Manipal

ಮಣ್ಣಪಳ್ಳ ಕೆರೆ ಸಮಗ್ರ ಅಭಿವೃದ್ಧಿ ಹಾಗೂ ನಿರ್ವಹಣೆ ನಗರಸಭೆಗೆ ಹಸ್ತಾಂತರಿಸಿ : ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ

ಉಡುಪಿ : ಮಣಿಪಾಲದ ಮಣ್ಣಪಳ್ಳ ಕೆರೆಯ ಅಸಮರ್ಕಪ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದು, ಖಾಸಗಿ ವ್ಯಕ್ತಿಗಳ ಮೂಲಕ ಜಿಲ್ಲಾಡಳಿತ ಮಣ್ಣಪಳ್ಳ ಕೆರೆಯನ್ನು ನಿರ್ವಹಣೆಗೆ ನೀಡಲು ಮುಂದಾಗಿರುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಮಣ್ಣಪಳ್ಳ ಕೆರೆಯ ಸಮಗ್ರ…

Read more

ವೈದ್ಯಕೀಯ ಶಿಕ್ಷಣದಲ್ಲಿ ಆಧುನಿಕ VR-ಆಧಾರಿತ ಕೌಶಲ ತರಬೇತಿಗೆ ಮೆಡಿಸಿಮ್ ವಿಆರ್‌ನೊಂದಿಗೆ ಮಾಹೆ ಒಪ್ಪಂದ

ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ವೈದ್ಯಕೀಯ ಕೌಶಲ ತರಬೇತಿಗಾಗಿ ವರ್ಚುವಲ್ ರಿಯಾಲಿಟಿ (VR) ಪ್ರವರ್ತಕ ಕಂಪನಿ ಮೆಡಿಸಿಮ್ ವಿಆರ್ (MedisimVR) ನೊಂದಿಗೆ ಏಪ್ರಿಲ್ 14 ರಂದು ಒಪ್ಪಂದಕ್ಕೆ (MoU) ಸಹಿ ಹಾಕಿದೆ. ಈ ಒಪ್ಪಂದವು ವೈದ್ಯಕೀಯ…

Read more

ಬಾಬು ಜಗಜೀವನ ರಾಮ್‌ರವರ ಜೀವನಮೌಲ್ಯಗಳು ಸರ್ವ ಕಾಲಕ್ಕೂ ಆದರ್ಶಪ್ರಾಯವಾದುದು : ಸಂಸದ ಕೋಟ

ಉಡುಪಿ : ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸಮಾನತೆ, ಅಸ್ಪೃಶ್ಯತೆ, ಜಾತಿಪದ್ಧತಿ ವಿರುದ್ಧ ಹೋರಾಡಿ, ದೀನದಲಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಅವಿರತವಾಗಿ ಶ್ರಮಿಸಿದ ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ಬಾಬು ಜಗಜೀವನ ರಾಮ್‌ರವರ ಜೀವನಮೌಲ್ಯಗಳು ಸರ್ವ ಕಾಲಕ್ಕೂ ಆದರ್ಶಪ್ರಾಯವಾಗಿದೆ…

Read more

ನಾವೀನ್ಯತೆ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯನ್ನು ಉತ್ತೇಜಿಸಲು ಡ್ಯೂರ್ ಟೆಕ್ನಾಲಜೀಸ್‌ನೊಂದಿಗೆ ಮಾಹೆ ಪಾಲುದಾರಿಕೆ

ಮಣಿಪಾಲ : ಮುಂದುವರಿದ ಸಂಶೋಧನೆ, ಶಿಕ್ಷಣ, ಆರೋಗ್ಯ ಆವಿಷ್ಕಾರ ಮತ್ತು ಪರಿವರ್ತನಾತ್ಮಕ ಪರಿಹಾರಗಳಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಡ್ಯೂರ್ ಟೆಕ್ನಾಲಜೀಸ್ ಪ್ರೈ.ಲಿ ಜೊತೆ ಕಾರ್ಯತಂತ್ರದ ಪಾಲುದಾರಿಕೆಯೊಂದಕ್ಕೆ ಬಂದಿದ್ದು, ಸಹಿ ಹಾಕಿದೆ. ಈ ಕುರಿತ ಕಾರ್‍ಯಕ್ರಮದಲ್ಲಿ…

