Protest

ಬಾಂಗ್ಲಾದೇಶದ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ಡಿ. 04ರಂದು ಮಂಗಳೂರಿನಲ್ಲಿ ಪ್ರತಿಭಟನೆ; ಪುತ್ತೂರಿನಿಂದ 2 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ : ವಿಹಿಂಪ

ಪುತ್ತೂರು : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಡಿ.4 ರಂದು ಹಿಂದೂ ಹಿತರಕ್ಷಣಾ ಸಮಿತಿಯಿಂದ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ವಿಶ್ವಹಿಂದೂ ಪರಿಷತ್ ಬೆಂಬಲ ನೀಡಲಿದ್ದು, ಪುತ್ತೂರಿನಿಂದ 2 ಸಾವಿರ ಮಂದಿ ಮಂಗಳೂರಿಗೆ ತೆರಳುವ ನಿರೀಕ್ಷೆಯಿದೆ ಎಂದು ವಿಶ್ವಹಿಂದೂ ಪರಿಷದ್…

Read more

ಕುಲಾಧಿಪತಿ ಹುದ್ದೆ ರಾಜ್ಯಪಾಲರ ಬದಲು ಮುಖ್ಯಮಂತ್ರಿಗಳಿಗೆ – ಎಬಿವಿಪಿ ಖಂಡನೆ

ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಹುದ್ದೆಯನ್ನು ರಾಜ್ಯಪಾಲರ ಬದಲು ಮುಖ್ಯಮಂತ್ರಿಗಳಿಗೆ ನೀಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ಪ್ರತಿಭಟನೆಯನ್ನು…

Read more

ಮಹಾಲಕ್ಷ್ಮಿ ಬ್ಯಾಂಕ್ ಅವ್ಯವಹಾರ ಆರೋಪ; ಮಲ್ಪೆ ಠಾಣೆಯೆದುರು ಸಂತ್ರಸ್ತರ ಮೌನ ಪ್ರತಿಭಟನೆ

ಮಲ್ಪೆ : ಮಹಾಲಕ್ಷ್ಮಿ ಕೋ-ಆಪರೇಟಿವ್ ಸಹಕಾರಿ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಬ್ಯಾಂಕ್‌ನಲ್ಲಿ ಹಲವು ಮಂದಿಗೆ ಅನ್ಯಾಯ ಎಸಗಲಾಗಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಕೂಡ ಈ ಹಿಂದೆ ಆರೋಪಿಸಿದ್ದರು. ಇದೀಗ ಬ್ಯಾಂಕ್‌ನಲ್ಲಿ ಅನ್ಯಾಯಕ್ಕೆ ಒಳಗಾಗಿದ್ದಾರೆ ಎನ್ನಲಾದ…

Read more

ಎಸ್ಪಿ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ : ಐವರು ಬಿಜೆಪಿ ಶಾಸಕರು ಭಾಗಿ

ಉಡುಪಿ : ಹಿಂದೂ ಸಂಘಟನೆಗಳು ಇಂದು ಉಡುಪಿ ಎಸ್ಪಿ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಪ್ರತಿಭಟನೆಯಲ್ಲಿ ಬಿಜೆಪಿಯ ಐವರು ಶಾಸಕರು ಭಾಗಿಯಾಗಿದ್ದು ವಿಶೇಷವಾಗಿತ್ತು. ಪ್ರಾರಂಭದಲ್ಲಿ ಎಸ್ಪಿ ಕಚೇರಿಯೆದುರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಪಿ ಕಚೇರಿ ಮುಂಭಾಗದಲ್ಲಿ ಭಾರಿ…

Read more

ನವೆಂಬರ್ 21 ಜಿಲ್ಲಾ ಬಿಜೆಪಿಯಿಂದ ವಕ್ಫ್ ಬೋರ್ಡ್ ಅಕ್ರಮದ ವಿರುದ್ಧ ‘ಬೃಹತ್ ಪ್ರತಿಭಟನೆ’ ಮತ್ತು ‘ಧರಣಿ ಸತ್ಯಾಗ್ರಹ’

ಉಡುಪಿ : ಕಾಂಗ್ರೆಸ್ಸಿನ ತುಷ್ಟೀಕರಣ ನೀತಿ, ಒಡೆದು ಆಳುವ ನೀತಿ, ಸ್ವಾರ್ಥ ರಾಜಕಾರಣದ ಫಲವಾಗಿ ರೈತರ, ಮಠಮಾನ್ಯಗಳ ಅಸ್ತಿಯನ್ನು ಕಬಳಿಸುತ್ತಿರುವ ವಕ್ಫ್ ಬೋರ್ಡ್ ಅಕ್ರಮವನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ “ನಮ್ಮ ಭೂಮಿ ನಮ್ಮ ಹಕ್ಕು” ಘೋಷ…

Read more

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹೆದ್ದಾರಿ ತಡೆ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ಮೇಲೆ ಪ್ರಕರಣ ದಾಖಲು

ಸುಬ್ರಹ್ಮಣ್ಯ : ಕಸ್ತೂರಿ ರಂಗನ್ ವರದಿ ವಿರೋಧಿಸಿ ನಿನ್ನೆ ಗುಂಡ್ಯದಲ್ಲಿ ನಡೆದ ಪ್ರತಿಭಟನೆ ವೇಳೆ ಅನುಮತಿ ಇಲ್ಲದೆ ರಸ್ತೆ ತಡೆ ನಡೆಸಿದ ಆರೋಪದ ಮೇಲೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆ…

