Public Protest

ನಡುರಸ್ತೆಯಲ್ಲೇ ಗೋವಿನ ರುಂಡ, ದೇಹದ ಭಾಗಗಳು ಪತ್ತೆ : ಸ್ಥಳೀಯರಿಂದ ಆಕ್ರೋಶ

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜಡ್ಕಲ್ ಸಮೀಪ ನಡುರಸ್ತೆಯಲ್ಲಿ ಗೋವಿನ ರುಂಡಗಳು, ಮತ್ತು ದೇಹದ ಭಾಗಗಳು ಪತ್ತೆಯಾಗಿವೆ. ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ…

Read more

ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನಾಡ, ಆಲೂರು, ಹಕ್ಲಾಡಿ ಗ್ರಾಮಸ್ಥರಿಂದ ಉಡುಪಿಯಲ್ಲಿ ಧರಣಿ

ಉಡುಪಿ : ಸರಕಾರಿ ಬಸ್ ಸೌಲಭ್ಯ ಇಲ್ಲದ ಕುಂದಾಪುರ ತಾಲೂಕಿನ ಆಲೂರು, ಹೊಯ್ಯಾಣ ಕ್ರಾಸ್, ತಾರಿಬೇರು, ಅಕ್ಷಾಲಿಬೆಟ್ಟು ಕೋಣ್ಕಿ, ನಾಡ, ಮೊವಾಡಿ ಗ್ರಾಮಸ್ಥರು ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಇಂದು ಮಣಿಪಾಲದ ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಧರಣಿ ನಡೆಸಿದರು.…

Read more

ಸಾರಿಗೆ ದರ ಹೆಚ್ಚಳ ಜನ ವಿರೋಧಿ : ಉಡುಪಿ ಜಿಲ್ಲಾ ಸಿಪಿಐಎಂ ಖಂಡನೆ

ಉಡುಪಿ : ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಾರಿಗೆ ದರಗಳು ಶೇಕಡ 15ರಷ್ಟು ಹೆಚ್ಚಿಸಿರುವ ರಾಜ್ಯ ಸರಕಾರ ಕ್ರಮವನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ. ಡೀಸೆಲ್ ದರಗಳ ಹೆಚ್ಚಳ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳದ ನೆಪದಲ್ಲಿ ದರ…

Read more

ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆಯಲ್ಲಿ ರಸ್ತೆತಡೆ – ಚಿತ್ರೀಕರಿಸಿದ ಪತ್ರಕರ್ತರನ್ನು ದಬಾಯಿಸಿದ ಹಿಂದೂ ಕಾರ್ಯಕರ್ತರು

ಮಂಗಳೂರು : ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನೆಯಲ್ಲಿ ಕೆಲ ಹಿಂದೂ ಕಾರ್ಯಕರ್ತರು ಪತ್ರಕರ್ತರ ಮೇಲೆಯೇ ಗೂಂಡಾಗಿರಿ ವರ್ತನೆ ತೋರಿದ ಘಟನೆ ಬುಧವಾರ ನಡೆದಿದೆ. ಸಾವಿರಾರು ಮಂದಿ ಕಾರ್ಯಕರ್ತರು ಜಮಾಯಿಸಿ ಈ…

Read more

ಮಂಗಳೂರು ಪೊಲೀಸ್ ಕಮೀಷನ‌ರ್ ಅನುಪಮ್ ಅಗರ್ವಾಲ್‌ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

ಉಡುಪಿ : ಜನ ವಿರೋಧಿ, ಸರ್ವಾಧಿಕಾರಿ ಧೋರಣೆಯ ಮಂಗಳೂರು ಪೋಲಿಸ್ ಕಮೀಷನ‌ರ್ ಅನುಪಮ್ ಅಗರ್ವಾಲ್‌ ವರ್ಗಾವಣೆಗೊಳಿಸುವಂತೆ ಒತ್ತಾಯಿಸಿ ಸಿಪಿಐಎಂ, ದಲಿತ ಸಂಘರ್ಷ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ…

Read more

“ಶಾಸಕರು ಜನರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ” – ಸುರತ್ಕಲ್ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನಾ ಜಾಥಾ

ಸುರತ್ಕಲ್ : “ಸುರತ್ಕಲ್ ರೈಲ್ವೇ ಮೇಲ್ಸೇತುವೆ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಕಾಮಗಾರಿ ನಡೆಸಲು 78 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ನಡೆಸಲಾಗಿಲ್ಲ. ಸಂಬಂಧಪಟ್ಟ ಮನಪಾ ಸದಸ್ಯರಿಂದ ಹಿಡಿದು ಶಾಸಕರವರೆಗೆ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಮುಂದಿನ 15 ದಿನಗಳ ಒಳಗಾಗಿ ಕಾಮಗಾರಿ…

Read more

ಉಳಾಯಿಬೆಟ್ಟು ಕಿರುಸೇತುವೆ ಬದಿಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಬೇಡಿಕೆ : ನ.13ರಂದು ಸಾರ್ವಜನಿಕ ಪ್ರತಿಭಟನೆ..!

