Udupi

ರಾಮ ನಿರ್ಯಾಣದ ಪ್ರವಚನಗೈಯುತ್ತಲೇ ಮೋಕ್ಷಯಾನ ಕೈಗೊಂಡ ವಿದ್ವಾಂಸ

ಉಡುಪಿ : ನಿನ್ನೆ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರ ದಿವ್ಯಾನುಗ್ರಹದೊಂದಿಗೆ ನಡೆಯುತ್ತಿದ್ದ ಸರಣಿ ಪ್ರವಚನ ಮಾಲಿಕೆಯಲ್ಲಿ ಶ್ರೀರಾಮ ನಿರ್ಯಣದ ವಿಷಯದಲ್ಲಿ ಪ್ರವಚನಗೈದ ಬಳಿಕ ಅಲ್ಲೇ ಕುಸಿದು ಅಸ್ವಸ್ಥಗೊಂಡಿದ್ದ ದ್ವೈತ ಸಿದ್ಧಾಂತ ಮೇರು ವಿದ್ವಾಂಸರೂ, ಪ್ರಚನಕಾರರೂ ಲೇಖಕರೂ ಕೃಷ್ಣ ಮಠ…

Read more

ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಖಿಲ್ ಹೆಗ್ಡೆ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆದೇಶ

ಉಡುಪಿ : ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ನ್ಯಾಯವಾದಿ ಅಖಿಲ್ ಬಿ.ಹೆಗ್ಡೆ ಮಕ್ಕಳ ವಿರುದ್ಧ ಪ್ರಕರಣಗಳನ್ನು ತೆಗೆದುಕೊಳ್ಳುತ್ತಿರುವ ಕುರಿತು ಕಾನೂನು ರೀತಿಯ ಕ್ರಮಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ಸೂಚನೆ…

Read more

ಬೈಕ್ ಏರಿದ ಪೇಜಾವರ ಶ್ರೀ

ರಾಯಚೂರು : ಗೋ ಪ್ರಿಯರಾದ ಶ್ರೀಗಳು ಹುಲ್ಲು ಕಿತ್ತರು, ಹಲಸಿನಹಣ್ಣು ಕೀಳಲು ಮರವೇರಿ ಸುದ್ದಿಯಾದರು. ಬೆಕ್ಕಿನ ರಕ್ಷಣೆಗೆ ಬಾವಿಗಿಳಿದರು, ಗುದ್ದಲಿ ಹಿಡಿದು ಮಣ್ಣು ಅಗೆದರು, ಬುಟ್ಟಿಯಲ್ಲಿ ಗೊಬ್ಬರ ಹೊತ್ತರು, ಹೀಗೆ ಸದಾ ವಿಶಿಷ್ಟ ವಿದ್ಯಮಾನಗಳಿಂದ ಸುದ್ದಿಯಲ್ಲಿರುವ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ…

Read more

ಗೂಗಲ್ ಕ್ಲೌಡ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾದ ಉಡುಪಿ ಮೂಲದ ರಾಜ್‌ ಪೈ

ಮಣಿಪಾಲ ಪೈ ಕುಟುಂಬದ ಸದಸ್ಯ ರಾಜ್‌ ಪೈ (ರಜನೀಶ್‌ ಪೈ) ಅವರು ಅಮೇರಿಕದ ಪ್ರತಿಷ್ಠಿತ ಗೂಗಲ್‌ ಕ್ಲೌಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್‌ ಪೈ ಅವರು ಕ್ಲೌಡ್ ಕೃತಕ ಬುದ್ಧಿಮತ್ತೆ (ಎಐ) ತಂಡದ ನಿರ್ವಹಣೆಯನ್ನು ನೋಡಿಕೊಳ್ಳುವರು. ಗೂಗಲ್‌ ಸಂಸ್ಥೆ ಕ್ಲೌಡ್ ವ್ಯವಹಾರಕ್ಕೆ…

