Viral Video

ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷದ ವಿಡಿಯೋ ವೈರಲ್

ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ನವರಾತ್ರಿಯ ಹಿನ್ನೆಲೆಯಲ್ಲಿ ವೇಷಧಾರಿಗಳಿಬ್ಬರು ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷಧರಿಸಿದ್ದು, ಇದೀಗ ಈ ವೇಷ ಸಾಮಾಜಿಕ ಜಾಲತಾಣದಲ್ಲಿ ಭಾರೀ‌ ವೈರಲ್ ಆಗಿದೆ. ವಿಡಿಯೋ ತುಣುಕಿನಲ್ಲಿ ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷ…

Read more

ರೇಸ್‌ನಲ್ಲಿ ಬೈಕ್ ಪಲ್ಟಿ – ರೇಸರ್ ಬೀಳುತ್ತಿರುವ ಭಯಾನಕ ವೀಡಿಯೋ ವೈರಲ್

ಬೆಳ್ತಂಗಡಿ : ಬೈಕ್ ರೇಸ್‌ನಲ್ಲಿ ಬೈಕೊಂದು ಪಲ್ಟಿಯಾಗಿ ರೇಸರ್ ಬೈಕ್‌ ಮೇಲೆಯೇ ಬೀಳುವ ವೀಡಿಯೋವೊಂದು ವೈರಲ್ ಆಗಿದೆ. ಕಾವಳಕಟ್ಟೆ ನಿವಾಸಿ ನೌಶಾದ್ (23) ಗಾಯಗೊಂಡ ರೇಸರ್. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳ್ಳಮಂಜದಲ್ಲಿ ಸೋಮವಾರ ಬೈಕ್ ರೇಸ್ ನಡೆದಿತ್ತು. ಫಿಟ್ಟರ್…

Read more

ತಿರುಪತಿಗೆ ಹೊರಟ ಯುವಕರ ತಂಡದಿಂದ ಮೃತ ಕೋತಿಯ ಅಂತ್ಯ ಸಂಸ್ಕಾರ

ತಿರುಪತಿಗೆ ಹೊರಟಿದ್ದ ಯುವಕರ ತಂಡವೊಂದು ಮೃತ ಕೋತಿಯೊಂದರ ಅಂತ್ಯ ಸಂಸ್ಕಾರ ನಡೆಸಿದೆ. ಸಾಸ್ತಾನದಿಂದ ತಿರುಪತಿಗೆ ನಡೆಸಿಕೊಂಡು ‌ಹೋಗುತ್ತಿದ್ದ ಲಕ್ಷ್ಮೀನಾರಾಯಣ ರಾವ್ ನೇತೃತ್ವದ ಯುವಕರ ಭಜನಾ ತಂಡಕ್ಕೆ ದಾರಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟ ಕೋತಿಯ ಕಳೆಬರಹ‌ ಕಂಡಿದೆ. ಕೂಡಲೇ ಕೋತಿಯ ಮೃತದೇಹವನ್ನ…

Read more

ಮನೆಗೆ ಬಂದ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿಯುವ ಧೈರ್ಯ ತೋರಿದ ಮಹಿಳೆ – ವೀಡಿಯೋ ವೈರಲ್

ಮಂಗಳೂರು : ನಗರದ ಡೊಂಗರಕೇರಿಯಲ್ಲಿರುವ ಮನೆಯೊಂದಕ್ಕೆ ಬಂದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಪಕ್ಕದಮನೆಯ ಮಹಿಳೆಯೊಬ್ಬರು ಹಿಡಿಯುವ ಧೈರ್ಯ ತೋರಿದ್ದಾರೆ. ಡೊಂಗರಕೇರಿಯ ಬಾಲಕೃಷ್ಣ ನಾಯಕ್ ಎಂಬವರ ಮನೆಯಲ್ಲಿರುವ ಹಳೆಯ ಹಟ್ಟಿಯಲ್ಲಿ ಮಂಗಳವಾರ ರಾತ್ರಿ 9ಗಂಟೆ ಸುಮಾರಿಗೆ ಈ ಹೆಬ್ಬಾವು ಪತ್ತೆಯಾಗಿತ್ತು. 9-10 ಅಡಿ…

Read more

ಕಾಲೇಜು ವಿದ್ಯಾರ್ಥಿಗಳಿಂದ ನಡುರಸ್ತೆಯಲ್ಲೇ ಹೊಡೆದಾಟ – ವೀಡಿಯೋ ವೈರಲ್

ಮಂಗಳೂರು : ವಿದ್ಯಾರ್ಥಿಗಳ ಗುಂಪೊಂದು ನಡುರಸ್ತೆಯಲ್ಲಿಯೇ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಪ್ರತಿಷ್ಠಿತ ಅಲೋಶಿಯಸ್ ಕಾಲೇಜು ಬಳಿ ನಡೆದಿದೆ. ಕಾಲೇಜು ಗೇಟ್ ಮುಂಭಾಗದ ರಸ್ತೆಯಲ್ಲಿ ಎರಡು ಪ್ರತ್ಯೇಕ ಬಣ್ಣದ ಯುನಿಫಾರಂ ಧರಿಸಿರುವ ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಡೆದಾಟ ನಡೆದಿದೆ. ಕಾಲೇಜು ಬಿಟ್ಟ…

