Udupi District

ಕಡಿಮೆ ಬೆಲೆಯಲ್ಲಿ ಚಿನ್ನ ಕೊಡಿಸುವುದಾಗಿ ನಂಬಿಸಿ ಹಲವರಿಗೆ 75 ಲಕ್ಷ ರೂ.ಗಳ ವಂಚನೆ

ಬ್ರಹ್ಮಾವರ : ಫೈನಾನ್ಸಿನಲ್ಲಿ ಹರಾಜಿಗೆ ಬಂದ ಚಿನ್ನವನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಒಟ್ಟು 75 ಲಕ್ಷ ರೂ.ಗಳನ್ನು ವಂಚಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಸುವಾಸಿನಿ ಹಾಗೂ ಅವರ ಸಹೋದರ ವಾದಿರಾಜ ಎಂಬವರು ನಡೂರಿನ ನಿತ್ಯಾನಂದ ಎಂಬವರಿಗೆ 35 ಲಕ್ಷ…

Read more

ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ : ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್‌ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿ ಅಕ್ರಮ ಎಸಗಿದ್ದಾರೆಂದು ಆರೋಪಿಸಿ ಶಿಲ್ಪ ಕಲಾವಿದ ಹಾಗೂ ಕ್ರಿಷ್‌ ಆರ್ಟ್‌ ವರ್ಲ್ಡ್ ಮುಖ್ಯಸ್ಥ ಕೃಷ್ಣ ನಾಯಕ್‌ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್‌ ಮಧ್ಯಾಂತರ…

Read more

ಸಮಾನತೆಗಾಗಿ ಹೋರಾಡಿದ ಸಂತ ನಾರಾಯಣಗುರು : ಸಂಸದ ಕೋಟ

ಉಡುಪಿ : ಶತಮಾನಗಳ ಹಿಂದೆ ಸಮಪಾಲು-ಸಮಬಾಳ್ವೆಗಾಗಿ ಧ್ವನಿ ಎತ್ತಿದ ನಾರಾಯಣ ಗುರುಗಳು ಯಾವುದೇ ರಕ್ತ ಕ್ರಾಂತಿಗಳಿಲ್ಲದೆ ತಮ್ಮ ಮಾತು ಹಾಗೂ ಬದ್ಧತೆಗಳ ಮೂಲಕ ಸಮಾಜದಲ್ಲಿದ್ದ ಮೇಲು-ಕೀಳು ಎಂಬ ಅಂಧಕಾರವನ್ನು ಹೋಗಲಾಡಿಸಿ, ಸಮಾನತೆಗಾಗಿ ಹೋರಾಡಿದ ಮಹಾನ್ ಸಂತ ಎಂದು ಸಂಸದ ಕೋಟ ಶ್ರೀನಿವಾಸ…

Read more

ನಾಮಫಲಕಗಳಲ್ಲಿ ಶೇ.60 ಕನ್ನಡ ಬಳಕೆ ಕಡ್ಡಾಯ – ಜಿಲ್ಲಾಧಿಕಾರಿ

ಉಡುಪಿ : ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ ಅನ್ವಯ ನಾಮಫ‌ಲಕದಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ನಾಮಫ‌ಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಶೇ.60ರಷ್ಟು ಪ್ರದರ್ಶಿಸದೆ ಇರುವುದು ಪರಿಶೀಲನೆ ವೇಳೆ ಕಂಡುಬಂದಿದ್ದು, ನಿಯಮವನ್ನು ಪಾಲಿಸದಿರುವ ಸಂಘ,…

Read more

ಮುರಳೀಧರ್ ಭಟ್‌ರವರಿಗೆ “ವಿಪ್ರ ಛಾಯಾ ಸಾಧಕ” ಪುರಸ್ಕಾರ

ಉಡುಪಿ : ಛಾಯಾಚಿತ್ರ ಕಲಾವಿದ ಮುರಳೀಧರ್ ಭಟ್ ಕೊಡವೂರು ಇವರಿಗೆ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ “ವಿಪ್ರ ಛಾಯಾ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಕಳೆದ ಹಲವಾರು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ವಲಯ ಬ್ರಾಹ್ಮಣ ಮಹಾಸಭಾದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿ…

