Safety First

ಸಿಮೆಂಟ್‌ ಲಾರಿ ಪಲ್ಟಿಯಾಗಿ ಚಾಲಕ ಸಾವು

ಬೈಂದೂರು : ಇಲ್ಲಿನ ಒತ್ತಿನೆಣೆ ತಿರುವಿನಲ್ಲಿ ಸಿಮೆಂಟ್‌ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಝಾರ್ಖಂಡ್‌ ಮೂಲದ ಚಾಲಕ ದಾಮೋದರ ಯಾದವ್‌ (55) ಮೃತಪಟ್ಟವರು. ಲೋಕಾಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read more

ಉಡುಪಿ ಜಿಲ್ಲೆಯಲ್ಲಿ ಗುರುತಿಸಲಾದ ಬ್ಲಾಕ್ ಸ್ಪಾಟ್ ಸ್ಥಳಗಳನ್ನು ಅಪಘಾತ ಮುಕ್ತ ವಲಯಗಳನ್ನಾಗಿಸಲು ಕ್ರಮ ವಹಿಸಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ : ಜಿಲ್ಲೆಯಲ್ಲಿ ರಸ್ತೆ ಅಪಘಾತವಾಗುವ ವಲಯಗಳನ್ನು ಗುರುತಿಸಿದ್ದು, ಈ ಸ್ಥಳಗಳಲ್ಲಿ ಅಪಘಾತವಾಗುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾಗಿರುವ ವೈಜ್ಞಾನಿಕ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಅಪಘಾತ ಮುಕ್ತ ವಲಯಗಳನ್ನಾಗಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ…

Read more

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ತಂಡ ಅಂದರ್‌! 13 ಆರೋಪಿಗಳ ಬಂಧನ, ಪಿಸ್ತೂಲ್ ವಶ

ಕುಂದಾಪುರ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಪಿಸ್ತೂಲ್ ತೋರಿಸಿ, ಮಾರಕಾಯುಧಗಳ ಜೊತೆಗೆ ಸಿನಿಮೀಯ ರೀತಿಯಲ್ಲಿ ಬಂದ ತಂಡವನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಮನೆಯ ಸಮೀಪ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ಮಾರಕಾಯುಧಗಳಿಂದ ಬಂದ ದುಷ್ಕರ್ಮಿಗಳ ತಂಡವೊಂದು…

Read more

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು : ಪ್ರಯಾಣಿಕರು ಅಪಾಯದಿಂದ ಪಾರು

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿರುವ ಘಟನೆ ತಡರಾತ್ರಿ ಸುಳ್ಯದ ಕಾರ್ಯತೋಡಿ ದೇವಸ್ಥಾನಕ್ಕೆ ಹೋಗುವ ಜಂಕ್ಷನ್ ಬಳಿ ನಡೆದಿದೆ. ಕಾರು‌ ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯಗಳಾಗಿಲ್ಲ. ಕಾರು ಗುದ್ದಿದರ…

Read more

ವಿದ್ಯಾರ್ಥಿಗಳಿಗೆ ರಸ್ತೆ ಸಂಚಾರಕ್ಕೆ ಸುರಕ್ಷಿತ ಕ್ರಮಕ್ಕಾಗಿ ಮನವಿ

ಕೋಟ : ಕೋಟೇಶ್ವರ ಶ್ರೀ ಕಾಳಾವರ ವರದರಾಜ್ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ಸಂಚಾರಕ್ಕೆ ಸುರಕ್ಷಿತ ಕ್ರಮಕ್ಕಾಗಿ ಮನವಿ ಸಲ್ಲಿಸಲಾಯಿತು. ಇತ್ತೀಚಿಗೆ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ…

Read more

ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ತಂದ ಆರೋಪಿ ಪೊಲೀಸರನ್ನು ದೂಡಿ ಪರಾರಿ

ಮಂಗಳೂರು : ಸುಳ್ಯದ ಸರಕಾರಿ ಆಸ್ಪತ್ರೆಗೆ ತಪಾಸಣೆಗೆ ಕರೆ ತಂದಿದ್ದ ವೇಳೆ ಆರೋಪಿ ಪೋಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿರುವ ಘಟನೆ ನಡೆದಿದೆ. ಈ ವ್ಯಕ್ತಿಯನ್ನು ಪತ್ತೆ ಹಚ್ಚಲು ಸಹಕರಿಸುವಂತೆ ಪೋಲೀಸರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ. ಸುಳ್ಯದ ಸಂಪಾಜೆಯ ಮನೆಯೊಂದರಿಂದ ದರೋಡೆ ನಡೆಸಿದ…

Read more

ಕಾಲೇಜಿನೊಳಗೆ ಬಂದು ಕೆಲಹೊತ್ತು ಆತಂಕ ಸೃಷ್ಟಿಸಿದ ಉಡ!