Read more

ಕಟ್ಟಡ ಪರವಾನಿಗೆ ನೀಡಲು ಸತಾಯಿಸುತ್ತಿರುವ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ವ್ಯಕ್ತಿಯ ‘ಏಕಾಂಗಿ ಧರಣಿ’

ಉಡುಪಿ : ಹಲವು ಬಾರಿ ಕಚೇರಿಗೆ ಅಲೆದಾಟ ಮಾಡಿದರೂ ಕಟ್ಟಡ ಪರವಾನಿಗೆ ನೀಡುತ್ತಿಲ್ಲ ಎಂದು ಆರೋಪಿಸಿ ಅರ್ಜಿದಾರ, ಸಾಮಾಜಿಕ ಕಾರ್ಯಕರ್ತರೊಬ್ಬರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯೊಳಗೆ ಧರಣಿ ಕುಳಿತ ಘಟನೆ ನಡೆದಿದೆ. ಕಚೇರಿಯೊಳಗೆ ಕುಳಿತು ಧರಣಿ ನಡೆಸಿದ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್…

Read more

ಸ್ಪೀಕರ್ ಯು.ಟಿ.ಖಾದರ್ ಮೇಲಿನ ಆಕ್ರೋಶ; ತಪ್ಪಾಗಿ ಗ್ರಹಿಸಿದ ಡಿವೈಎಫ್ಐ ಕಾರ್ಯಕರ್ತರಿಂದ ಕೇಂದ್ರ ಸಚಿವರ ಕಾರಿಗೆ ಮುತ್ತಿಗೆ

ಉಳ್ಳಾಲ : ರಸ್ತೆಹೊಂಡಕ್ಕೆ ಸ್ಕೂಟರ್ ಬಿದ್ದು ರಸ್ತೆಗೆಸೆಯಲ್ಪಟ್ಟ ಸಹಸವಾರೆ ಮೇಲೆಯೇ ಟ್ಯಾಂಕರ್‌ ಹರಿದು ಆಕೆ ಮೃತಪಟ್ಟ ಹಿನ್ನೆಲೆಯಲ್ಲಿ ರಸ್ತೆತಡೆ ನಡೆಸಿದ ಡಿವೈಎಫ್ಐ ಕಾರ್ಯಕರ್ತರು ಸ್ಪೀಕರ್ ಯು.ಟಿ.ಖಾದರ್ ಅವರ ಕಾರು ಎಂದು ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅವರ ಕಾರಿಗೆ ಮುತ್ತಿಗೆ…

Read more

ಉಳಾಯಿಬೆಟ್ಟು ಕಿರುಸೇತುವೆ ಬದಿಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಬೇಡಿಕೆ : ನ.13ರಂದು ಸಾರ್ವಜನಿಕ ಪ್ರತಿಭಟನೆ..!

ಮಂಗಳೂರು : ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾಲೆ ಮೇಲ್ಮನೆಯಲ್ಲಿರುವ, ಸದ್ಯ ಶಿಥಿಲಗೊಂಡಿದೆ ಎಂದು, ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟಿರುವ ಉಳಾಯಿಬೆಟ್ಟುವಿನ ಕಿರು ಸೇತುವೆಗೆ ಪರ್ಯಾಯವಾಗಿ ಅಲ್ಲೇ ಪಕ್ಕದಲ್ಲಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಸಾರ್ವಜನಿಕರು ನಿಶ್ಚಯಿಸಿರುತ್ತಾರೆ. ಆದರೆ ಉಳಾಯಿಬೆಟ್ಟು-ಪೆರ್ಮಂಕಿ-ಮಲ್ಲೂರು…

Read more

ಫಳ್ನೀರ್ ವಾಸ್ ಲೇನ್ ರೋಗ ಉತ್ಪತ್ತಿ ತಾಣ, ಸ್ಥಳೀಯರಿಂದ ಪಾಲಿಕೆಯೆದುರು ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು : ಫಳ್ನೀರ್ ವಾಸ್ ಲೇನ್ ಪರಿಸರ ನಿವಾಸಿಗಳು ಮನಪಾಗೆ ಅತ್ಯಧಿಕ ತೆರಿಗೆ ಪಾವತಿಸಿದರೂ ಮನಪಾ ನಿರ್ಲಕ್ಷ್ಯದಿಂದಾಗಿ ಸೊಳ್ಳೆ ಮತ್ತು ರೋಗ ಉತ್ಪತ್ತಿ ಕೇಂದ್ರ ಆಗಿದ್ದು ಇಲ್ಲಿನ ಜನರ ವಾಸಿಸಲೂ ಕಷ್ಟಪಡುತ್ತಿದ್ದಾರೆ. ತಕ್ಷಣ ಸಮಸ್ಯೆ ಬಗೆಹರಿಸದಿದ್ದಲ್ಲಿ ಮನಪಾ ಎದುರು ಪ್ರತಿಭಟನೆ ನಡೆಸಲಾಗುವುದು…

Read more