Heart Attack

ಮೂಡಬಿದ್ರೆ ಭಜರಂಗದಳದ ನಗರ ಸಂಯೋಜಕ ವಿಜೇಶ್ ಮೂಡಬಿದ್ರೆ ನಿಧನ

ಮೂಡಬಿದ್ರಿ : ವಿಶ್ವ ಹಿಂದೂ ಪರಿಷತ್ ಭಜರಂಗದಳ ಮೂಡಬಿದ್ರೆಯ ನಗರ ಸಂಯೋಜಕರಾಗಿದ್ದ ವಿಜೇಶ್ (30) ನಿಧನರಾಗಿದ್ದಾರೆ. ಭಜರಂಗದಳದಲ್ಲಿ ಸಕ್ರಿಯರಾಗಿದ್ದ ಇವರು ಸಂಘಟನೆಯ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದರು. ಪುತ್ತಿಗೆ ಶ್ರೀ ಸೋಮನಾಥೇಶ್ವರನ ಬ್ರಹ್ಮಕಲಶೋತ್ಸವದಲ್ಲಿ ಸೇವೆ ಮಾಡುತ್ತಿದ್ದ ಸಂದರ್ಭದಲ್ಲೇ ಹೃದಯಾಘಾತಕ್ಕೆ ಒಳಪಟ್ಟು ಸಾವು ಬದುಕಿನ…

Read more

ಸ್ಕೂಟಿಯಲ್ಲಿ ಬರುವಾಗ ಹೃದಯಾಘಾತ; ಪೈಂಟರ್ ಮೃತ್ಯು…!

ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿ ನಿವಾಸಿ ಸುಹೇಬ್‌ ಹೃದಯಾಘಾತದಿಂದ ಡಿ. 8ರಂದು ನಿಧನ ಹೊಂದಿದರು. ಸುಹೇಬ್‌ ಜರಿಗುಡ್ಡೆಯಲ್ಲಿ ಗ್ಯಾರೇಜ್‌ ಒಂದರಲ್ಲಿ ಕಾರು ಪೈಂಟರ್‌ ಆಗಿ ಕೆಲಸ ಮಾಡುತ್ತಿದ್ದರು. ಇವರು ಮಲ್ಪೆಯಿಂದ ಕಾರ್ಕಳಕ್ಕೆ ಸ್ಕೂಟಿಯಲ್ಲಿ ಬರುತ್ತಿದ್ದಾಗ ಹಿರಿಯಡ್ಕದಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಸ್ಕೂಟಿ…

Read more

ಕಾಂಗ್ರೆಸ್ ನಾಯಕ, ಧಾರ್ಮಿಕ ಮುಂದಾಳು ಡಿ.ಆರ್.‌ ರಾಜು ನಿಧನ

ಕಾರ್ಕಳ : ಕಾರ್ಕಳ‌ ಬಿಲ್ಲವ ಸಂಘದ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ‌ ಘಟಕದ ‌ಉಪಾಧ್ಯಕ್ಷ ಡಿ.ಆರ್.‌ರಾಜು‌(64) ಹೃದಯಘಾತದಿಂದ ರವಿವಾರ ರಾತ್ರಿ ನಿಧನ ಹೊಂದಿದರು. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ನಿಧನಕ್ಕೆ…

Read more

ಲಾರಿ ಚಲಾಯಿಸುತ್ತಿದ್ದಾಗಲೇ ಹೃದಯಾಘಾತವಾಗಿ ಚಾಲಕ ಸಾವು

ಸಿದ್ದಾಪುರ : ಕಲ್ಲಿದ್ದಲು ತುಂಬಿಸಿಕೊಂಡು, ಬಳ್ಳಾರಿ ಕಡೆಗೆ ಹೋಗುತ್ತಿದ್ದ ಲಾರಿಯ ಚಾಲಕನೊಬ್ಬ ಅಂಪಾರು ಗ್ರಾಮದ ನೆಲ್ಲಿಕಟ್ಟೆ ಬಳಿ ಚಾಲನೆಯಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ. ಲಾರಿ ಚಾಲಕ ವಿಶಾಂತ್‌(29) ಮೃತಪಟ್ಟ ದುದೈವಿಯಾಗಿದ್ದಾರೆ. ಲಾರಿಯು ಮಂಗಳೂರಿನ ಇರ್ಪಾನ್‌ ಎಂಬುವವರ ಮಾಲಿಕತ್ವದ ಲಾರಿಯನ್ನು ವಿಶಾಂತ್‌ ಅವರು…

