Mangalore News

ಪ್ರತಿಭಟನೆ ಸಂದರ್ಭ ಎಎಸ್ಐಯನ್ನು ತಳ್ಳಿ ಗಾಯ – ಡಿವೈಎಫ್ಐ ವಿರುದ್ಧ ಪ್ರಕರಣ ದಾಖಲು

ಮಂಗಳೂರು : ಪ್ರತಿಭಟನೆ ನಡೆದ ವೇಳೆ ಎಎಸ್ಐಯನ್ನು ತಳ್ಳಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ಡಿವೈಎಫ್‌ಐ ಸಂಘಟನೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.28ರಂದು ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ…

Read more

‘ಕಮಿಷನರ್ ಗೋಬ್ಯಾಕ್’ ಪ್ರತಿಭಟನೆ – ಡಿವೈಎಫ್ಐ ಕಾರ್ಯಕರ್ತರು ವಶಕ್ಕೆ; ಎಎಸ್ಐಗೆ ಗಂಭೀರ ಗಾಯ

ಮಂಗಳೂರು : ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಡಿವೈಎಫ್ಐನಿಂದ ನಡೆದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗೋಬ್ಯಾಕ್ ಪ್ರತಿಭಟನೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ಪ್ರತಿಭಟನೆ ವೇಳೆ ಎಎಸ್ಐ ಒಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.…

Read more

ಗಣಿ ಭೂವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ಮನೆ-ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಮಂಗಳೂರು : ನಗರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಹಾಗೂ ಕಚೇರಿಗಳ ಮೇಲೆ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳೂರು ಲೋಕಾಯುಕ್ತ ಎಸ್ಪಿ ನಟರಾಜ್ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ…

Read more

“ಡ್ರೀಮ್ ಡೀಲ್” ಲಕ್ಕಿ ಡ್ರಾ ವಿಡಿಯೋ ವೈರಲ್, ಸಿಕ್ಕಿಬಿದ್ದ ಉದ್ಯೋಗಿಗಳು ಸಂಸ್ಥೆಯಿಂದ ವಜಾ; ಆಡಳಿತ ಮಂಡಳಿ ಸ್ಪಷ್ಟನೆ

ಮಂಗಳೂರು : “ಡ್ರೀಮ್ ಡೀಲ್ ಗ್ರೂಪ್ ವತಿಯಿಂದ ಪ್ರತೀ ತಿಂಗಳು ಪ್ರಮೋಷನ್‌ಗಾಗಿ ಗಿಫ್ಟ್ ನೀಡುತ್ತೇವೆ. ನಿನ್ನೆ ಲಕ್ಕಿ ಡ್ರಾ ಸಂದರ್ಭದಲ್ಲಿ ಉಬೈದ್ ಮತ್ತು ಹರ್ಷಿತ್ ಅನ್ನುವ ನಮ್ಮ ಕೆಲಸದವರು ಸಂಸ್ಥೆಗೆ ಮೋಸ ಮಾಡಿದ್ದಾರೆ. ಇದು ಗಮನಕ್ಕೆ ಬಂದ ತಕ್ಷಣವೇ ಮರು ಡ್ರಾ…

Read more

ಕರಾವಳಿ ಕಾವಲು ಪಡೆಯ ಸಿಬ್ಬಂದಿ ನಾಪತ್ತೆ

ಮಂಗಳೂರು : ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯಲ್ಲಿ ಕೆ.ಎನ್.ಡಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾದ ಘಟನೆ ನಡೆದಿದೆ. ತುಕಾರಾಮ್ ಖಾರ್ವಿ ನಾಪತ್ತೆಯಾಗಿರುವ ಬಗ್ಗೆ ಅವರ ಮಗ ರೋಶನ್ ಎಂಬವರು ದೂರು ನೀಡಿದ್ದು, ಪತ್ತೆಗಾಗಿ ಮನವಿ ಮಾಡಿದ್ದಾರೆ. ನಮ್ಮ ತಂದೆ ಕಳೆದ…

Read more

2 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಡಾ. ಭರತ್ ಶೆಟ್ಟಿ ಗುದ್ದಲಿಪೂಜೆ

