Public Service

ಬನ್ನಂಜೆಯ ಕೊನಾರ್ಕ್ ಕಾರ್ ಗ್ಯಾಸ್ ಮಳಿಗೆಯ ವತಿಯಿಂದ ಉಚಿತ ಅಂಬುಲೆನ್ಸಿಗೆ ಅನಿಲ ಇಂಧನ ವ್ಯವಸ್ಥೆಯ ಕೊಡುಗೆ

ಉಡುಪಿ : ಬನ್ನಂಜೆಯ ಕೊನಾರ್ಕ್ ಕಾರ್ ಗ್ಯಾಸ್ ಮಳಿಗೆಯವರು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಉಚಿತ ಸೇವೆಯ ಅಂಬುಲೆನ್ಸಿಗೆ ಮಹತ್ವದ ಕೊಡುಗೆಯಾಗಿ ಅನಿಲ ಇಂಧನ ವ್ಯವಸ್ಥೆಯನ್ನು ಜೋಡಿಸಿದರು. ಈ ಸಂದರ್ಭದಲ್ಲಿ, ಕೊನಾರ್ಕ್ ಗ್ಯಾಸ್ ಮಳಿಗೆ ಮಾಲಕ ಪ್ರವೀಣ್ ಕುಮಾರ್ ಅವರು, ಸಮಾಜಸೇವಕ…

Read more

ಸೆಪ್ಟೆಂಬರ್ 2ರಿಂದ ಜಿಲ್ಲೆಯಲ್ಲಿ ‘ಎನಿವೇರ್ ನೋಂದಣಿ ವ್ಯವಸ್ಥೆ’ ಜಾರಿ – ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ

ಉಡುಪಿ : ಜಿಲ್ಲೆಯಲ್ಲಿ ಸೆಪ್ಟೆಂಬರ್ 2ರಿಂದ ‘ಎನಿವೇರ್ ನೋಂದಣಿ ವ್ಯವಸ್ಥೆ’ಯನ್ನು ಜಾರಿಗೆ ತರಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2011ರಲ್ಲಿ ಬೆಂಗಳೂರು ಹಾಗೂ 2024ರಲ್ಲಿ ತುಮಕೂರು ಮತ್ತು ಬೆಳಗಾವಿಯಲ್ಲಿ ಜಾರಿಯಾಗಿರುವ ಎನಿವೇರ್ ನೋಂದಣಿ ವ್ಯವಸ್ಥೆಯು…

Read more

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನಿಂದ ಉಡುಪಿ ಟೌನ್ ಪೊಲೀಸ್ ಠಾಣೆಗೆ ಕಂಪ್ಯೂಟರ್‌‌ಗಳ ಕೊಡುಗೆ

ಮಣಿಪಾಲ : ಸ್ಥಳೀಯ ಕಾನೂನು ಸುವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ನಿರಂತರ ಪ್ರಯತ್ನದಲ್ಲಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ (MAHE) ಉಡುಪಿ ಟೌನ್ ಪೊಲೀಸ್ ಠಾಣೆಗೆ 3 ಹೈಟೆಕ್ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಕೊಡುಗೆಯಾಗಿ ನೀಡಿದೆ. ಈ…

Read more

ಸಾಮಾಜಿಕ, ರಾಜಕೀಯ, ಧಾರ್ಮಿಕ ಮುಖಂಡ ಕಟಪಾಡಿ ಬೀಡು ವಿನಯ ಬಲ್ಲಾಳ್ ನಿಧನ

ಕಟಪಾಡಿ : ಸಾಮಾಜಿಕ, ರಾಜಕೀಯ, ಧಾರ್ಮಿಕ ಮುಖಂಡ ಕಟಪಾಡಿ ಬೀಡು ವಿನಯ ಬಲ್ಲಾಳ್ (63) ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಾಪು ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷರಾಗಿ, ಹಾಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ…

Read more

ಹುಟ್ಟುಹಬ್ಬಕ್ಕೆ “ಚರ್ಮ ಕುಟೀರ” ಕೊಡುಗೆ ನೀಡಿದ ಮಾಜಿ ಮೇಯರ್!

