ವೃದ್ಧ ದಂಪತಿ ನೆರವಿಗೆ ಧಾವಿಸಿದ ತಹಶೀಲ್ದಾರ್ ಪ್ರತಿಭಾ

ಉಡುಪಿ : ಪಲಿಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದ ವೃದ್ಧ ದಂಪತಿ ನೆರವಿಗೆ ಕಾಪು ತಹಶೀಲ್ದಾರ್ ಬಂದಿದ್ದಾರೆ. ಈ ದಂಪತಿ ತಮ್ಮ ಮನೆಗೆ ತಲುಪಲು ಏಕೈಕ ದಾರಿಯಾಗಿರುವ ಶಿಥಿಲಗೊಂಡ ಕಾಲು ಸಂಕವನ್ನೇ ಅವಲಂಬಿಸಿದ್ದಾರೆ. ಇವರ ಈ ದುಸ್ಥಿತಿಯನ್ನು ವೀಕ್ಷಿಸಿ ತಹಶಿಲ್ದಾರ್ ಪ್ರತಿಭಾ ಹೊಸ ಸುರಕ್ಷಿತ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ಪ್ರತಿದಿನ ಈ ವೃದ್ದ ದಂಪತಿ ತಮ್ಮ ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಈ ಶಿಥಿಲ ಕಾಲು ಸಂಕದ ಮೇಲೆಯೇ ಬರಬೇಕು.
ಅಲ್ಲಾಡುತ್ತಾ ಇನ್ನೇನು ಮುರಿದು ಬೀಳುತ್ತದೆಯೇನೋ ಎನ್ನುವಂತಿರುವ ಈ ಮರದ ಸಣ್ಣ ಹಲಗೆಯ ಮೇಲೆಯೇ ವಸಂತಿ (70), ಭೋಜ ಸಾಲ್ಯಾನ್ (74) ಅವರು ನಡೆದಾಡಬೇಕಾದ ಪರಿಸ್ಥಿತಿ ಇದೆ. ದಿನಸಿ ತರಲು, ಹೊರಗಿನ ಜನರನ್ನು ಭೇಟಿ ಮಾಡಲು, ಪೇಟೆ ಬೀದಿಗೆ ಬರಲು, ಇನ್ಯಾವುದೇ ಕೆಲಸಕ್ಕೂ ಈ ಬೀಳುವಂತಿರುವ ಹಲಗೆಯ ಮೇಲೆಯೇ ಜೀವ ಕೈಲಿ ಹಿಡಿದುಕೊಂಡು ಹೋಗಬೇಕು. ಈ ಪರಿಸ್ಥಿತಿ ಗಮನಿಸಿದ ತಹಶೀಲ್ದಾರ್ ಸ್ವತಃ ಸ್ಥಳಕ್ಕೆ ಆಗಮಿಸಿ ಈ ಹಲಗೆಯ ಮೇಲೆ ನಡೆದಿದ್ದಾರೆ. ನಿಜಕ್ಕೂ ನನಗೇ ಭಯವಾಯಿತು ಎಂದಿದ್ದಾರೆ. ವೃದ್ಧರಿಗೆ ಓಡಾಡಲು, ಸುಭದ್ರ ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಸಂಬಂಧಪಟ್ಟ ಇಲಾಖೆ ಮತ್ತು ದಾನಿಗಳ ಸಹಕಾರದಿಂದ ಇದನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತೇನೆ ಎಂದು ತಹಶೀಲ್ದಾರ್ ಭರವಸೆ ನೀಡಿದ್ದಾರೆ.

Related posts

ಅರ್ಧ ಗಂಟೆಯ ಗೂಳಿಕಾಳಗ – ಬೆಚ್ಚಿ ಬಿದ್ದ ಜನ, ರೋಮಾಂಚನ…

ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ 25‌ನೇ ವಾರ್ಷಿಕ ದಿನ ಆಚರಣೆ ಮತ್ತು ಪ್ರಶಸ್ತಿ

ಶ್ರೀ ಕೃಷ್ಣಮಠದಲ್ಲಿ ಗೀತೋತ್ಸವದ ಅಂಗವಾಗಿ ಭಗವದ್ಗೀತಾ ಯಜ್ಞ ಸಂಪನ್ನ