Udupi News

ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ!? ಚಿಕಿತ್ಸೆ ಪಡೆಯುತ್ತಿರುವ ಪ್ರಜ್ಞಾಹೀನ‌ ಸ್ಥಿತಿಯಲ್ಲಿರುವ ಮಗು

ಉಡುಪಿ : ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 3 ವರ್ಷ 9 ತಿಂಗಳ ಮಗುವನ್ನು ಪೋಷಕರು ಗುರುವಾರ ಬೆಳಿಗ್ಗೆ ಉಡುಪಿಯ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಮಗುವಿಗೆ…

Read more

ಕೇಂದ್ರದಿಂದ ಗ್ರಾಮೀಣ ವಸತಿ ಯೋಜನೆಯ 400 ಕೋಟಿ ರೂ. ಬಿಡುಗಡೆ – ಸಂಸದ ಕೋಟ

ಉಡುಪಿ : ಕೇಂದ್ರ ಸರಕಾರ, ಕರ್ನಾಟಕ ರಾಜ್ಯಕ್ಕೆ ಹಿಂದಿನ ವರ್ಷಗಳ ವಸತಿ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮೀಣ ವಸತಿ ಯೋಜನೆಗೆ 400 ಕೋಟಿ ರೂ. ಹಾಗೂ ನಗರ ವಸತಿ ಯೋಜನೆಗೆ 75 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ…

Read more

ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದಿಂದ ಮನವಿ

ಮಣಿಪಾಲ : ಉಡುಪಿ ಜಿಲ್ಲೆಯ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ವತಿಯಿಂದ ಕೊಲ್ಕತ್ತಾ ಹಾಗೂ ದೇಶದಾದ್ಯಂತ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಉಡುಪಿ ಜಿಲ್ಲಾಧಿಕಾರಿಗಳ…

Read more

ರಾಜ್ಯ ಸರಕಾರವನ್ನು ಜಿಹಾದಿ, ಮತೀಯವಾದಿಗಳು ನಡೆಸುತ್ತಿದ್ದಾರೆ : ಹರಿಪ್ರಕಾಶ್ ಕೋಣೆಮನೆ

ಉಡುಪಿ : ರಾಜ್ಯ ಸರಕಾರವನ್ನು ಜಿಹಾದಿ, ಮತೀಯವಾದಿಗಳು ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬರೇ ಮುಖವಾಡ ಮಾತ್ರ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ವಾಗ್ಧಾಳಿ ನಡೆಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಗಣೇಶೋತ್ಸವ…

Read more

ಯುವಕ ನಾಪತ್ತೆ : ದೂರು ದಾಖಲು

ಉಡುಪಿ : ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಂಜೆಯ ಯುವಕ ನಾಪತ್ತೆಯಾದ ಘಟನೆ ನಡೆದಿದೆ. ಯುವಕನನ್ನು ನಾಗಪ್ಪ ನಡುವಿನ ಮನೆ (31)ಎಂದು ಗುರುತಿಸಲಾಗಿದೆ. ಮನೆಯಿಂದ ಹೊರಗೆ ಹೋದ ನಾಗಪ್ಪ ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ 5 ಅಡಿ 4 ಇಂಚು…

Read more

ಆಕಸ್ಮಿಕವಾಗಿ ಸೀಮೆಎಣ್ಣೆ ಕುಡಿದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಮೃತ್ಯು

ಉಡುಪಿ : ಮಲ್ಪೆ ತೊಟ್ಟಂ‌ನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಯಿಗೆ ಸೀಮೆಎಣ್ಣೆ ಹಾಕಿ ಬೆಂಕಿ ಉಗುಳುತ್ತಿದ್ದ ವ್ಯಕ್ತಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಮಲ್ಪೆ ನಿವಾಸಿ 39 ವರ್ಷ ಪ್ರಾಯದ ಸತೀಶ ಎಂದು…

