Traditional Rituals

ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯುವ ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ : ದೇವಸ್ಥಾನದಲ್ಲಿ ಶತ ಚಂಡಿಕಾಯಾಗ ನಿರ್ವಿಘ್ನವಾಗಿ ನಡೆಯಲಿ. ಇದರಿಂದ ಲೋಕ ಮತ್ತು ಎಲ್ಲ ಭಕ್ತರಿಗೂ ಒಳಿತಾಗಲಿ. ಇಂಥ ಧಾರ್ಮಿಕ ಕಾರ್ಯಕ್ರಮಗಳು ಜಿಲ್ಲೆಯ ದೇವಸ್ಥಾನಗಳಲ್ಲಿ ನಡೆಯು‌ವಂತಾಗಲಿ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು. ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.9ರಿಂದ…

Read more

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕದಿರು ಹಬ್ಬ : ನೂರಾರು ಭಕ್ತರ ಮನೆಗಳಿಗೆ ಧಾನ್ಯಸಿರಿ ವಿತರಣೆ..!!

ಉಡುಪಿ : ವರ್ಷಂಪ್ರತಿಯಂತೆ ಉಡುಪಿ ಶ್ರೀಕೃಷ್ಣಮಠದಲ್ಲಿ ಕದಿರುಕಟ್ಟುವ ಪರ್ವವು ಶನಿವಾರ ನೆರವೇರಿತು. ಮಠದ ಪುರೋಹಿತರು ಸಮೀಪದ ಗದ್ದೆಯಲ್ಲಿ ನೂತನವಾಗಿ ಬೆಳೆದ ಭತ್ತದ ಕದಿರಿಗೆ ಪೂಜೆ ಸಲ್ಲಿಸಿದ ಬಳಿಕ ರಥಬೀದಿಗೆ ತಂದು ಸ್ವರ್ಣಪಲ್ಲಕ್ಕಿಯಲ್ಲಿಟ್ಟು ವಾದ್ಯ, ಮಂತ್ರಘೋಷ ಸಹಿತ ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ…

Read more

ಶ್ರೀ ಕ್ಷೇತ್ರ ಸಾಲಿಗ್ರಾಮದಲ್ಲಿ ಶ್ರಾವಣ ಮಾಸ ಸಂಪನ್ನ : ಸಹಸ್ರಾರು ಭಕ್ತರು ಭಾಗಿ

ಸಾಲಿಗ್ರಾಮ : ಇಲ್ಲಿನ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಚತುರ್ಥ ಶ್ರಾವಣ ಶನಿವಾರದಂದು ಲಕ್ಷ ತುಳಸಿ ಅರ್ಚನೆ ಮತ್ತು ನವಕ ಪ್ರದಾನ ಕಲಶಾಭಿಷೇಕವು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಋತ್ವಿಜರ ವಿಷ್ಣು ಸಹಸ್ರನಾಮ ಪಠಣದ ನಂತರ ಅರ್ಚಕ ಶಿವಾನಂದ ಯಾನೆ ಬಾಬಣ್ಣ ಅಡಿಗರ…

Read more

ಉಡುಪಿಯ ಕಂಡೀರಾ… ಹುಲಿವೇಷಧಾರಿಗಳಿಗೆ ನೋಟಿನ ಮಾಲೆಯ ಕಂಡೀರಾ….

ಉಡುಪಿ : ಕೃಷ್ಣನೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಗರಿಗೆದರಿದೆ. ಈಗಾಗಲೇ ಶ್ರೀ ಕೃಷ್ಣಮಠದಲ್ಲಿ ಕಣ್ಮನ ಸೆಳೆಯುವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆಗಸ್ಟ್ 26ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆಗಳು, ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ, ರಾತ್ರಿ ಅರ್ಘ್ಯಪ್ರದಾನ…