Read more

ತೆಂಕುತಿಟ್ಟುವಿನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ

ಮಂಗಳೂರು : ತೆಂಕುತಿಟ್ಟು ಯಕ್ಷಗಾನದ ಪಾರಂಪರಿಕ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ(67) ಹೃದಯಾಘಾತದಿಂದ ನಿಧನರಾಗಿದ್ದಾರೆ. ಯಕ್ಷಗಾನ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅದಕ್ಕಾಗಿ ನಿನ್ನೆ ರವಿವಾರ ಬೆಳಗ್ಗೆ ಬೆಂಗಳೂರಿನ…

Read more

ಹೃದಯಾಘಾತದಿಂದ ಯುವತಿ ಮೃತ್ಯು

ಸುರತ್ಕಲ್ : ಹೃದಯಾಘಾತಕ್ಕೆ 23 ವರ್ಷದ ಯುವತಿಯೋರ್ವಳು ಬಲಿಯಾದ ಘಟನೆ ಸೆ.18 ಬುಧವಾರ ಸಂಜೆ ನಡೆದಿದೆ. ಮೃತ ಯುವತಿಯನ್ನು ಸಸಿಹಿತ್ಲು ಅಗ್ಗಿದ ಕಳಿಯ ನಿವಾಸಿ ದಿ.ರಾಜೇಶ್ ಎಂಬವರ ಪುತ್ರಿ ರೋಶನಿ ಎಂದು ಗುರುತಿಸಲಾಗಿದೆ. ಯುವತಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು, ಇತ್ತೀಚೆಗೆ ಮನೆಗೆ ಬಂದಿದ್ದಳು…

Read more

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹೃದಯ ಸ್ತಂಭನ – ಸವಾರ ಸಾವು

ಮಣಿಪಾಲ : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹೃದಯ ಸ್ತಂಭನಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಘವೇಂದ್ರ (49) ಮೃತ ಸವಾರ. ಅಲೆವೂರು ಗ್ರಾಮದ ಮಂಚಿಕೆರೆಯ ಮಣಿಪಾಲ-ಅಲೆವೂರು ರಸ್ತೆಯಲ್ಲಿ ಕೆ. ಅಶ್ವಥ್‌ ಅವರೊಂದಿಗೆ ಪುರೋಹಿತ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಅವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗಲೇ…

Read more

ವೈರ್‌ಲೆಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಹೃದಯಾಘಾತದಿಂದ ಸಾವು

ಉಡುಪಿ : ಉಡುಪಿ ಜಿಲ್ಲಾ ಪೊಲೀಸ್‌ನ ವೈರ್‌ಲೆಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ನಿತ್ಯಾನಂದ ಶೆಟ್ಟಿ (52) ಅವರು ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರು ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲಾ ಪೊಲೀಸ್‌ನ ವೈರ್‌ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ…

Read more

ನಿವೃತ್ತ ಪೊಲೀಸ್ ನಿರೀಕ್ಷಕ ಜಯಂತ್ ನಿಧನ

ಉಡುಪಿ : ನಿವೃತ್ತ ಪೊಲೀಸ್ ನಿರೀಕ್ಷಕ ಎಂ.ಜಯಂತ್(61) ಅವರು ಹೃದಯಾಘಾತದಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು 1992ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಮಣಿಪಾಲ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ಆರಂಭಿಸಿದರು. ಬಳಿಕ ವಿವಿಧ ಹಂತಗಳಲ್ಲಿ ಭಡ್ತಿ ಹೊಂದಿ ಉಡುಪಿ ಮಹಿಳಾ…

Read more

ಹಿರಿಯ ಪತ್ರಕರ್ತ ಜಯಕರ ಸುವರ್ಣ ಇನ್ನಿಲ್ಲ

ಉಡುಪಿ : ಹಿರಿಯ ಪತ್ರಕರ್ತ, ದೂರದರ್ಶನ ಉಡುಪಿ ಜಿಲ್ಲಾ ವರದಿಗಾರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ಇಂದು ರಾತ್ರಿ ಹೃದಯಾಘಾತದಿಂದ ಕಲ್ಮಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ…

Read more