ಸ್ಕೂಟರ್‌ಗೆ ಟ್ಯಾಂಕರ್ ಡಿಕ್ಕಿ – ಪತ್ನಿ ಸಾವು, ಪತಿ ಪಾರು

ಮಂಗಳೂರು : ನಗರದ ಕೂಳೂರಿನ ಸೇತುವೆ ಮೇಲೆ ಟ್ಯಾಂಕರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಹಸವಾರೆ ರಸ್ತೆಗೆ ಬಿದ್ದು ಟ್ಯಾಂಕರ್ ಚಕ್ರ ತಲೆ ಮೇಲೆಯೇ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ‌. ಸ್ಕೂಟರ್ ಸವಾರಿ ಮಾಡುತ್ತಿದ್ದ ಅವರ ಪತಿ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ‌.

ಶಕೀಲ್ ಸುವರ್ಣ ಎಂಬವರ ಪತ್ನಿ ಲಾವಣ್ಯ(27) ಮೃತಪಟ್ಟವರು.

ಶಕೀಲ್ ಸುವರ್ಣ ಅವರು ಸ್ಕೂಟರಿನಲ್ಲಿ ಪತ್ನಿ ಲಾವಣ್ಯರೊಂದಿಗೆ ಪಣಂಬೂರಿನಿಂದ ಕಾವೂರು ಕಡೆಗೆ ಸಂಚರಿಸುತ್ತಿದ್ದರು. ಸಂಜೆ 4ರ ಸುಮಾರಿಗೆ ಸ್ಕೂಟರ್‌ನಲ್ಲಿ ಕೂಳೂರು ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ಕಂಟೈನರ್ ಲಾರಿಯನ್ನು ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಲಭಾಗದಿಂದ ಏಕಾಏಕಿ ಎಡಕ್ಕೆ ಚಲಾಯಿಸಿದ್ದಾನೆ. ಈ ವೇಳೆ ರಸ್ತೆ ಎಡಬದಿಯಲ್ಲಿ ಸಂಚರಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಯಾದ ಪರಿಣಾಮ ಶಕೀಲ್ ಸುವರ್ಣ ಮತ್ತು ಲಾವಣ್ಯರವರು ಸ್ಕೂಟರ್ ಸಹಿತ ರಸ್ತೆಗೆ ಬಿದ್ದಿದ್ದಾರೆ.

ರಸ್ತೆಗೆ ಬಿದ್ದ ರಭಸಕ್ಕೆ ಲಾರಿಯ ಎಡಭಾಗದ ಹಿಂಭಾಗದ ಚಕ್ರ ಲಾವಣ್ಯರವರ ತಲೆಯ ಮೇಲೆ ಹರಿದು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಶಕೀಲ್ ಸುವರ್ಣ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