ಇಂದ್ರಾಳಿ ಪರಿಸರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ ಅಪರಿಚಿತ ವ್ಯಕ್ತಿ : ಆಸ್ಪತ್ರೆಗೆ ದಾಖಲು
ಉಡುಪಿ : ಇಂದ್ರಾಳಿ ಪರಿಸರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಮಣಿಪಾಲ ಪೋಲಿಸರ ಸಹಕಾರದಿಂದ ವಶಕ್ಕೆ ಪಡೆದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಸೋಮವಾರ ನಡೆದಿದೆ. ದಾಖಲಿಸಲ್ಪಟ್ಟಿರುವ ವ್ಯಕ್ತಿ ಮನೋರೋಗಿಯಾಗಿದ್ದು, ಪಶ್ಚಿಮ ಬಂಗಾಳದವನೆಂದು ತಿಳಿದುಬಂದಿದೆ.…