ಗುರುಪುರ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕೊಪ್ಪ ಪರಿಶಿಷ್ಟ ಜಾತಿ ಕಾಲೊನಿ ಮತ್ತು ಮೂಳೂರು ಮಠದ ಸೈಟ್‌ನ ಶಿವಗಿರಿ ಬಡಾವಣೆಯಲ್ಲಿ ತಲಾ 9 ಮತ್ತು 6 ಲಕ್ಷ ರೂ ವೆಚ್ಚದ 2 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ಉತ್ತರ…

Read more

ಸ್ಟಾಕ್ ಮಾರ್ಕೆಟ್‌‌ನಲ್ಲಿ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ 10ಲಕ್ಷ ರೂ. ವಂಚನೆ

ಮಂಗಳೂರು : ಸ್ಟಾಕ್ ಮಾರ್ಕೆಟ್‌ನಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 10ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪಿರ್ಯಾದಿದಾರರನ್ನು ಸೆಪ್ಟೆಂಬರ್ 23ರಂದು ಆರೊಪಿಗಳು VGP966/Kotak Stock market guidance ಹೆಸರಿನ ವಾಟ್ಸ್ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಳಿಸಿದ್ದಾರೆ.…

Read more

ಮಂಗಳೂರಿನಲ್ಲಿ ಅಲ್ಟ್ರಾವಯಲೆಟ್‌ನ ಹೊಸ ಅನುಭವ ಕೇಂದ್ರ ‘ಸ್ಪೇಸ್‌ ಸ್ಟೇಷನ್‌’ ಆರಂಭ

ಮಂಗಳೂರು : ಮುಂಚೂಣಿಯ ಇವಿ ಸೂಪರ್‌ಬೈಕ್‌ ಉತ್ಪಾದಕ ಕಂಪೆನಿ ಅಲ್ಟ್ರಾವಯಲೆಟ್‌ ಮಂಗಳೂರಿನಲ್ಲಿ ಹೊಸ ಯುವಿ ಸ್ಪೇಸ್‌ ಸ್ಟೇಷನ್‌ ಆರಂಭಿಸಿದೆ. ಕಂಪೆನಿಯ ವಿಸ್ತರಣೆಯ ಹಾದಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಯುವಿ ಸ್ಪೇಸ್‌ ಸ್ಟೇಷನ್‌, ಅಲ್ಟ್ರಾವಯಲೆಟ್‌ನ ನೂತನ ತಂತ್ರಜ್ಞಾನಗಳ ಎಲೆಕ್ಟ್ರಿಕ್‌ ವಾಹನಗಳನ್ನು…

Read more

ಅಪ್ರಾಪ್ತ ವಿದ್ಯಾರ್ಥಿ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಆರೋಪ – ಉಪನ್ಯಾಸಕ ದೋಷಮುಕ್ತ ಎಂದ ನ್ಯಾಯಾಲಯ

ಮಂಗಳೂರು : ನಗರದ ಕಾಲೇಜೊಂದರ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆಂದು ಆರೋಪ ಎದುರಿಸುತ್ತಿದ್ದ ಕಾಲೇಜಿನ ಉಪನ್ಯಾಸಕರನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತ ಗತಿ ವಿಶೇಷ ನ್ಯಾಯಾಲಯ (ಪೊಕ್ಸೊ) ದೋಷಮುಕ್ತ ಗೊಳಿಸಿದೆ. ‘ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ…

Read more

ಲಾರಿ ಚಲಾಯಿಸುತ್ತಿದ್ದಾಗಲೇ ಹೃದಯಾಘಾತವಾಗಿ ಚಾಲಕ ಸಾವು

ಸಿದ್ದಾಪುರ : ಕಲ್ಲಿದ್ದಲು ತುಂಬಿಸಿಕೊಂಡು, ಬಳ್ಳಾರಿ ಕಡೆಗೆ ಹೋಗುತ್ತಿದ್ದ ಲಾರಿಯ ಚಾಲಕನೊಬ್ಬ ಅಂಪಾರು ಗ್ರಾಮದ ನೆಲ್ಲಿಕಟ್ಟೆ ಬಳಿ ಚಾಲನೆಯಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ. ಲಾರಿ ಚಾಲಕ ವಿಶಾಂತ್‌(29) ಮೃತಪಟ್ಟ ದುದೈವಿಯಾಗಿದ್ದಾರೆ. ಲಾರಿಯು ಮಂಗಳೂರಿನ ಇರ್ಪಾನ್‌ ಎಂಬುವವರ ಮಾಲಿಕತ್ವದ ಲಾರಿಯನ್ನು ವಿಶಾಂತ್‌ ಅವರು…

Read more