Udupi

ಇಂಡಿಯಾ ಸ್ವೀಟ್ ಹೌಸ್‌ನ 31ನೇ ಮಳಿಗೆ ಕೃಷ್ಣನೂರಿನಲ್ಲಿ ಶುಭಾರಂಭ

ಉಡುಪಿ : ಇಂಡಿಯಾ ಸ್ವೀಟ್ ಹೌಸ್ 31ನೇ ಮಳಿಗೆಯನ್ನು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಶುಕ್ರವಾರ ಕೃಷ್ಣನೂರು ಉಡುಪಿಯಲ್ಲಿ ಉದ್ಘಾಟಿಸಿದರು. ನಾವು ಊಟ ಮಾಡುವುದು ಮುಖ್ಯವಲ್ಲ, ಊಟ ಮಾಡಿದ್ದನ್ನು ಜೀರ್ಣಿಸಿಕೊಳ್ಳುವುದು ಮುಖ್ಯ. ತಿನ್ನುವಿಕೆ ಅಜೀರ್ಣ ಆಗದ ರೀತಿಯಲ್ಲಿ ಇರಬೇಕು. ಹಿರಿಯರು…

Read more

ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಭೋವಿ ಜನಾಂಗದಿಂದ ಧರಣಿ

ಉಡುಪಿ : ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಭೋವಿ ಸಮಾಜ ಸೇವಾ ಸಂಘದ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕರ್ನಾಟಕ ರಾಜ್ಯ ಮೂಲ ಭೋವಿ ಜನಾಂಗದವರು ಸರಕಾರದ…

Read more

ಜಿಲ್ಲೆಯಾದ್ಯಂತ ನಾಗರಪಂಚಮಿ ಸಂಭ್ರಮ : ಆಸ್ತಿಕರಿಂದ ನಾಗಬನಗಳಲ್ಲಿ ಪೂಜೆ ಸಲ್ಲಿಕೆ

ಉಡುಪಿ : ಜಿಲ್ಲೆಯಾದ್ಯಂತ ಇಂದು ಪಂಚಮಿ ಹಬ್ಬವನ್ನು ಭಕ್ತಿ–ಭಾವದಿಂದ ಆಚರಿಸಲಾಯಿತು. ಬೆಳಿಗ್ಗೆಯೇ ನಾಗಬನಗಳಿಗೆ ತೆರಳಿದ ಜನರು ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಕಂಡುಬಂತು. ನಾಗರ ಪಂಚಮಿಯ ಅಂಗವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಉಡುಪಿಯ ಕೃಷ್ಣಮಠ, ಕಡೆಕಾಡಿನ…

Read more

ಇಲಿಜ್ವರಕ್ಕೆ ಪರ್ಕಳದ ವ್ಯಕ್ತಿ ಸುಬ್ರಹ್ಮಣ್ಯ ನಾಯ್ಕ್ ಮೃತ್ಯು

ಮಣಿಪಾಲ : ಪರ್ಕಳ ವಿಠಲವಾಡಿ ನಿವಾಸಿ. ದಿ. ಭುಜಂಗ ನಾಯ್ಕ್ ಅವರ ಮಗ ಸುಬ್ರಹ್ಮಣ್ಯ ನಾಯ್ಕ್ ಇಲಿಜ್ವರಕ್ಕೆ ಬಲಿಯಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಮೊದಲು ಅವರಿಗೆ ಜ್ವರ ಕಂಡುಬಂದಿತ್ತು. ನಂತರ ಆಸ್ಪತ್ರೆಗೆ ದಾಖಲಿಸಿದಾಗ ಇಲಿ ಜ್ವರ ಕಂಡುಬಂದಿದ್ದು ಮಣಿಪಾಲದ ಖಾಸಗಿ…

Read more

ಶ್ರೀಕೃಷ್ಣ ಮಾಸೋತ್ಸವ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ..!!

