ಸ್ನೇಹಿತರ ಜೊತೆ ಆಡುತ್ತಿದ್ದಾಗ ಶಾಂಭವಿ ಹೊಳೆಗೆ ಬಿದ್ದು ಬಾಲಕ ಮೃತ್ಯು

ಕಾರ್ಕಳ : ಶಾಂಭವಿ ಹೊಳೆಗೆ ಬಿದ್ದು ಬಾಲಕನೋರ್ವ ಸಾವನಪ್ಪಿದ ದುರ್ಘಟನೆ ಇರ್ವತ್ತೂರಿನಲ್ಲಿ ಸಂಭವಿಸಿದೆ. ಚರಣ್ ರಾಜ್ (15) ಮೃತ ಬಾಲಕ.

ಈತ ಸಾಣೂರು ಹೈಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸ್ನೇಹಿತರ ಜೊತೆ ಇರ್ವತ್ತೂರು ಗ್ರಾಮದ ಗೊಲ್ಲಿಂಡಿ ಎಂಬಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಶಾಂಭವಿ ಹೊಳೆಗೆ ಬಿದ್ದಿದ್ದಾನೆ. ತಕ್ಷಣವೇ ಸಾರ್ವಜನಿಕರು ನೀರಿನಿಂದ ಎತ್ತಿ ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷಿಸಿ ಚರಣ್‌ ರಾಜ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