Read more

ಡಿವೈಡರ್ ಕಲ್ಲುಗಳಿಗೆ ಢಿಕ್ಕಿಯಾಗಿ ಕಾರು ಪಲ್ಟಿ – ನಾಲ್ವರಿಗೆ ತೀವ್ರ ಗಾಯ

ಉಡುಪಿ : ಎರಡೇ ದಿನ ಅಂತರದಲ್ಲಿ ಉಡುಪಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಡುಪಿ ಮಣಿಪಾಲ ಮಧ್ಯದ ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ತಡರಾತ್ರಿ ಸಂಭವಿಸಿದೆ. ಮಣಿಪಾಲದಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಇಂದ್ರಾಳಿಯಲ್ಲಿ ರಸ್ತೆ…

Read more

ರೈಲಿನಿಂದ ಬಿದ್ದು ಅಪರಿಚಿತ ಮಹಿಳೆ ಸಾವು

ಕಾಪು‌ : ಉದ್ಯಾವರ ಪಾಪನಾಶಿನಿ ಹೊಳೆಯ ರೈಲ್ವೇ ಟ್ರ್ಯಾಕ್‌ನ ಕಂಬದ ನಡುವೆ ರೈಲಿನಿಂದ ಬಿದ್ದು ಅಪರಿಚಿತ ಮಹಿಳೆಯೋರ್ವಳು ಮೃತ ಪಟ್ಟ ಘಟನೆ ಸಂಭವಿಸಿದೆ. ಮಹಿಳೆಯ ಮೃತ ದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು ಢಿಕ್ಕಿಯ ರಭಸಕ್ಕೆ ರೈಲ್ವೇ ಟ್ರ್ಯಾಕ್ ಮತ್ತು ಹೊಳೆಗೆ ಹಾಕಿರುವ ಬೃಹತ್…

Read more

ನಗರ‌ಸಭೆ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಶಾಸಕ ಯಶ್‌ಪಾಲ್ ಸುವರ್ಣ ಸಭೆ

ಉಡುಪಿ : ನಗರಸಭೆಯ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ತುರ್ತು ವಿಲೇವಾರಿಗೆ ಆದ್ಯತೆ ನೀಡುವಂತೆ ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರಸಭೆಯಲ್ಲಿ ಇ – ಖಾತಾ ಅರ್ಜಿಗಳ ಪ್ರಕ್ರಿಯೆ ತೀವ್ರ ವಿಳಂಬವಾಗುತ್ತಿದ್ದು,…

Read more

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ “ವಿಶ್ವ ರಕ್ತದಾನಿಗಳ ದಿನ 2024” ಆಚರಣೆ

ಮಣಿಪಾಲ : “ಸುರಕ್ಷಿತ ರಕ್ತ ಮತ್ತು ರಕ್ತ ವರ್ಗಾವಣೆಗಾಗಿ ಉತ್ಪನ್ನಗಳ” ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರಕ್ತ ಸಂಬಂಧಿತ ಉತ್ಪನ್ನಗಳು ಜಗತ್ತಿನಾದ್ಯಂತ ಸಾರ್ವಜನಿಕ ಆರೋಗ್ಯಕ್ಕೆ ನಿರ್ಣಾಯಕವಾಗಿವೆ.…

Read more

ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಾತಿ ಒದಗಿಸದೇ ಬಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರಕಾರ : ಯಶ್‌ಪಾಲ್ ಸುವರ್ಣ ಆಕ್ರೋಶ

ಉಡುಪಿ : ನೂತನ ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ಆರಂಭಗೊಂಡು 15 ದಿನಗಳು ಕಳೆದರೂ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ರಾಜ್ಯ ಸರ್ಕಾರ ಬಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ರಾಜ್ಯ…

Read more

ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ, ಗೋ ಕಳ್ಳತನ ಮತ್ತು ಗೋ ಹತ್ಯೆ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಿ : ದಿನೇಶ್ ಮೆಂಡನ್

ಉಡುಪಿ : ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ಜಾರಿಯಲ್ಲಿದ್ದು ಅದರ ಪ್ರಕಾರ ಕುರ್ಬಾನಿಗೆ (ಯಾವುದೇ ರೀತಿಯ ಹತ್ಯೆ) ನಿಷೇಧವಿದೆ. ಹಾಗೂ ಕುರ್ಬಾನಿಗೆ ಜಾನುವಾರು ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿದೆ.…

Read more