Read more

ಟೋಲ್‌ಗಳಲ್ಲಿ ಹೆಚ್ಚುವರಿ ದರ ಕಡಿತ : ಬಸ್‌ ಮಾಲಕರಿಂದ ಮೌನ ಪ್ರತಿಭಟನೆಗೆ ನಿರ್ಧಾರ

ಉಡುಪಿ : ಟೋಲ್‌ಗೇಟ್‌ಗಳಲ್ಲಿ ಅನಧಿಕೃತವಾಗಿ ಹೆಚ್ಚುವರಿ ಹಣ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆನರಾ ಬಸ್‌ ಮಾಲಕರ ಸಂಘದವರು ಆಗಸ್ಟ್ 23ರಂದು ಬೆಳಗ್ಗೆ 9.30ರಿಂದ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌‌ಗೇಟ್‌ ಎದುರು ಮೌನ ಪ್ರತಿಭಟನೆ ನಡೆಸುವ ಬಗ್ಗೆ ಸಂಸದ ಕೋಟ ಶ್ರೀನಿವಾಸ…

Read more

ಕಲ್ಯಾ ಗ್ರಾಮ ಪಂಚಾಯತ್‌ನಲ್ಲಿ ಕೌಶಲ್ಯಾಧಾರಿತ ಉದ್ಯಮಶೀಲತಾ ಕಸೂತಿ ತರಬೇತಿ ಉದ್ಘಾಟನೆ

ಕಾರ್ಕಳ : ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಕೃಷಿ ಇಲಾಖೆ ಉಡುಪಿ ಹಾಗೂ ಗ್ರಾಮ ಪಂಚಾಯತ್ ಕಲ್ಯಾ ಇವರ ಜಂಟಿ ಆಶ್ರಯದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯೀ ಯೋಜನೆಯಡಿಯಲ್ಲಿ 10 ದಿನಗಳ…

Read more

ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಜಾಥಾಗೆ ಸಂಸದ ಕೋಟ ಚಾಲನೆ

ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆಯ ಪ್ರಯುಕ್ತ ನಾರಾಯಣ ಗುರುಗಳ ಜಾಥಾಕ್ಕೆ ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಿಂದ ಹೊರಟ ಜಾಥಾವು ಕಟಪಾಡಿ ಪೇಟೆಯಾಗಿ ಸಾಗಿ ರಾಷ್ಟ್ರೀಯ ಹೆದ್ದಾರಿ…

Read more

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ ಮುಂಬೈಯಲ್ಲಿ ಸೆರೆ

ಕಾಪು : ಆಸ್ತಿ ಕಲಹ ವಿಚಾರವಾಗಿ ಆಪಾದಿತಳಾಗಿ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅನುರಾಧಾ ಕರ್ಕೇರ ಎಂಬಾಕೆಯನ್ನು ಕಾಪು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ. ಮೂಳೂರಿನಲ್ಲಿ ಆಸ್ತಿ ವಿಷಯದಲ್ಲಿ ಸಂಬಂಧಿಗಳ ನಡುವೆ ಗಲಾಟೆ ನಡೆದಿದ್ದು, 2012ರಲ್ಲಿ ಪ್ರಕರಣ ದಾಖಲಾಗಿತ್ತು. ಆಕೆಯ ಸಹೋದರಿ ನೀತಾ ನೀಡಿದ್ದ…

Read more

ದೇವಸ್ಥಾನದ ಹುಂಡಿ ಹಣ ಕದ್ದು, ಶಾಲೆಯ ಜಗಲಿಯಲ್ಲಿಟ್ಟ ಕಳ್ಳ!

ಕುಂದಾಪುರ : ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಳ್ಳತನ ನಡೆಸಿ ಹುಂಡಿ ಹಣ ಕದ್ದೊಯ್ದ ಕಳ್ಳ ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಅದನ್ನು ಇಟ್ಟು ಹೋದ ಘಟನೆ ಬೆಳಕಿಗೆ ಬಂದಿದೆ. ಹೆಮ್ಮಾಡಿಯ ಪ್ರಾಥಮಿಕ ಶಾಲೆಯ ವರಾಂಡದ ಜಗುಲಿಯ ಮೇಲೆ ಹಸಿರು ಚೀಲ ಇದ್ದುದನ್ನು ಗಮನಿಸಿದ್ದ…

Read more