Udupi District

ನಿರ್ಭೀತವಾದ ಪತ್ರಿಕೋದ್ಯಮ ಇಂದಿನ ಅತೀ ಅಗತ್ಯ : ಡಾ. ವಿದ್ಯಾ ಕುಮಾರಿ; ಉಡುಪಿ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ ‘ರಜತ ಕ್ರೀಡಾ ಸಂಭ್ರಮ’

ಉಡುಪಿ : ಇಂದು ಪತ್ರಿಕೆ ಉದ್ಯಮವಾಗಿ ಬೆಳೆದಿದೆ. ಸುದ್ದಿಯನ್ನು ಸ್ಮರ್ಧಾತ್ಮಕವಾಗಿ ನೀಡುವ ಒತ್ತಡ ಇರುತ್ತದೆ. ಸಂಗ್ರಹಿಸಿದ ಸುದ್ದಿಯನ್ನು ಮಾಹಿತಿ ರೂಪದಲ್ಲಿ ಹೊರ ಹಾಕುವುದು ಅಗತ್ಯ. ಒತ್ತಡ ನಡುವೆ ಪತ್ರಕರ್ತರು ಕ್ರೀಡಾ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರಿಂದ ಸ್ವಾಸ್ಥ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ನಿರ್ಭೀತವಾದ ಪತ್ರಿಕೋದ್ಯಮ…

Read more

ಉಡುಪಿ ಆದಿಶಕ್ತಿ ಹೂವಿನ ಅಂಗಡಿಯ ಮಾಲೀಕ ಸುಧಾಕರ ಶೇರಿಗಾರ್ ನಿಧನ

ಉಡುಪಿ : ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಆದಿಶಕ್ತಿ ಹೂವಿನ ಅಂಗಡಿಯ ಮಾಲೀಕ, ಬೀಡಿನಗುಡ್ಡೆ ನಿವಾಸಿ ಸುಧಾಕರ ಶೇರಿಗಾರ್(75) ಅವರು ಸೋಮವಾರ ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಉಡುಪಿ ನಗರದ ಬಸ್ ನಿಲ್ದಾಣದ ಬಳಿಯ ಆದಿಶಕ್ತಿ ಪ್ಲವರ್ ಸ್ಟಾಲ್…

Read more

ಶಂಕರಪುರದ ಅನಿಲ್ ಕುಮಾರ್‌ರವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಉಡುಪಿ : ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಅನಿಲ್ ಕುಮಾರ್ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಂಕರಪುರ ಶಿವಾನಂದನಗರದ ಅನಿಲ್ ಕುಮಾರ್‌ರವರು ಬೆಂಗಳೂರಿನ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ (RUPSA)ವತಿಯಿಂದ…

Read more

ಪರಶುರಾಮನ ಕಂಚಿನ ಪ್ರತಿಮೆ ರಚನೆಯ ಅಕ್ರಮ ಪ್ರಕರಣ; ಆರೋಪಿ ಕೃಷ್ಣ ನಾಯ್ಕ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ರಚನೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದು ಆರೋಪಿ ಕೃಷ್ಣ ನಾಯ್ಕ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ತಮ್ಮ ವಿರುದ್ಧ ಉಡುಪಿ ಜಿಲ್ಲೆಯ ಟೌನ್…

Read more

ಪ್ರಧಾನಿ ಸಂಸದೀಯ ಕಾರ್ಯದರ್ಶಿ ಹೆಸರಲ್ಲಿ ಕೃಷ್ಣಮಠಕ್ಕೆ ಬಂದು ಮೋಸ ಮಾಡಿದ ವ್ಯಕ್ತಿಗೆ ಜಾಮೀನು

ಉಡುಪಿ : ಪ್ರಧಾನ ಮಂತ್ರಿ ಸಂಸದೀಯ ಅಧೀನ ಕಾರ್ಯದರ್ಶಿ ಎಂದು ನಂಬಿಸಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿದ್ದ ಆರೋಪಿಗೆ ಉಡುಪಿ ಪ್ರಧಾನ ಸಿವಿಲ್‌ ಮತ್ತು ಜೆ.ಎಂ.ಎಫ್‌.ಸಿ. ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಗೊಳಿಸಿದೆ. ಆರೋಪಿ ಉದಯ್‌ ಕುಮಾರ್‌ ತಾನು ಪ್ರಧಾನಮಂತ್ರಿ…

