Environmental Concern

ಪಿಲಿಕುಳ ಕಂಬಳಕ್ಕೆ ಮತ್ತೊಂದು ವಿಘ್ನ – ಕಂಬಳದಿಂದ ