Mangalore News

ವಿಧಾನ ಪರಿಷತ್ ಉಪ ಚುನಾವಣೆ : ಸ್ಪೀಕರ್ ಯು.ಟಿ.ಖಾದರ್ ಮತದಾನ

ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಉಪ ಚುನಾವಣೆ ಇಂದು ಬೆಳಗ್ಗೆ 8ಕ್ಕೆ ಆರಂಭಗೊಂಡಿದ್ದು, ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಉಳ್ಳಾಲ ನಗರಸಭೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ಈ ಕ್ಷೇತ್ರದ…

Read more

ಮೂಲ್ಕಿಯಲ್ಲಿ ಮನೆಯೊಳಗೆ ನುಗ್ಗಿದ ಚಿರತೆ : ಅರಣ್ಯ ಅಧಿಕಾರಿಗಳ ಕಾರ್ಯಾಚರಣೆಯಿಂದ ಚಿರತೆ ಸೆರೆ

ಮಂಗಳೂರು : ಮನೆಯೊಳಗೆ ಏಕಾ‌ಏಕಿ ಚಿರತೆಯೊಂದು ನುಗ್ಗಿದ ಘಟನೆ ಮಂಗಳೂರು ಹೊರವಲಯದ ಮೂಲ್ಕಿಯಲ್ಲಿ ನಡೆದಿದೆ. ಮೂಲ್ಕಿಯ ಅಕ್ಕಸಾಲಿಕರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಚಿರತೆ ನುಗ್ಗಿದ್ದು ಮೂಡಬಿದ್ರೆ ವಲಯದ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆಯಿಂದ ಬೋನ್ ಮೂಲಕ…

Read more

ರೈಲ್ವೆ ಹಳಿ ಮೇಲೆ ಕಲ್ಲು – ಗಂಭೀರವಾಗಿ ಪರಿಗಣಿಸಲು‌ ಶಾಸಕ ಕಾಮತ್ ಆಗ್ರಹ

ಮಂಗಳೂರು-ಕೇರಳ ನಡುವಿನ ರೈಲು ಮಾರ್ಗದ ಹಳಿಗಳ ಮೇಲೆ ತೊಕ್ಕೊಟ್ಟು ಬಳಿ ಆಗಂತುಕರು ಹಲವು ಕಲ್ಲುಗಳನ್ನಿಟ್ಟು ರೈಲು ಬೀಳಿಸಲು ನಡೆಸಿರುವ ಷಡ್ಯಂತ್ರವು ತೀವ್ರ ಕಳವಳಕಾರಿಯಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್‌ರವರು ಆಗ್ರಹಿಸಿದರು. ಹಳಿಗಳ…

Read more

ಉಳ್ಳಾಲದಲ್ಲಿ ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟಿದ್ದು ದೇಶದ್ರೋಹದ ಕೃತ್ಯ; ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ದ.ಕ. ಸಂಸದ ಕ್ಯಾ. ಚೌಟ ಒತ್ತಾಯ

ಮಂಗಳೂರು : ಮಂಗಳೂರು-ಕೇರಳ ಮಾರ್ಗವಾದ ಉಳ್ಳಾಲದ ತೊಕ್ಕೊಟ್ಟು ರೈಲ್ವೆ ಓವರ್‌ ಬ್ರಿಡ್ಜ್‌ ಹಳಿ ಮೇಲೆ ಕಲ್ಲುಗಳನ್ನು ಇಟ್ಟು ಅಪಾಯಕಾರಿ ಕೃತ್ಯವೆಸಗಿರುವುದು ಗಂಭೀರ ವಿಚಾರವಾಗಿದ್ದು, ಪೊಲೀಸರು ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌…

Read more

ಗಾಂಜಾ ಮಾರಾಟಕ್ಕೆ ಯತ್ನ – ಬಿಹಾರ ಮೂಲದ ವ್ಯಕ್ತಿ ಅರೆಸ್ಟ್, 1.50ಕೆಜಿ ಗಾಂಜಾ ವಶ

ಮಂಗಳೂರು : ನಗರದ ಹೊಸಬೆಟ್ಟು ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೋರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಿಹಾರ್ ರಾಜ್ಯದ ನಿವಾಸಿ ಸೋನಿ ಕುಮಾರ್(27) ಬಂಧಿತ ಆರೋಪಿ. ಸುರತ್ಕಲ್ ಠಾಣಾ ಪೊಲೀಸರು ಹೊಸಬೆಟ್ಟು ಬಳಿ ಬೀಚ್ ರಸ್ತೆಯಲ್ಲಿ ಗಸ್ತು…