ಉಡುಪಿ : ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಶ್ರೀಕೃಷ್ಣಾಷ್ಟಮಿ ಅಂಗವಾಗಿ ನಡೆಯುತ್ತಿರುವ ಶ್ರೀಕೃಷ್ಣ ಮಾಸೋತ್ಸವದ ಸ್ವಾಗತ ಸಮಿತಿ ಕಚೇರಿಯನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಡಗು ಮಾಳಿಗೆಯಲ್ಲಿ ಬುಧವಾರ ಉದ್ಘಾಟಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮಾಸೋತ್ಸವದ ಕಾರ್ಯಕ್ರಮ ವಿವರ ಹಾಗೂ…

Read more

ಕೋಳಿ ಅಂಕ ಅಡ್ಡೆಗೆ ಖಾಕಿ ರೇಡ್ : 9 ಕೋಳಿಗಳ ವಶ : ಜೂಜುಕೋರರು ಎಸ್ಕೇಪ್

ಉಡುಪಿ : ಅಂಬಲಪಾಡಿಯಲ್ಲಿ ಅನುಮತಿ ಇಲ್ಲದೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಉಡುಪಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 9 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರನ್ನು ಕಂಡ ಸ್ಥಳೀಯರು ಹಾಗೂ ಜೂಜುಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾರಿ‌ ಹಬ್ಬದ ಹಿನ್ನೆಲೆಯಲ್ಲಿ ಕೋಳಿ ಅಂಕ ನಡೆಯುತ್ತಿತ್ತು.…

Read more

ರಿಕ್ಷಾದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಯಂತ್ರ ಕಳವು : ಪ್ರಕರಣ ದಾಖಲು

ಉಡುಪಿ : ಕರಾವಳಿ ಬೈಪಾಸ್ ಬಳಿಯ ಇಸೀ ಲೈಫ್ ಕೃಷಿ ಯಂತ್ರೋಪಕರಣಗಳ ಮಾರಾಟ ಸಂಸ್ಥೆಯ ಗೂಡ್ಸ್ ರಿಕ್ಷಾದಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಯಂತ್ರವನ್ನು ಕಳ್ಳರು ಆ.4ರಂದು ರಾತ್ರಿ ವೇಳೆ ಕಳವು ಮಾಡಿರುವ ಘಟನೆ ನಡೆದಿದೆ. ತೀರ್ಥಹಳ್ಳಿಯಲ್ಲಿರುವ ಇನ್ನೊಂದು ಶಾಖೆಯಿಂದ ನಾಲ್ಕು…

Read more

ನಿವೇಶನರಹಿತ ಅರ್ಹರಿಗೆ ಹಕ್ಕುಪತ್ರ ವಿತರಿಸಲು ಕ್ರಮ : ಜಿಲ್ಲಾಧಿಕಾರಿ

ಉಡುಪಿ : ಜಿಲ್ಲೆಯ ನಿವೇಶನ ರಹಿತ ಅರ್ಹ ಫ‌ಲಾನುಭವಿಗಳಿಗೆ ಪ್ರಸ್ತುತ ಲಭ್ಯವಿರುವ ನಿವೇಶನಗಳ ಹಕ್ಕುಪತ್ರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿ.ಪಂ. ನ ಡಾ| ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ ಜರಗಿದ ನಿವೇಶನ…

Read more

ನಾಗರ ಪಂಚಮಿ ಹಿನ್ನೆಲೆ – ಶಂಕರಪುರ ಮಲ್ಲಿಗೆ ದರ ಗಗನಕ್ಕೆ, ಸಿಯಾಳ ಕೂಡ ದುಬಾರಿ

ಉಡುಪಿ : ನಾಗರ ಪಂಚಮಿ ಹಬ್ಬ ಸಮೀಪಿಸುತ್ತಲೇ ಶಂಕರಪುರ ಮಲ್ಲಿಗೆ ದರ ದಿಢೀರ್‌ ಗಗನಕ್ಕೇರಿದೆ. 2 ವಾರಗಳ ಹಿಂದೆ ಜುಲೈ 22ರಂದು 1 ಅಟ್ಟೆಗೆ (4 ಚೆಂಡು) 280 ರೂ. ಇದ್ದ ದರ ಆಗಸ್ಟ್ 7ರಂದು 2,100ಕ್ಕೆ ತಲುಪಿದೆ. ಜುಲೈ ಪೂರ್ತಿ…

Read more

ಬೈಕ್ ಕಳವು ಪ್ರಕರಣ – ಆರೋಪಿ ಬಂಧನ

ಮಣಿಪಾಲ : ಕಳೆದ ಆರು ತಿಂಗಳ ಹಿಂದೆ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ಪುತ್ತೂರು ನಿವಾಸಿ ಪ್ರಕಾಶ್ ನಾಯಕ್ ಬಂಧಿತ ಆರೋಪಿ. ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಹಿಳೆಯ ಚಿನ್ನದ…

Read more