ಮಂಗಳೂರು : ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾಲೆ ಮೇಲ್ಮನೆಯಲ್ಲಿರುವ, ಸದ್ಯ ಶಿಥಿಲಗೊಂಡಿದೆ ಎಂದು, ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟಿರುವ ಉಳಾಯಿಬೆಟ್ಟುವಿನ ಕಿರು ಸೇತುವೆಗೆ ಪರ್ಯಾಯವಾಗಿ ಅಲ್ಲೇ ಪಕ್ಕದಲ್ಲಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಸಾರ್ವಜನಿಕರು ನಿಶ್ಚಯಿಸಿರುತ್ತಾರೆ. ಆದರೆ ಉಳಾಯಿಬೆಟ್ಟು-ಪೆರ್ಮಂಕಿ-ಮಲ್ಲೂರು…

Read more

ಬಿಪಿಎಲ್ ಕಾರ್ಡ್ ರದ್ದತಿ ತೀರ್ಮಾನ ರಾಜ್ಯ ಕಾಂಗ್ರೆಸ್ ಸರಕಾರದ ದಿವಾಳಿತನಕ್ಕೆ ಜ್ವಲಂತ ಸಾಕ್ಷಿ : ಕಿಶೋರ್ ಕುಮಾರ್ ಕುಂದಾಪುರ

ಬಡ ಮತ್ತು ಮಧ್ಯಮ ವರ್ಗದ ಜನತೆಯನ್ನು ಗ್ಯಾರಂಟಿಗಳ ಜಾಲಕ್ಕೆ ಸಿಲುಕಿಸಿ ವಾಮ ಮಾರ್ಗದಿಂದ ಅಧಿಕಾರಕ್ಕೇರಿದ ಕಾಂಗ್ರೆಸ್ ಇದೀಗ ಜನತೆಯನ್ನು ವಂಚಿಸಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳ ರದ್ದತಿಗೆ ತೀರ್ಮಾನ ಕೈಗೊಂಡಿರುವುದು ರಾಜ್ಯ ಸರಕಾರದ ದಿವಾಳಿತನಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ…

Read more

ಅರ್ಹರ ರೇಶನ್ ಕಾರ್ಡ್ ರದ್ದು ಮಾಡಿದರೆ ಹೋರಾಟ – ಸಿಪಿಐಎಂ

ಉಡುಪಿ : ಜಿಲ್ಲೆಯಲ್ಲಿ ರೇಶನ್ ಕಾರ್ಡ್‌ಗಳನ್ನು ರದ್ದು ಮಾಡಲು ರೇಶನ್ ಅಂಗಡಿಗಳ ಮುಂದೆ ನೋಟೀಸು ಹಾಕಿರುವುದಾಗಿ ಜನರಿಂದ ದೂರು ಬಂದಿದ್ದು, ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಕೂಡಲೇ ನಿಜ ಸಂಗತಿಯನ್ನು ಜನರಿಗೆ ವಿವರಿಸಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ. ಬಡ…

Read more

ಶಾಸಕ ಭರತ್ ಶೆಟ್ಟಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಂಗಳೂರು : ಅಡ್ಡೂರು ಮಿನಿ ಪಾಕಿಸ್ತಾನ ಹೇಳಿಕೆ ನೀಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಬಂಧನಕ್ಕೆ ಆಗ್ರಹಿಸಿ ಅಡ್ಡೂರು ನಾಗರಿಕ ಸಮಿತಿ ನೇತೃತ್ವದಲ್ಲಿ ರವಿವಾರ ಅಡ್ಡೂರು ಜಂಕ್ಷನ್‌ನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಪ್ರತಿಭಟನಾ ಉದ್ದೇಶಿಸಿ ಅಡ್ಡೂರು ಬದ್ರಿಯಾ…

Read more