಿಂದೆ ಈ ಪರಿಸರದಲ್ಲಿ ಭಾರೀ ನೆರೆ ಕಾಣಿಸಿಕೊಂಡಿದ್ದು, ಮೊಸಳೆ ನದಿ ಅಥವಾ ಸಮುದ್ರದ ನೀರಿನೊಂದಿಗೆ ಕೊಚ್ಚಿಕೊಂಡು ಬಂದು ತೋಟದ ಬಾವಿ ಸೇರಿಕೊಂಡಿತ್ತು. ಮೊಸಳೆ ನೋಡಲು ಗ್ರಾಮದ ನೂರಾರು ಕುತೂಹಲಿಗರು ಆಗಮಿಸಿದ್ದು, ಅದನ್ನು ಸೆರೆಹಿಡಿಯುವುದರೊಂದಿಗೆ ಅವರೆಲ್ಲ ನಿಟ್ಟುಸಿರು ಬಿಟ್ಟರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