Read more

ನೂಲ ಹುಣ್ಣಿಮೆ ದಿನ ಮಲ್ಪೆಯಲ್ಲಿ ಮತ್ಸ್ಯ ಸಮೃದ್ಧಿಗಾಗಿ ಸಮುದ್ರ ಪೂಜೆ

ಉಡುಪಿ : ಪ್ರತೀ ವರ್ಷದಂತೆ ಈ ಬಾರಿಯೂ ನೂಲ ಹುಣ್ಣಿಮೆಯಂದು ಮಲ್ಪೆ ಕಡಲ ಕಿನಾರೆ ಸಹಿತ ಕರಾವಳಿಯ ವಿವಿಧ ಕಡೆಗಳಲ್ಲಿ ಸಮುದ್ರ ಪೂಜೆ ನೆರವೇರಿಸಲಾಯಿತು. ಮಲ್ಪೆ ಮೀನುಗಾರರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಮುದ್ರ ಪೂಜೆ ನಡೆಸಲಾಯಿತು. ಬೆಳಿಗ್ಗೆ…

Read more

ಎರಡು ಪ್ರೇತಾತ್ಮಗಳಿಗೆ ಅದ್ದೂರಿಯಾಗಿ ನಡೆದ ಕುಲೆ ಮದಿಮೆ

ಬೆಳ್ತಂಗಡಿ : ಮದುವೆಯಾಗದೆ ಅಕಾಲಿಕವಾಗಿ ಮೃತಪಟ್ಟವರ ಪ್ರೇತಾತ್ಮಕ್ಕೆ ನಡೆಯುವ ಕುಲೆ ಮದಿಮೆಯ ಬಗ್ಗೆ ಸಾಕಷ್ಟು ಮಂದಿ ಕೇಳಿರುತ್ತೇವೆ. ಆದರೆ ನೋಡಿದವರು ಕಡಿಮೆ. ಆಟಿ ತಿಂಗಳಲ್ಲಿ ನಡೆಸಲಾಗುವ ಈ ಸಂಪ್ರದಾಯದ ಮದುವೆಯೊಂದು ಬೆಳ್ತಂಗಡಿಯಲ್ಲಿ ಅದ್ದೂರಿಯಾಗಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬರ್ಕಜೆ ದುರ್ಗಾಪರಮೇಶ್ವರಿ ಮತ್ತು…

Read more

ಸಾಲಿಗ್ರಾಮದ ಐತಾಳರ ಮನೆಯಲ್ಲಿ 40 ವರ್ಷಗಳಿಂದಲೂ ಜೀವಂತ ನಾಗನಿಗೆ ಪೂಜೆ ನಡೆಯುತ್ತೆ!

ಉಡುಪಿ : ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಉರಗ ರಕ್ಷಕ ಸುಧೀಂದ್ರ ಐತಾಳರು ನಾಗರಪಂಚಮಿಯ ದಿನವಾದ ಇಂದು ಜೀವಂತ ನಾಗನಿಗೆ ಪೂಜಿ ಸಲ್ಲಿಸಿದ್ದಾರೆ. ವರ್ಷಂಪ್ರತಿ ಐತಾಳರು ಜೀವಂತ ನಾಗನಿಗೆ ಪೂಜೆ ಸಲ್ಲಿಸಿ ಸುದ್ದಿಯಲ್ಲಿರುತ್ತಾರೆ. ಹಾಗಂತ ಇದು ಇವತ್ತು ನಿನ್ನೆಯಿಂದ ನಡೆದುಕೊಂಡು ಬಂದ ಪದ್ಧತಿಯಲ್ಲ.…

Read more

ನಾಗರ ಪಂಚಮಿಯಂದು ಜೀವಂತ ನಾಗನಿಗೆ ಪೂಜೆ

ಉಡುಪಿಯ ಕಾಪು ಮಜೂರಿನಲ್ಲಿರುವ ಗೋವರ್ಧನ್ ರಾವ್ ಅವರ ಮನೆಯಲ್ಲಿ ನಾಗರ ಪಂಚಮಿಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜೀವಂತ ನಾಗರ ಹಾವಿಗೆ ಪೂಜೆ ಸಲ್ಲಿಸಲಾಯಿತು, ಹಾವುಗಳಿಗೆ ಜಲಾಭೀಷೇಕ ಮತ್ತು ಸೀಯಾಳ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು. ಗೋವರ್ಧನ್ ರಾವ್ ಹಾವುಗಳನ್ನು…

Read more