ಕಾಪು : ಪೊಲಿಪುವಿನ ಸರಕಾರಿ ಪದವಿಪೂರ್ವ ಕಾಲೇಜಿಗೆ ಇಂದು ಅಪರೂಪದ ಅತಿಥಿಯ ಆಗಮನವಾಗಿತ್ತು. ಕಾಲೇಜು ಕೊಠಡಿಯೊಳಗೆ ಒಮ್ಮಿಂದೊಮ್ಮೆಲೆ ಸರಸರನೆ ‘ಉಡ’ದ ಪ್ರವೇಶವಾದಾಗ ಇಲ್ಲಿನ ಶಿಕ್ಷಕರು‌ ಗಾಬರಿಗೊಳಗಾದರು. ಒಂದು ಕ್ಷಣ ಇದು ಯಾವ ಪ್ರಾಣಿ ಎಂದೇ ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ. ಕೆಲ ಹೊತ್ತು ಉಡ…

Read more

ಬ್ಯಾಂಕ್‌ ಹೆಸರಿನಲ್ಲಿ ಕರೆಮಾಡಿ ವ್ಯಕ್ತಿಗೆ 76,000 ರೂ. ವಂಚನೆ

ಕಾರ್ಕಳ : ಬ್ಯಾಂಕ್‌ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಕರೆ ಮಾಡಿ ವ್ಯಕ್ತಿಯೋರ್ವರಿಗೆ 76,000 ರೂ. ವಂಚನೆ ಮಾಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಸಬಾ ಗ್ರಾಮದ ಬಾಲಚಂದ್ರ ಎಂಬವರು ಆಕ್ಸಿಸ್‌ ಬ್ಯಾಂಕ್‌ ಹಾಗೂ ಐಡಿಎಫ್‌ಸಿ ಬ್ಯಾಂಕಿನಲ್ಲಿ ಕ್ರೆಡಿಟ್‌ ಕಾರ್ಡ್‌ನ್ನು ಹೊಂದಿದ್ದು, ಸೆ. 30ರಂದು ಅವರಿಗೆ…

Read more

ತುಳುನಾಡ ರಕ್ಷಣಾ ವೇದಿಕೆ ಉಡುಪಿ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛತಾ ಅಭಿಯಾನ

ಉಡುಪಿ : ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ನಮ್ಮ ಉಡುಪಿ ಸ್ವಚ್ಛ ಉಡುಪಿ ಅಭಿಯಾನ‌ವನ್ನು ಮಣಿಪಾಲ – ಕೊಳಲಗಿರಿ ಸಂಪರ್ಕಿಸುವ ಶೀಂಬ್ರ ಫೆರಾರಿ ಸೇತುವೆ ಬಳಿ ನಡೆಯಿತು. ಉಡುಪಿ ಸ್ವಚ್ಛ ಉಡುಪಿ ಅಭಿಯಾನಕ್ಕೆ…

Read more

ಕೆಲಸಕ್ಕೆoದು ಬೆಂಗಳೂರಿಗೆ ತೆರಳಿದ ಯುವತಿ ನಾಪತ್ತೆ : ಪ್ರಕರಣ ದಾಖಲು

ಉಡುಪಿ : ಮಣಿಪಾಲದಲ್ಲಿ ಸೋಲಾರ್ ಎನರ್ಜಿ ಸೊಲ್ಯೂಷನ್ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವತಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತೇನೆoದು ತಿಳಿಸಿ ನಾಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸತೀಶ ಎಂಬವರ 25 ವರ್ಷದ ಮಗಳು ಬಿ ಕಾಂ…

Read more