Read more

ವಿದ್ಯಾರ್ಥಿನಿಗೆ ಎದೆನೋವು – ಬಸ್ಸನ್ನೆ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿದ ಚಾಲಕ ನಿರ್ವಾಹಕ

ಮಂಗಳೂರು : ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಹಠಾತ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್ ಚಾಲಕ ಮತ್ತು‌ ನಿರ್ವಾಹಕ ಬಸ್ ಅನ್ನು ನಿಗದಿತ ರೂಟ್‌ನಲ್ಲಿ ಎಲ್ಲಿಯೂ ನಿಲ್ಲಿಸದೆ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿದ ಘಟನೆ ಮಂಗಳವಾರ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ…

Read more

ನಾಯಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿ ಎಳೆದೊಯ್ದ ವ್ಯಕ್ತಿ

ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಅಸಾಮಿ ಒಬ್ಬನು ದ್ವಿಚಕ್ರ ವಾಹನಕ್ಕೆ ನಾಯಿಯ ಕೊರಳಿಗೆ ಸರಪಳಿ ಬಿಗಿದು ಎಳೆದೊಯ್ದ ಘಟನೆ ನಡೆದಿದೆ. ಸ್ಕೂಟರ್‌ನ ಸೀಟಿಗೆ ನಾಯಿಯನ್ನು ಕಟ್ಟಿ, ಅಸಾಮಿ ವಿಕೃತಿಯ ಮೆರೆದಿದ್ದಾನೆ. ಈ…

Read more

ಈ ತರಹ ಓಡಾಡುತ್ತಿದ್ದರೆ ರಜೆ ಕೊಡಲ್ಲ – ಮಕ್ಕಳಿಗೆ ಡಿಸಿ ಗದರಿದ ವೀಡಿಯೋ ವೈರಲ್

ಮಂಗಳೂರು : ಈ ತರಹ ಓಡಾಡುತ್ತಿದ್ದರೆ ರಜೆ ಕೊಡುವುದಿಲ್ಲ. ಮಳೆಗೆ ಓಡಾಡಬಾರದು ಎಂದು ಮಕ್ಕಳ ಗುಂಪೊಂದಕ್ಕೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗದರಿದ ವೀಡಿಯೋವೊಂದು ವೈರಲ್ ಆಗುತ್ತಿದೆ. ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ರವರು ಜಿಲ್ಲಾ ಎಸ್ಪಿ, ಜಿಪಂ ಸಿಇಒರೊಂದಿಗೆ ನಿನ್ನೆ ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪ…

Read more

ಸೇತುವೆ ಮೇಲಿನಿಂದ ನೇತ್ರಾವತಿ ನದಿಗೆ ಹಾರಿ ಹುಡುಗರ ಹುಚ್ಚಾಟ – ಪ್ರವಾಹದಲ್ಲಿ ಈಜುವ ದುಸ್ಸಾಹಸ!

ಬಂಟ್ವಾಳ : ಪಾಣೆಮಂಗಳೂರು ಸೇತುವೆ ಮೇಲಿನಿಂದ ನೇತ್ರಾವತಿ ನದಿಗೆ ಹಾರಿ ಹುಡುಗರ ಗುಂಪೊಂದು ಹುಚ್ಚಾಟ ಮೆರೆಯುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಹತ್ತಾರು ಅಡಿ ಮೇಲಿನಿಂದ ಅಪಾಯಕಾರಿ ರೀತಿಯಲ್ಲಿ ನದಿಗೆ ಧುಮುಕುತ್ತಿರುವ ಹುಡುಗರು, ಪ್ರವಾಹಕ್ಕೆದುರಾಗಿ ಈಜುವ ಸಾಹಸ ಮಾಡುತ್ತಿದ್ದಾರೆ. ನೇತ್ರಾವತಿ ನದಿಯಲ್ಲಿ ಅಪಾಯದ…

Read more

ಇಲ್ಲಿ ಹೆಣ ಸಾಗಿಸಲು ಹೆಣಗಾಟ – ಸಂಪರ್ಕ ರಸ್ತೆಯಿಲ್ಲದೆ ಪರದಾಟ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಂಚಿನಡ್ಕ – ಕಾಜಲ ಎಂಬಲ್ಲಿ ಸರಿಯಾದ ಸಂಪರ್ಕ ರಸ್ತೆಯ ವ್ಯವಸ್ಥೆಯಿಲ್ಲದೆ ಸ್ಥಳೀಯರು ಹೆಣ ಸಾಗಿಸಲು ಹೆಣಗಾಟ ನಡೆಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ದ.ಕ.ಜಿಲ್ಲೆಯ ಬೆಂಚಿನಡ್ಕ – ಕಾಜಲವು ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ ಗಡಿಭಾಗ.…

Read more