Read more

ಶೋಭಾ ಕರಂದ್ಲಾಜೆ ಕುರಿತು ಮಾತನಾಡುವ ನೈತಿಕತೆ ಹೆಬ್ಬಾಳ್ಕರ್‌ಗೆ ಇಲ್ಲ – ಶ್ರೀನಿಧಿ ಹೆಗ್ಡೆ

ಉಡುಪಿ : ಜಿಲ್ಲಾ ಉಸ್ತುವಾರಿ ಸಚಿವರಾಗಿ ತಿಂಗಳಿಗೆ ಒಂದು ಬಾರಿಯಾದರೂ ಜಿಲ್ಲೆಗೆ ಭೇಟಿ ನೀಡದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮುಡಾ ಹಗರಣದ ಕುರಿತು ಮಾತನಾಡಿರುವ ಶೋಭಾ ಕರಂದ್ಲಾಜೆ ಕುರಿತು ಮಾತನಾಡುವ…

Read more

ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ – ಬಿರುಸಿನ‌ ಮತದಾನ

ಉಡುಪಿ : ಇಂದು ದಕ್ಷಿಣ ಕನ್ನಡ ಜಿಲ್ಲಾ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ನಡೆಯುತ್ತಿದೆ. ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾದ ಬಳಿಕ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 328 ಪೊಲೀಸ್ ಅಧಿಕಾರಿಗಳು ಹಾಗೂ ಮತಕಟ್ಟೆ ಸಿಬ್ಬಂದಿಗಳನ್ನು…

Read more

ಧರ್ಮಸ್ಥಳಕ್ಕೆ ಹೊರಟವರ ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ – ಆರು ಮಂದಿಗೆ ಗಾಯ

ಅಜೆಕಾರು : ಧರ್ಮಸ್ಥಳ ಕ್ಷೇತ್ರಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿರುವ ಘಟನೆ ಅಜೆಕಾರು ಎಂಬಲ್ಲಿ ಸಂಭವಿಸಿದೆ. ಹುಬ್ಬಳ್ಳಿ ಮೂಲದ ಆರು ಮಂದಿ ಇನೋವಾ ಕಾರಿನಲ್ಲಿ ಆಗುಂಬೆಯಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ರವಿವಾರ ನಸುಕಿನ ಜಾವ ಸುಮಾರು…

Read more

ಅಕ್ರಮ ಬಾಂಗ್ಲಾ ವಲಸಿಗರಿಗೆ ನ್ಯಾಯಾಂಗ ಬಂಧನ

ಉಡುಪಿ : ಮಲ್ಪೆ ಸಹಿತ ವಿವಿಧ ಕಡೆಗಳಲ್ಲಿ ಬಂಧಿತರಾಗಿ ಪೊಲೀಸ್‌ ಕಸ್ಟಡಿಯಲ್ಲಿದ್ದವರು ಸಹಿತ ಒಟ್ಟು ಎಂಟು ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅ.12ರಂದು ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಕೀಂ ಅಲಿ,…

Read more

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ನದಿಯಲ್ಲಿ ಪತ್ತೆ

ಉಡುಪಿ : ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹವು ಕಲ್ಯಾಣಪುರದ ಸ್ವರ್ಣ ನದಿಯಲ್ಲಿ ಪತ್ತೆಯಾದ ಘಟನೆ ಸಂಭವಿಸಿದೆ. ಮೃತ ವ್ಯಕ್ತಿ ಸುಮನೇಶ್ ಹೆಗ್ಡೆ (42) ಮಧ್ವನಗರ ಮೂಡಬೆಟ್ಟು ನಿವಾಸಿಯಾಗಿದ್ದಾರೆ. ವಿವಾಹಿತರಾಗಿದ್ದು, ಖಾಸಗಿ ಬಸ್ಸಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮನೆಯಿಂದ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರೆಂದು…

Read more