Read more

ಅನರ್ಹ ಬಿಪಿಎಲ್‌ ಕಾರ್ಡ್‌ ಪರಿಶೀಲನೆ ಆರಂಭ : ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ; 6 ತಿಂಗಳಿಂದ ಪಡಿತರ ತೆಗೆದುಕೊಳ್ಳದ ಬಿಪಿಎಲ್ ಕಾರ್ಡ್‌ಗಳ ಮುಟ್ಟುಗೋಲು

ಉಡುಪಿ : ಜಿಲ್ಲೆಯಲ್ಲಿ ಸದ್ಯ ಶೇ.85ರಷ್ಟು ಬಿಪಿಎಲ್‌ ಪಡಿತರ ಕಾರ್ಡ್‌‌ಗಳಿದ್ದು, 1.97 ಲಕ್ಷ ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಹೊಂದಿವೆ. ಇದರಲ್ಲಿ ಅನರ್ಹರೂ ಕಾರ್ಡ್‌ ಪಡೆದಿರುವ ಸಾಧ್ಯತೆ ಇದೆ. ಹೀಗಾಗಿ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪರಿಶೀಲಿಸುವ ಸಲುವಾಗಿ ಸರ್ವೇ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ…

Read more

ಬಸ್ಸು ನಿಲ್ದಾಣದಲ್ಲಿ ಹಣ ಯಾಚಿಸುತ್ತಿದ್ದ ‘ನಾಪತ್ತೆಯಾಗಿದ್ದ’ ಬಾಲಕನ ರಕ್ಷಣೆ

ಉಡುಪಿ : ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನ ಅನುಮಾನಸ್ಪದ ಚಲನವಲನ ಗಮನಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು, ಬಾಲಕನನ್ನು ವಶಕ್ಕೆ ಪಡೆದು, ಬಳಿಕ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿರುವ ಘಟನೆ ಇಂದು ಸಂಭವಿಸಿದೆ. ರಕ್ಷಿಸಲ್ಪಟ್ಟ ಬಾಲಕ ದೊಡ್ಡಣಗುಡ್ಡೆಯ ಬಾಲಕರ ಬಾಲ…

Read more

ಅಧಿಕ ಲಾಭಾಂಶದ ಆಮಿಷ – ವ್ಯಕ್ತಿಗೆ 4,86,885 ರೂ. ವಂಚನೆ

ಉಡುಪಿ : ಅಧಿಕ ಲಾಭಾಂಶದ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಸಂಭವಿಸಿದ್ದು ದೂರು ದಾಖಲಾಗಿದೆ. ಬಾಗಲಕೋಟೆ ಮೂಲದ ಉಡುಪಿಯಲ್ಲಿ ನೆಲೆಸಿರುವ ಮುಜಮ್ಮಿಲ್‌ ಖಾನ್‌ ಪಠಾನ(19) ವಂಚನೆಗೊಳಗಾದವರು. ಇವರನ್ನು A3 stock Market elite chat Group ಎಂಬ…

Read more

ಉಡುಪಿಯಲ್ಲಿ ನಾಪತ್ತೆಯಾಗಿದ್ದ ಬಾಲಕ ಕೇರಳದಲ್ಲಿ ಪತ್ತೆ

ಉಡುಪಿ : ಕಡಿಯಾಳಿಯ ಕೋಚಿಂಗ್ ಸೆಂಟರ್‌‌ವೊಂದಕ್ಕೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಬ್ರಹ್ಮಾವರ ಹಂದಾಡಿ ಬಾರಕೂರು ರಸ್ತೆಯ ನಿವಾಸಿ ಪ್ರಕಾಶ್ ಎಂಬವರ ಪುತ್ರ ಆರ್ಯ(13) ಇಂದು ಬೆಳಗ್ಗೆ ಕೇರಳದ ಪಾಲ್ಘಾಟ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ರವಿವಾರ ಬೆಳಗ್ಗೆ ಉಡುಪಿ ಕಡಿಯಾಳಿಯಲ್ಲಿರುವ ಕೋಚಿಂಗ್…

Read more