ತನಿಕೋಡ್ ಗೇಟ್‌ ಟು ಎಸ್‌.ಕೆ. ಬಾರ್ಡರ್‌ – ಭಾರೀ ವಾಹನಗಳ ಸಂಚಾರ ನಿಷೇಧಿಸಿ ಡಿ.ಸಿ ಆದೇಶ

ಉಡುಪಿ : ರಾ.ಹೆ. 169ರ ಮಾಳದಿಂದ ತನಿಕೋಡ್ ಗೇಟ್‌ ಮೂಲಕ ಎಸ್‌.ಕೆ. ಬಾರ್ಡರ್‌ವರೆಗೆ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಆದೇಶಿಸಿದ್ದಾರೆ.

ಈ ಮಾರ್ಗದ ಕೊರ್ಕನಹಳ್ಳ, ಗುಲ್ಗುಂಜಿ ಮನೆ ಸಮೀಪದ ಸೇತುವೆ ಶಿಥಿಲಾವಸ್ಥೆಯಲ್ಲಿರುವುದರಿಂದ ಘನ ವಾಹನ ಸಂಚಾರ ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಅನುಷ್ಠಾನಗೊಳಿಸಿ ಈ ರಸ್ತೆಯಲ್ಲಿ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು ಸಹ ಸಂಚಾರ ಮಾಡುವುದರಿಂದ ತನಿಕೋಡ್‌ ಗೇಟ್‌ನಿಂದ ಎಸ್‌.ಕೆ. ಬಾರ್ಡರ್‌ವರೆಗೆ ಅಧಿಕ ಭಾರದ ಸರಕು ಸಾಗಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿದೆ.

ಚಿಕ್ಕಮಗಳೂರಿನಿಂದ ಬರುವ ಭಾರೀ ವಾಹನಗಳು ಬಾಳೆ ಹೊನ್ನೂರು-ಮಾಗುಂಡಿ-ಕಳಸ- ಕುದುರೆಮುಖ-ಎಸ್‌.ಕೆ. ಬಾರ್ಡರ್‌ ಮಾರ್ಗವಾಗಿ ಹಾಗೂ ನರಸಿಂಹರಾಜಪುರ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ-ಜಯಪುರ- ಬಾಳೆಹೊಳೆ-ಕಳಸ-ಕುದುರೆಮುಖ-ಎಸ್‌.ಕೆ.ಬಾರ್ಡರ್‌ ಮಾರ್ಗವಾಗಿ ಸಂಚರಿಸುವಂತೆ ಡಿಸಿ ಕಚೇರಿ ಪ್ರಕಟನೆ ತಿಳಿಸಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