ಮಂಗಳೂರು : ಬಿಜೆಪಿ ದಕ್ಷಿಣ ಮಂಡಲ ಹಿಂದುಳಿದ ಮೋರ್ಚಾ ವತಿಯಿಂದ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್ ತಮ್ಮ ಹುಟ್ಟುಹಬ್ಬದ ಸವಿನೆನಪಿಗಾಗಿ ಕೊಡಮಾಡಿದ ಚರ್ಮ ಕುಟೀರದ ಉದ್ಘಾಟನೆ ಮಂಗಳವಾರ ಬೆಳಗ್ಗೆ ಆರ್‌ಟಿಓ ಕಚೇರಿ ಮುಂಭಾಗದಲ್ಲಿ ನಡೆಯಿತು. ಬಳಿಕ ಮಾತಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ…

Read more

ಕಾಂಗ್ರೆಸ್ ಹಿರಿಯ ಮುಖಂಡ ಜಾಕೋಬ್ ಡಿಸೋಜ ನಿಧನ

ಕುಂದಾಪುರ : ಕುಂದಾಪುರ ನಗರದ ಸಂಗಮ್ ಬಳಿಯ ನಿವಾಸಿ, ಕಾಂಗ್ರೆಸ್ ಹಿರಿಯ ಮುಖಂಡ ಜಾಕೋಬ್ ಡಿಸೋಜ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕುಂದಾಪುರ ನಗರದ ಪುರಸಭಾ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗೂ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು,…

Read more

ಸಿಂಗಂ ಸಂದೇಶ್ ಅವರಿಗೆ ಮುಖ್ಯಮಂತ್ರಿ ಪದಕ ಗೌರವ

ಮೂಡಬಿದಿರೆಯ ಸಿಂಗಂ ಎಂದೇ ಪ್ರಖ್ಯಾತಿ ಪಡೆದಿರುವ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಕರ್ತವ್ಯ ನಿರ್ವಹಿಸಿದ ಕಡೆಗಳಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದು, ಡೇರಿಂಗ್ ಇಮೇಜಿನಿಂದ ಸಾರ್ವಜನಿಕ ವಲಯದಲ್ಲಿ ಅಪಾರ ಪ್ರಸಿದ್ಧಿ…

Read more

ಹೆಡ್ ಕಾನ್‌ಸ್ಟೇಬಲ್ ಬಿ. ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ

ಉಡುಪಿ : ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್‌ಬಿ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಬಿ. ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಲಭಿಸಿದೆ. ಇವರು 1993‌ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಈತನಕ ಪಣಂಬೂರು,…

Read more

ನಿವೃತ್ತ ಪೊಲೀಸ್ ನಿರೀಕ್ಷಕ ಜಯಂತ್ ನಿಧನ

ಉಡುಪಿ : ನಿವೃತ್ತ ಪೊಲೀಸ್ ನಿರೀಕ್ಷಕ ಎಂ.ಜಯಂತ್(61) ಅವರು ಹೃದಯಾಘಾತದಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು 1992ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಮಣಿಪಾಲ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ಆರಂಭಿಸಿದರು. ಬಳಿಕ ವಿವಿಧ ಹಂತಗಳಲ್ಲಿ ಭಡ್ತಿ ಹೊಂದಿ ಉಡುಪಿ ಮಹಿಳಾ…

Read more

ಬಸ್‌ನಲ್ಲಿ ಅಸ್ವಸ್ಥ ಗೊಂಡ ಯುವತಿ : ಮತ್ತೊಮ್ಮೆ ಬಸ್ ಚಾಲಕರಿಂದ ಮಾನವೀಯ ಕಾರ್ಯ

ಉಡುಪಿ : ಕರಾವಳಿಯ ಖಾಸಗಿ ಬಸ್‌ನ ಚಾಲಕ ಹಾಗೂ ನಿರ್ವಾಹಕರು ಮತ್ತೊಮ್ಮೆ ಮಾನವೀಯತೆ ಮೆರೆದ ಘಟನೆ ಉಡುಪಿಯಲ್ಲಿ ನಡೆದಿದ್ದು, ‘ನವೀನ್’ ಬಸ್ ಸಿಬಂದಿಗಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಸ್ವಸ್ಥ‌ಗೊಂಡ ಯುವತಿಗಾಗಿ ಬಸ್‌ಅನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಾಲಕ ಹಾಗೂ ನಿರ್ವಾಹಕ ಬಾಲಕಿಯನ್ನು…

Read more