Protest

ಆಪಲ್ ಐ ಫೋನ್ ಸರ್ವಿಸ್ ಸೆಂಟರ್ ವಿರುದ್ಧ ಮೊಬೈಲ್ ರಿಟೇಲರ್ಸ್ ಪ್ರತಿಭಟನೆ

ಮಂಗಳೂರು : “ನಮ್ಮಲ್ಲಿ ಹಾಗು ಬೇರೆ ಕಡೆ ಮೊಬೈಲ್ ಖರೀದಿಸಿದ ಹಲವು ಗ್ರಾಹಕರು ಆಪಲ್ IOS UPDATE ನಂತರ ಮೊಬೈಲ್ ಸ್ಕ್ರೀನ್‌ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲ್ಯಾಂಕ್ ಆಗುವಂತಹ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಯಿಂದ ನೊಂದ ಗ್ರಾಹಕರು ಆಪಲ್‌ನ ಸರ್ವಿಸ್ ಸೆಂಟರ್…

Read more

ಸಾವಿರಾರು ಸಂಖ್ಯೆಯಲ್ಲಿ ರಿಕ್ಷಾ ಚಾಲಕರಿಂದ ಮೆರವಣಿಗೆ, ಪ್ರತಿಭಟನೆ

ಮಂಗಳೂರು : ಎಲೆಕ್ಟಿಕಲ್ ಅಟೋ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ ನೀಡಿರುವ ಆದೇಶವನ್ನು ವಾಪಸ್ ಪಡೆಯಲು ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ಆಟೋ ರಿಕ್ಷಾ ಚಾಲಕರು ಮೆರವಣಿಗೆ ಪ್ರತಿಭಟನಾ ಸಭೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟ…

Read more

ರಾಜ್ಯಪಾಲರ ಅವಹೇಳನ – ಕಾನೂನು ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಪ್ರತಿಭಟನೆ

ಮಂಗಳೂರು : ರಾಜ್ಯಪಾಲರನ್ನು ಅವಹೇಳನ ಮಾಡಿದ ಕಾಂಗ್ರೆಸ್ಸಿಗರ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಯುವ ಮೋರ್ಚಾ ನೇತೃತ್ವದಲ್ಲಿ ರಸ್ತೆ ತಡೆ ಸಹಿತ ಬೃಹತ್ ಪ್ರತಿಭಟನೆಯು ಪಿವಿಎಸ್ ಸರ್ಕಲ್…

Read more

ವಾಹನಗಳ ಸಾಮೂಹಿಕ ಆತ್ಮಹತ್ಯೆ! ಟೋಲ್ ವಿರೋಧಿ ಹೋರಾಟ ಪ್ರದೇಶದಲ್ಲಿ ಗಮನ ಸೆಳೆದ ಅಣಕು ಪ್ರದರ್ಶನ

ಪಡುಬಿದ್ರಿ-ಬೆಳ್ಮಣ್-ಕಾರ್ಕಳ ರಾಜ್ಯ ಹೆದ್ದಾರಿಗೆ ಟೋಲ್‌ಗೇಟ್ ನಿರ್ಮಿಸುವ ಹುನ್ನಾರ ನಡೆಯುತ್ತಿರುವ ಹಿನ್ನಲೆಯಲ್ಲಿ ಕಂಚಿನಡ್ಕದಲ್ಲಿ ಸಾರ್ವಜನಿಕವಾಗಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ವಾಹನಗಳು ಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಅಣಕು ಪ್ರದರ್ಶನ ಜನರ ಗಮನ ಸೆಳೆಯುತ್ತಿದೆ. ಈ ವಾಹನಗಳು ಬ್ಯಾಂಕ್ ಸಾಲ ಕಟ್ಟಲಾರದೆ ಆತ್ಮಹತ್ಯೆ…

Read more

ರಾಜ್ಯಪಾಲರ ನಡೆಯ ವಿರುದ್ಧ ಸಹಬಾಳ್ವೆ ಸಂಘಟನೆಯಿಂದ ಪ್ರತಿಭಟನೆ

ಉಡುಪಿ : ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಗಳ ದೂರಿನ ಅನ್ವಯ ಪ್ರಾಸಿಕ್ಯೂಷನ್’ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಸಹಬಾಳ್ವೆ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಸಹಬಾಳ್ವೆ ಸಂಘಟನೆಯ…

