ಉಗ್ರ ದಾಳಿ – ಜಿಲ್ಲೆಯ ಪ್ರವಾಸಿಗರ ಮಾಹಿತಿಗಾಗಿ ವಿಪತ್ತು ನಿಯಂತ್ರಣ ದೂರವಾಣಿ ಸಂಖ್ಯೆಗೆ ಕರೆ ಮಾಡಲು ಮನವಿ

ಉಡುಪಿ : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ದಾಳಿಯಲ್ಲಿ ಕೆಲವು ಪ್ರವಾಸಿಗರು ಮೃತರಾಗಿದ್ದಾರೆ. ಹಲವರು ಗಾಯಗೊಂಡಿರುವ ಬಗ್ಗೆ ಮಾಹಿತಿ ಇದೆ.

ಉಡುಪಿ ಜಿಲ್ಲೆಯಿಂದ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿ ಮೇಲ್ಕಂಡ ಘಟನೆಯಲ್ಲಿ ಸಿಲುಕಿಕೊಂಡಿದಲ್ಲಿ ಅಂತಹವರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅಂತಹವರು ಕಂಡುಬಂದಲ್ಲಿ ಉಡುಪಿ ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 0820-2574802. ಅಥವಾ 1077ಗೆ ಕರೆ ಮಾಡಿ ಮಾಹಿತಿ ನೀಡಲು ಉಡುಪಿ ಜಿಲ್ಲಾಡಳಿತ ಕೋರಿದೆ.

Related posts

ಅನುಮಾನಾಸ್ಪದ ವ್ಯಕ್ತಿಗಳು, ಬೋಟ್‌ಗಳು ಕಂಡುಬಂದಲ್ಲಿ‌ ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚನೆ

ಮನೆಗೆ ನುಗ್ಗಿದ ಕಳ್ಳರು; ಹಣ ಹಾಗೂ ಚಿನ್ನಾಭರಣ ಕಳವುಗೈದು ಎಸ್ಕೇಪ್!

‘ಉಡುಪಿ ಸಂಜೀವಿನಿ’ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