Road Safety

ಕೆಪಿಟಿ ಪೆಟ್ರೋಲ್ ಬಂಕ್‌ನಲ್ಲಿ ಬೈಕ್ ಮೇಲೆ ಹರಿದ ಲಾರಿ – ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ

ಮಂಗಳೂರು : ನಗರದ ಕೆಪಿಟಿ ಪೆಟ್ರೋಲ್ ಬಂಕ್‌ನಲ್ಲಿ‌ ಬೈಕ್ ಮೇಲೆಯೇ ಲಾರಿ ಹರಿದು ಪರಿಣಾಮ ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ಅಶೋಕ್‌ ಗಂಭೀರ ಗಾಯಗೊಂಡಿದ್ದಾರೆ. ಯೆಯ್ಯಾಡಿಯಿಂದ ಕೆಪಿಟಿ ಜಂಕ್ಷನ್‌ನ…

Read more

ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಬಿಬಿಎ ವಿದ್ಯಾರ್ಥಿ ಮೃತ್ಯು

ಮಂಗಳೂರು : ಲಾರಿ ಬೈಕ್‌ಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಬಿಬಿಎ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ‌. ಘಟನೆಯಲ್ಲಿ ಮತ್ತೋರ್ವ ಬೈಕ್ ಸವಾರ ಗಾಯಗೊಂಡಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಿ.ಸಿ.ರೋಡ್ ಮೆಲ್ಕಾರ್ ನಿವಾಸಿ, ಕೂಳೂರು ಯೆನೆಪೊಯ ಕಾಲೇಜಿನ ಬಿಬಿಎ ಎರಡನೇ…

Read more

ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಇನ್ನೊಂದು ಖಾಸಗಿ ಬಸ್ ಡಿಕ್ಕಿ : ಪ್ರಯಾಣಿಕರಿಗೆ ಗಾಯ

ಕುಂದಾಪುರ : ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಇನ್ನೊಂದು ಖಾಸಗಿ ಬಸ್ಸು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸುಮಾರು 8 ಕ್ಕೂ ಮಿಕ್ಕಿ ಪ್ರಯಾಣಿಕರು ಗಾಯಗೊಂಡ ಘಟನೆ ಹೆಮ್ಮಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ರಾತ್ರಿ ನಡೆದಿದೆ. ಭಟ್ಕಳದಿಂದ ಬೆಂಗಳೂರಿಗೆ…

Read more

ಸ್ಕೂಟರ್‌ಗೆ ಟ್ಯಾಂಕರ್ ಡಿಕ್ಕಿ – ಪತ್ನಿ ಸಾವು, ಪತಿ ಪಾರು

ಮಂಗಳೂರು : ನಗರದ ಕೂಳೂರಿನ ಸೇತುವೆ ಮೇಲೆ ಟ್ಯಾಂಕರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಹಸವಾರೆ ರಸ್ತೆಗೆ ಬಿದ್ದು ಟ್ಯಾಂಕರ್ ಚಕ್ರ ತಲೆ ಮೇಲೆಯೇ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ‌. ಸ್ಕೂಟರ್ ಸವಾರಿ ಮಾಡುತ್ತಿದ್ದ ಅವರ ಪತಿ ಸಣ್ಣಪುಟ್ಟ ಗಾಯದೊಂದಿಗೆ…

Read more

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಖಾಸಗಿ ಬಸ್: ಬಸ್‌ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರು

ಕಾಪು : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ವೊಂದು ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ಕಾಪುವಿನ ಉಳಿಯಾರಗೋಳಿ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಉಡುಪಿ – ಶಿರ್ವ ನಡುವೆ ಸಂಚರಿಸುತ್ತಿದ್ದ ಮಿಲಾನ್ ಖಾಸಗಿ…