Read more

ಮಂಗಳೂರಿನ ಕೆ.ಪಿ.ಟಿ. ಬಳಿ ಅಪಘಾತ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಮೃತ್ಯು

ದಕ್ಷಿಣ ಕನ್ನಡ : ಮಂಗಳೂರಿನ ಕೆ.ಪಿ.ಟಿ. ಬಳಿ ಗುರುವಾರದಂದು ಬೈಕ್-ನ್ಯಾನೋ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭಾಸ್ಕರ್ (49) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾಣಿ ಸಮೀಪದ ನೇರಳಕಟ್ಟೆ ಪೆರುವಾಜೆ ಬೀರಕೋಡಿ ನಿವಾಸಿ ಭಾಸ್ಕರ್ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ…

Read more

ಪದುವಾ ಜಂಕ್ಷನ್‌ನಲ್ಲಿನ ಮಿಯಾವಾಕಿ ಅರಣ್ಯ ತೆರವಿಗೆ ಮುಂದಾದ ಎನ್ಎಎಚ್ – ಹೈಕೋರ್ಟ್ ತಡೆ

ಮಂಗಳೂರು : ವನ ಚಾರಿಟೇಬಲ್ ಟ್ರಸ್ಟ್, ಸಿಂಜಿನ್ ಇಂಟರ್ ನ್ಯಾಶನಲ್ ಲಿ. ಮತ್ತು ಬಯೋಕೊನ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನಗರದ ಪದುವಾ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಬೆಳೆಸಲಾಗಿದ್ದ ಮಿಯಾವಾಕಿ ಅರಣ್ಯವನ್ನು ತೆರವುಗೊಳಿಸಬೇಕೆಂದಿದ್ದ ಎನ್ಎಎಚ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. 2022ರಲ್ಲಿ ಮನಪಾದ…

Read more

ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು..! ಮಹಿಳೆ ಮೃತ್ಯು

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಆಳೆತ್ತರದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು ಮಹಿಳೆ ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬಿ.ಸಿ ರೋಡು – ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಕೊಡಿಯಾಲ್ ಬೈಲು ನಿವಾಸಿ…

Read more

“ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ನಿಯೋಗದಿಂದ ಮಮ್ತಾಜ್ ಅಲಿ ನಿವಾಸಕ್ಕೆ ಭೇಟಿ. ಕುಟುಂಬಕ್ಕೆ ಸಾಂತ್ವನ, ಸಮಗ್ರ ತನಿಖೆಗೆ ಆಗ್ರಹ

ಮಂಗಳೂರು : ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ “ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ಇದರ ನಿಯೋಗ ಚೊಕ್ಕಬೆಟ್ಟು‌ನಲ್ಲಿರುವ ಮಮ್ತಾಜ್ ಅಲಿ ಅವರ ಕುಟುಂಬದ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿತು. ಮುಮ್ತಾಜ್ ಅಲಿಯವರನ್ನು ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ…

Read more

ಮರಳು ಮಾಫಿಯಾ ವಿರುದ್ದ ಪ್ರತಿಭಟನೆ ನಡೆಸಿದ್ದಕ್ಕೆ ಹಲ್ಲೆ : ಇಬ್ಬರ ಬಂಧನ

ಮಂಗಳೂರು : ಮರಳು ಮಾಫಿಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಾರ್ಗದರ್ಶನ ನೀಡುತ್ತಿದ್ದ ಆಲ್ವಿನ್ ಜೆರೋಮ್ ಡಿಸೋಜಾ ಮೇಲೆ ಹಲ್ಲೆ ನಡೆದ ಪ್ರಕರಣದಲ್ಲಿ, ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಬಂಟ್ವಾಳದ ಪುದು ಗ್ರಾಮದ ಮೊಹಮ್ಮದ್ ಅತಾವುಲ್ಲಾ (40) ಮತ್ತು ಮಂಗಳೂರಿನ ಮಾರ್ನಮಿಕಟ್ಟೆಯ…

Read more