ಕಂಟೈನರ್ ಲಾರಿಗೆ ಟೆಂಪೋ ಟ್ರಾವೆಲ‌ರ್ ಢಿಕ್ಕಿ; 15 ಮಂದಿಗೆ ಗಾಯ

ಪಡುಬಿದ್ರಿ : ಪಡುಬಿದ್ರಿ ಪೆಟ್ರೋಲ್ ಪಂಪ್‌ ಬಳಿ ಟೆಂಪೋ ಟ್ರಾವೆಲರ್(ಟಿಟಿ) ವಾಹನವೊಂದು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಮಂಗಳೂರು ಏಕಮುಖ ರಸ್ತೆಯಲ್ಲಿ ಕಂಟೈನ‌ರ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿ ನಾಲ್ವರು ಮಕ್ಕಳ ಸಹಿತ ಕೇರಳ ಮೂಲದ ಸುಮಾರು 15 ಮಂದಿಗೆ ಗಾಯಗಳಾಗಿವೆ.

ಟಿಟಿ ಚಾಲಕ ಜಿತಿನ್ ಕೆ. ಪಿ. ಸಹಿತ ಬೇಬಿ ನಿಹಾಲ್ (3), ಮಾಸ್ಟರ್ ನಾವಿಕ್ (4), ಧನ್ವಿಷ್ (6), ಬೇಬಿ ಅಲಂಕೃತಾ (8) ಶೃತಿ (33), ರಮ್ಯಾ(43), ಐಶ್ವಯಾ (35), ಸುಮತಿ (54), ಮಾಳವಿಕಾ (28)ಶಾಂತಾ (56) ವಿನಿತ್ ,ಶರತ್ (34), ಅಶ್ರಫ್ (51), ರಂಜಿತ್ (38), ವಿನೀಷ್(38) ಗಾಯಗೊಂಡವರು. ಗಾಯಾಳುಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋವಾ ಪ್ರವಾಸಕ್ಕೆ ಹೋಗಿ ವಾಪಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಟೆಂಪೋ ಟ್ರಾವೆಲ‌ರ್ ಸಂಪೂರ್ಣ ಜಖಂಗೊಂಡಿದೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶಾಸಕ ಸುನಿಲ್ ಕುಮಾರ್ ಸಹೋದರ ನಿಧನ

ಸರಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರ ತೆರವು ಆದೇಶ ಖಂಡನೀಯ : ಯಶ್‌ಪಾಲ್ ಸುವರ್ಣ ಆಕ್ರೋಶ

ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಎನ್ ನಿಧನ; ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