Read more

ಎಂಎಲ್‌ಸಿ ಐವಾನ್ ಡಿಸೋಜ ಮೇಲೆ ಎಫ್ಐಆರ್‌‌ಗೆ ಬಿಜೆಪಿ ಯುವಮೋರ್ಚಾ 24ಗಂಟೆಯ ಗಡುವು

ಮಂಗಳೂರು : ದೇಶವಿರೋಧಿ ಹೇಳಿಕೆ ಆರೋಪದಲ್ಲಿ ಎಂಎಲ್‌ಸಿ ಐವಾನ್ ಡಿಸೋಜ ಮೇಲೆ ಪ್ರಕರಣ ದಾಖಲಿಸುವಂತೆ ಬಿಜೆಪಿ ಯುವಮೋರ್ಚಾ ಪೊಲೀಸರಿಗೆ ಮತ್ತೆ 24ಗಂಟೆಯ ಗಡುವು ನೀಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿದ ರಾಜ್ಯಪಾಲರ ನಡೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಎಂಎಲ್‌ಸಿ ಐವಾನ್…

Read more

ಕೊಲ್ಕತ್ತ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ – ವಿಮಾ ನೌಕರರಿಂದ ಪ್ರತಿಭಟನೆ

ಉಡುಪಿ : ಕೊಲ್ಕತ್ತ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವಿರೋಧಿಸಿ ವಿಮಾ ನೌಕರರು ಮತ್ತು ಅಧಿಕಾರಿಗಳು ಉಡುಪಿ ವಿಭಾಗೀಯ ಕಛೇರಿಯ ಮುಂದೆ ಇಂದು ಮತ ಪ್ರದರ್ಶನ ನಡೆಸಿದರು. ದೇಶದಾದ್ಯಂತ ಕೊಲ್ಕತ್ತದ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ…

Read more

ಕಾಂಗ್ರೆಸ್ ಪ್ರತಿಭಟನೆ‌ಯಲ್ಲಿ ಬಸ್ಸಿಗೆ ಕಲ್ಲು ತೂರಾಟ – ಟಯರ್ ಸುಟ್ಟು ಆಕ್ರೋಶ, ಪ್ರತಿಭಟನಾಕಾರರು ವಶಕ್ಕೆ

ಮಂಗಳೂರು : ಸಿಎಂ ಸಿದ್ದರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿದ ರಾಜ್ಯಪಾಲರ ವಿರುದ್ಧ ಖಂಡನೆ ವ್ಯಕ್ತಪಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಇಂದು ಮನಪಾದ ಮುಂಭಾಗ ಪ್ರತಿಭಟನೆ ನಡೆದ ವೇಳೆ ಉದ್ರಿಕ್ತ ಕಾರ್ಯಕರ್ತರು ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಈ ವೇಳೆ…

Read more

ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ – ಹಿಂದೂ ಸಂಘಟನೆಯಿಂದ ಮಾನವ ಸರಪಣಿ

ಉಡುಪಿ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ನಗರದಲ್ಲಿ ಬೃಹತ್ ಮಾನವ ಸರಪಣಿ ನಡೆಸಲಾಯಿತು.ಹಿಂದೂ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಮಾನವ ಸರಪಣಿ ಮೂಲಕ ಪ್ರತಿಭಟನೆ ದಾಖಲಿಸಲಾಯಿತು. ಮಾನವ ಸರಪಣಿ ನಿರ್ಮಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಕಾರ್ಯಕರ್ತರು, ಹಿಂದೂಗಳ…

Read more

ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಜಿಹಾದಿಗಳಿಂದ ನಡೆಯುತ್ತಿರುವ ಹಿಂದೂ ನರಮೇಧವನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ

ಕಾರ್ಕಳ : ಅಭಿನವ ಭಾರತ ವತಿಯಿಂದ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಜಿಹಾದಿಗಳಿಂದ ನಡೆಯುತ್ತಿರುವ ಹಿಂದೂ ನರಮೇಧವನ್ನು ಖಂಡಿಸಿ ಪ್ರತಿಭಟನೆ ನಡೆಯಲಿದೆ. ಇಂದು ಸಂಜೆ 5 ಗಂಟೆಗೆ ಕಾರ್ಕಳ ಅನಂತಶಯನ ದೇವಸ್ಥಾನದಿಂದ ಪ್ರಾರಂಭವಾಗಿ ಕಾರ್ಕಳ ಬಸ್ ನಿಲ್ದಾಣದ ತನಕ ಮೆರವಣಿಗೆ ಸಾಗಲಿದೆ. ಬಾಂಗ್ಲಾದೇಶದ ಹಿಂದೂ…

Read more