ಚಿತ್ರಾಪುರ ಮಠದಲ್ಲಿ ನೂರಾರು ಮಂದಿಗೆ ತಪ್ತ ಮುದ್ರಧಾರಣೆ

ಮಂಗಳೂರು : ನಗರದ ಚಿತ್ರಾಪುರ ಮಠದಲ್ಲಿ ಶಯನಿ ಏಕಾದಶಿಯ ಅಂಗವಾಗಿ ಸಂಪ್ರದಾಯದಂತೆ ನೂರಾರು ಭಕ್ತರಿಗೆ ತಪ್ತ ಮುದ್ರಧಾರಣೆ ನಡೆಯಿತು.

ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಮಠಕ್ಕೆ ಆಗಮಿಸಿರುವ ಭಕ್ತರಿಗೆ ತಪ್ತ ಮುದ್ರಧಾರಣೆ ಮಾಡಿದರು. ಬೆಳಗ್ಗಿನಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ತೋಳು, ಎದೆ, ಹೊಟ್ಟೆಯ ಭಾಗಕ್ಕೆ ಶಂಖ, ಚಕ್ರದ ಮುದ್ರೆ ಹಾರಿಸಿಕೊಂಡರು. ಆಷಾಢಮಾಸದ ಪ್ರಥಮ ಏಕಾದಶಿ ಶ್ರೀಮನ್ನಾರಾಯಣ ಯೋಗ ನಿದ್ರೆಗೆ ಜಾರುವ ದಿನ. ಆದ್ದರಿಂದ ಆ ದಿನ ಮಾಧ್ವ ಸಂಪ್ರದಾಯದಲ್ಲಿ ತಪ್ತ ಮುದ್ರಾಧಾರಣೆಗೆ ವಿಶೇಷ ಮಹತ್ವ ಪಡೆದಿದೆ.

ದೇಹ ಹಾಗೂ ಮನಸ್ಸಿನ ಶುದ್ಧೀಕರಣಕ್ಕೆ ತಪ್ತ ಮುದ್ರಧಾರಣೆ ಮಾಡಲಾಗಾಗುತ್ತದೆ‌. ತಪ್ತ ಮುದ್ರಧಾರಣೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವೈಜ್ಞಾನಿಕವಾಗಿಯೂ ತಪ್ತಮುದ್ರಧಾರಣೆ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಮಠಾಧೀಶರ ಮೂಲಕ ತಪ್ತಧಾರಣೆ ಮಾಡಲಾಗುತ್ತದೆ. ವಿಷ್ಣುವಿನ ಕರದಾಯುಧಗಳಾದ ಶಂಖ ಮತ್ತು ಚಕ್ರದ ತಾಮ್ರದ ಅಚ್ಚುಗಳನ್ನು ಬಿಸಿಯಿಂದ ಕಾಯಿಸಿ ಮೈಮೇಲೆ ಧರಿಸಿದ್ದಲ್ಲಿ ಮಳೆಗಾಲದಲ್ಲಿ ರೋಗರುಜಿನಗಳು ಬರುವುದಿಲ್ಲ ಎಂಬ ನಂಬಿಕೆಯಿದೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಡಿದು ಬಿಸಾಡಿದ ಬಾಳೆ ದಿಂಡಿನಲ್ಲಿ ಚಿಗುರುಡೆದ ಬಾಳೆಗೊನೆ

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು