ಮನೆಯ ಹಿಂಬಾಗಿಲು ಒಡೆದು ನಗದು ಕಳವು

ಮಂಗಳೂರು : ನಗರದ ಬಿಜೈ ನ್ಯೂರೋಡ್ ಬಳಿಯ ಮನೆಯೊಂದರ ಹಿಂಬಾಗಿಲು ಒಡೆದು ಕಳವು ಕೃತ್ಯ ಎಸಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

ಮನೆಯೆಲ್ಲಾ ಜಾಲಾಡಿರುವ ಕಳ್ಳರು ಗಾಡ್ರೆಜ್ ಒಡೆದು ತಲಾಶ್ ನಡೆಸಿದ್ದಾರೆ. ಆದರೆ ಅವರಿಗೆ 5ಸಾವಿರ ರೂ. ನಗದು ಹಾಗೂ ಒಂದು ಸ್ಪೀಕರ್ ಮಾತ್ರ ಸಿಕ್ಕಿದ್ದು, ಅದನ್ನು ಕಳವುಗೈದು ಪರಾರಿಯಾಗಿದ್ದಾರೆ.

ಈ ಮನೆಯಲ್ಲಿ ಶೀನ ದೇವಾಡಿಗ(85) ಹಾಗೂ ಕಸ್ತೂರಿ (78) ಎಂಬ ವೃದ್ಧ ದಂಪತಿಗಳು ಮಾತ್ರ ವಾಸ್ತವ್ಯವಿದ್ದಾರೆ‌. ಆದರೆ ಶೀನ ದೇವಾಡಿಗ ಅವರಿಗೆ ಡೆಂಗ್ಯು ಕಾಣಿಸಿಕೊಂಡಿದ್ದರಿಂದ ಜೂನ್ 28ರಂದು ವೃದ್ಧದಂಪತಿ ಅಶೋಕನಗರದಲ್ಲಿರುವ ಪುತ್ರನ ಮನೆಗೆ ಹೋಗಿದ್ದರು. ಇಂದು ಮನೆಯನ್ನು ಕ್ಲೀನ್ ಮಾಡಲೆಂದು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ತಕ್ಷಣ ಉರ್ವ ಠಾಣಾ ಪೊಲೀಸರು ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಂಡ ಕೂಡಾ ಆಗಮಿಸಿ ಪರಿಶೀಲನೆ ನಡೆಸಿದೆ. ಸುರಕ್ಷತೆಯ ದೃಷ್ಟಿಯಿಂದ ಜೂನ್ 30ರಂದು ಮನೆಯಲ್ಲಿದ್ದ ಒಡವೆಗಳನ್ನು ಮನೆಯವರು ಕೊಂಡೊಯ್ದಿದ್ದ ಪರಿಣಾಮ ಹೆಚ್ಚಿನ ಕಳವು ನಡೆದಿಲ್ಲ‌. ಜೊತೆಗೆ ಗಾಡ್ರೆಜ್‌ನಲ್ಲಿದ್ದ 9,000 ರೂ. ಕಳ್ಳರ ಕೈಗೆ ಸಿಗದ ಕಾರಣ ಈ ನಗದು ಪತ್ತೆಯಾಗಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