ಜೈಲಿನೊಳಗಡೆ ಮೊಬೈಲ್, ಸಿಗರೇಟ್ ಪೊಟ್ಟಣ ಎಸೆಯಲು ಯತ್ನಿಸಿದ ಆರೋಪಿ ಅರೆಸ್ಟ್

ಮಂಗಳೂರು : ನಗರದ ಜೈಲಿನೊಳಗಡೆ ಮೊಬೈಲ್ ಹಾಗೂ ಸಿಗರೆಟ್ ಎಸೆಯಲು ಯತ್ನಿಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜಿಮೊಗರು ನಿವಾಸಿ ಪ್ರಜ್ವಲ್(21) ಎಂಬಾತ ಬಂಧಿತ ಆರೋಪಿ.

ರವಿವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಆರೋಪಿ ಪ್ರಜ್ವಲ್ ಜೈಲು ಸಮೀಪದ ಕೆನರಾ ಕಾಲೇಜಿನ ಮುಖ್ಯದ್ವಾರದ ಒಳಗೆ ಪ್ರವೇಶಿಸಿದ್ದಾನೆ. ಅಲ್ಲಿಂದ ಕಾರಾಗೃಹದೊಳಗೆ ಕೆಂಪು ಬಣ್ಣದ ಗಮ್‌ಟೇಪ್‌ನಿಂದ ಸುತ್ತಿದ ಪೊಟ್ಟಣಗಳನ್ನು ಎಸೆಯಲು ಪ್ರಯತ್ನಿಸುತ್ತಿದ್ದ. ಇದನ್ನು ಗಮನಿಸಿದ ಗಸ್ತು ಕರ್ತವ್ಯದಲ್ಲಿದ್ದ ಕೆಎಸ್‌ಐಎಸ್‌ಎ – ಸಿಬ್ಬಂದಿ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ಪೊಟ್ಟಣದೊಳಗೆ ಎರಡು ಕೀ ಪ್ಯಾಡ್ ಮೊಬೈಲ್ ಮತ್ತು ಎರಡು ಪ್ಯಾಕೆಟ್ ಸಿಗರೇಟ್ ಇತ್ತು. ಪ್ರಜ್ವಲ್ ಈ ಹಿಂದೆ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟು ಕಾರಾಗೃಹದಲ್ಲಿದ್ದ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮುಸುಕುಧಾರಿಗಳಿಂದ ಎಟಿಎಂ ದರೋಡೆಗೆ ವಿಫಲ ಯತ್ನ : ಆರೋಪಿಗಳ ಪತ್ತೆಗೆ 3 ವಿಶೇಷ ತಂಡ ರಚನೆ

ಉದ್ಯಾವರದಲ್ಲಿ ಮುಸುಕುಧಾರಿಗಳಿಂದ ಎಟಿಎಂ ದರೋಡೆಗೆ ವಿಫಲ ಯತ್ನ : ಪೊಲೀಸರಿಂದ ತನಿಖೆ

ಕಾನೂನು ಕಾಯಬೇಕಾದವರೇ ಕೊಲ್ಲುತ್ತಿದ್ದಾರೆ – ಉದಯಗಿರಿ ಪ್ರಕರಣಕ್ಕೆ ಗೃಹ ಸಚಿವರ ವಿರುದ್ಧ ಕೋಟ ಕಿಡಿ