ಶಿರೂರು ದುರಂತಕ್ಕೆ ಕೇಂದ್ರದ ಬಿಜೆಪಿ ಸರಕಾರ ನೇರಹೊಣೆ – ಮೀನುಗಾರಿಕಾ ಸಚಿವ ಆರೋಪ

ಮಂಗಳೂರು : ಶಿರೂರು ದುರಂತಕ್ಕೆ ಐಆರ್‌ಬಿ ಹಾಗೂ ಕೇಂದ್ರದ ಬಿಜೆಪಿ ಸರಕಾರ ನೇರ ಹೊಣೆ. ಐಆರ್‌ಬಿ ಬಿಜೆಪಿ ಕಂಪೆನಿ ಎಂದು ಎಲ್ಲರಿಗೂ ಗೊತ್ತಿದೆ ಎಂದು ರಾಜ್ಯ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಆರೋಪ ಮಾಡಿದರು.

ಮಂಗಳೂರಿನಲ್ಲಿಂದು ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಏನು ಮಾಡಬೇಕು ಅದನ್ನು ಮಾಡಿದ್ದೇವೆ. ಸಿಎಂ, ಕಂದಾಯ ಸಚಿವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಐಆರ್‌ಬಿಗೆ 11 ವರ್ಷಗಳಿಂದ ಈ ರಸ್ತೆಯನ್ನು
ಪೂರ್ತಿ ಮಾಡಲಾಗಲಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ಈ ರೀತಿಯ ದುರಂತ ನಡೆದಿದೆ. ಸೆಂಟ್ರಲ್ ಟೀಮ್ ಬಂದು ಇಲ್ಲಿಯೇ ಕುಸಿಯುತ್ತದೆ ಅಂದರೂ ಏನೂ ಕ್ರಮ ಕೈಗೊಂಡಿಲ್ಲ. ಬೇರೆ ಬೇರೆ ರಾಜ್ಯದವರು ಸತ್ತಿದ್ದಾರೆ, ಅದರ ಬಗ್ಗೆ ಮಾತಾಡುವವರು ಯಾರು ಇಲ್ಲ. ಐಆರ್‌ಬಿ ಬಳಿ ಒಂದು ಹಿಟಾಚಿ ಕೂಡ ಇಲ್ಲ ಅವರ ಯೋಗ್ಯತೆಗೆ. ಅದನ್ನು ನಾವು ಬೇರೆ ಕಡೆಯಿಂದ ತರಿಸಿದ್ದೇವೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೇವೆ ಐಆರ್‌ಬಿ ಕಂಪನಿಯ ಮೇಲೆ ಎಫ್ಐಆರ್‌ ದಾಖಲಿಸಿದ್ದೇವೆ.‌ ಅರಣ್ಯ ಇಲಾಖೆಯಿಂದಲೂ ಎಫ್ಐಆರ್ ಆಗಿದೆ.‌ ಏನೇ ಮಾಡಿದ್ರೂ ಐಆರ್‌ಬಿ ಮೂಲ ಬಿಜೆಪಿ. ಅವರು ಅದನ್ನು ಹೊರತುಪಡಿಸಿ ರಾಜಕಾರಣ ಮಾಡುತ್ತಿದ್ದಾರೆ.‌ಮೊದಲು ಅದನ್ನು ಸರಿ ಮಾಡಲಿ ಎಂದರು.

ನಾವು ರಾಜಕಾರಣ ಮಾಡಲ್ಲ. ಪಾಪದವರಿಗೆ ಸಹಾಯ ಮಾಡಿದ್ದೇವೆ. ಅಲ್ಲಿನ ಸಂಸದರ ಬಗ್ಗೆ ಮಾತನಾಡಿದರೆ ಬೇಕಾದಷ್ಟಿದೆ. ಶಿರೂರು ಜಿಲ್ಲೆಯವರಾದ ಅವರು, ಮೊದಲು ಶಾಸಕರಾಗಿದ್ದವರು, ಮಂತ್ರಿಯಾಗಿದವರು. ಎನ್ಎಚ್‌ಎಐ ಹಾಗೂ ಐಆರ್‌ಬಿ ಯಾರಿಗೆ ಬರುತ್ತೆ ಅಂತ ಅವರಿಗೆ ಗೊತ್ತಿದೆ. ಎಷ್ಟೊಂದು ಮಂದಿ ಸಾಯುತ್ತಿದ್ದಾರೆಂಬುದು ಅವರಿಗೆ ಗೊತ್ತಿಲ್ವಾ?. ಬಿಜೆಪಿಯವರು ಯಾರು ಸಾಯುತ್ತಾರೆ ನೋಡುತ್ತಿರುತ್ತಾರೆ. ಅದರ ಮೇಲೆ ರಾಜಕಾರಣ ಮಾಡುತ್ತಿದ್ದಾರೆ.‌ ಶವದ ಮೇಲೆ ರಾಜಕಾರಣ ಮಾಡುವುದು ಬಹಳ ದಿನ ನಡೆಯಲ್ಲ, ಇದು ಒಳ್ಳೆಯದಲ್ಲ ಎಂದು ಹೇಳಿದರು.

Related posts

National Fame Award of India Books of Award – Sushanth Brahmavar

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ – ಸಚಿವರಿಗೆ ಸಂಸದ ಕೋಟ ಪತ್ರ