Read more

ಸಗ್ರಿ ನೊಳೆ ಬಳಿಯ ಕಿರು ಸೇತುವೆ ಕುಸಿತ : ಉಡುಪಿ ನಗರಕ್ಕೆ ಬರುವ ಒಳ ದಾರಿ ಬಂದ್

ಉಡುಪಿ : ಈ ವರ್ಷ ಭಾರೀ ಮಳೆಯಾಗಿದ್ದು ಅನೇಕ ಅವಾಂತರ ಸೃಷ್ಟಿ ಮಾಡಿದೆ. ಮಳೆಯ ರಭಸಕ್ಕೆ ಸಣ್ಣ ಪುಟ್ಟ ಸೇತುವೆಗಳು ಕುಸಿದು ರಸ್ತೆ ಸಂಚಾರ ಬಂದ್ ಆಗಿದ್ದವು. ಉಡುಪಿ ನಗರಕ್ಕೆ ಬರುವ ಒಳದಾರಿಯ ಪೈಕಿ ಸಗ್ರಿ ನೊಳೆಯ ಹತ್ತಿರದ ಕಿರು ಸೇತುವೆ…

Read more

ಅಪಘಾತದ ಸಂದರ್ಭ ತಾಯಿಯನ್ನು ರಕ್ಷಿಸಿದ ಬಾಲಕಿಯ ಸಮಯಪ್ರಜ್ಞೆಗೆ ಸಿಎಂ ಶ್ಲಾಘನೆ

ಮಂಗಳೂರು : ರಸ್ತೆ ದಾಟುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ರಿಕ್ಷಾದಡಿ ಬಿದ್ದ ತಾಯಿಯನ್ನು ರಿಕ್ಷಾವನ್ನೇ ಮೇಲೆತ್ತಿ ರಕ್ಷಿಸಿದ 7ನೇ ತರಗತಿಯ ವೈಭವಿಯ ಬಗ್ಗೆ ಸಿಎಂ ಸಿದ್ಧರಾಮಯ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ‘ಎಕ್ಸ್’ನಲ್ಲಿ ಘಟನೆಯ ವೀಡಿಯೋ ಸಹಿತ ಪೋಸ್ಟ್‌ ಮಾಡಿರುವ…

Read more

ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ – ಅಪಘಾತದ ದೃಶ್ಯ ಸಿಸಿ ಟಿವಿ ಕೆಮರಾದಲ್ಲಿ ಸೆರೆ

ಕಿನ್ನಿಗೋಳಿ : ರಸ್ತೆ ದಾಟುತ್ತಿದ್ದ ಮಹಿಳೆಗೆ ರಿಕ್ಷಾ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ಕಿನ್ನಿಗೋಳಿ ರಾಮನಗರದಲ್ಲಿ ಸಂಭವಿಸಿದೆ. ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದ ರಾಜರತ್ನಪುರ ನಿವಾಸಿ ಚೇತನಾ (35) ಗಾಯಗೊಂಡವರು. ಇವರಪುತ್ರಿ 7ನೇ ತರಗತಿ ವಿದ್ಯಾರ್ಥಿನಿ ವೈಭವಿ ಸಮೀಪದ ಟ್ಯೂಷನ್ ಸೆಂಟರ್‌ಗೆ…

Read more

ಬೈಕಿಗೆ ಡಿಕ್ಕಿ ಹೊಡೆದ ಕಲ್ಲು ಸಾಗಾಟದ ಲಾರಿ : ಬೈಕ್ ಸವಾರರು ಗಂಭೀರ

ಕಾರ್ಕಳ : ಬೈಕಿಗೆ ಕಲ್ಲು ಸಾಗಾಟದ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಮುಂಜಾನೆ ಬೈಲೂರು ಸಮೀಪದ ಉಮ್ಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ಬಳಿ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಜಾರ್ಕಳ ಸಮೀಪದ…

Read more

ಸುರತ್ಕಲ್ ಬೀಚ್ ರೋಡ್ ಕುಸಿತ, ಶಾಸಕರ ಭೇಟಿ

ಸುರತ್ಕಲ್ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸುರತ್ಕಲ್ ಲೈಟ್ ಹೌಸ್ ಮತ್ತು ಎನ್‌ಐಟಿಕೆ ಸಂಪರ್ಕಿಸುವ ರಸ್ತೆ ಕುಸಿದಿದ್ದು ಶಾಸಕ ಡಾ. ಭರತ್ ಶೆಟ್ಟಿ ವೈ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆ.29ರಂದು ಬಿರುಕು ಬಿಟ್ಟ ಸ್ಥಿತಿಯಲ್ಲಿತ್ತು.…

Read more