Read more

ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರಾಗಿ ಆಸ್ಟ್ರೋ ಮೋಹನ್ ನೇಮಕ

ಉಡುಪಿ : ಹಿರಿಯ ಕಲಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರನ್ನಾಗಿ ನೇಮಕ ಮಾಡಿ ಅಕಾಡೆಮಿ ಆದೇಶ ಹೊರಡಿಸಿದೆ. ಉದಯವಾಣಿ ಮಣಿಪಾಲ ಆವೃತ್ತಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಆಸ್ಟ್ರೋ ಮೋಹನ್ ಕಳೆದ…

Read more

ಕೆಎಂಸಿ ಉದ್ಯೋಗಿಯ ಮಾಂಗಲ್ಯ ಸರ ಎಗರಿಸಿದ ಆರೋಪಿ ಅರೆಸ್ಟ್

ಮಣಿಪಾಲ : ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಕೆಎಂಸಿ ಆಸ್ಪತ್ರೆಯ ಸಿಬ್ಬಂದಿ, ಹೆರ್ಗಾ ನಿವಾಸಿ ವಸಂತಿ ಅವರನ್ನು ಹಿಂಬಾಲಿಸಿ 45 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ವಾನದಳ ನೀಡಿದ ಸುಳಿವನ್ನು ಆದರಿಸಿ ಮಣಿಪಾಲ…

Read more

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಏಷ್ಯಾದ ಮೊದಲ ಮಾಮಾ ಅನ್ನಿ ಹೈ-ಫಿಡೆಲಿಟಿ ಬರ್ತಿಂಗ್ ಸಿಮ್ಯುಲೇಟರ್ ಪರಿಚಯ

ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಏಷ್ಯಾದ ಮೊದಲ ಮಾಮಾ ಅನ್ನಿ ಹೈ-ಫಿಡೆಲಿಟಿ ಬರ್ತಿಂಗ್ ಸಿಮ್ಯುಲೇಟರ್ ಅನ್ನು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪರಿಚಯಿಸಲಾಗಿದೆ. ಈ ಮೂಲಕ ವೈದ್ಯಕೀಯ ಶಿಕ್ಷಣ ಮತ್ತು ತಾಯಂದಿರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ…

Read more

ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಸಿಬ್ಬಂದಿ ಹೊಡೆದಾಟ – ಇಬ್ಬರ ಬಂಧನ, ಬಸ್ ಜಪ್ತಿ

ಮಣಿಪಾಲ : ಮಣಿಪಾಲ ಟೈಗರ್‌ ಸರ್ಕಲ್‌ ಬಳಿ ಖಾಸಗಿ ಬಸ್‌ ಸಿಬ್ಬಂದಿಗಳ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಸಂಜೆ ಮಣಿಪಾಲದ ಟೈಗರ್‌ ಸರ್ಕಲ್‌ ಬಳಿ ಇರುವ ಖಾಸಗಿ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸುವ…

Read more

ನಾಪತ್ತೆಯಾಗಿದ್ದ ವ್ಯಕ್ತಿ‌ ಶವವಾಗಿ ಪತ್ತೆ

ಮಣಿಪಾಲ : ಗುಡ್ಡದ ಇಳಿಜಾರು ತಗ್ಗು ಕಾಡು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಗಂಡಸಿನ ಶವವು, ಬುಧವಾರ ತಡಸಂಜೆ ಪತ್ತೆಯಾಗಿರುವ ಘಟನೆಯು ನಡೆದಿದೆ. ಮೃತ ವ್ಯಕ್ತಿಯನ್ನು ವಾರದ ಹಿಂದೆ ನಾಪತ್ತೆಯಾಗಿರುವ‌ ಮಣಿಪಾಲ ಪ್ರಗತಿನಗರದ ನಿವಾಸಿ ಚೌರಪ್ಪ ದಂಡಾವತಿ (51ವ) ಎಂದು ಗುರುತಿಸಲಾಗಿದೆ. ಸಾವಿಗೆ…

Read more

ಟೈಮಿಂಗ್‌ ವಿಚಾರದಲ್ಲಿ ಗಲಾಟೆ; ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌…!

ಉಡುಪಿ : ಮಣಿಪಾಲದ ಟೈಗರ್‌ ಸರ್ಕಲ್‌ ಖಾಸಗಿ ಬಸ್‌ ನಿಲ್ದಾಣದ ಬಳಿ ಟೈಮಿಂಗ್‌ ವಿಚಾರಕ್ಕೆ ಗಲಾಟೆ ನಡೆದು ಕಂಡಕ್ಟರ್ ಹಾಗೂ ಡ್ರೈವರ್ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಎ.2ರಂದು ಸಂಜೆ 4:30 ಗಂಟೆ ಸುಮಾರಿಗೆ ಮಣಿಪಾಲದ ಟೈಗರ್‌ ಸರ್ಕಲ್‌…

Read more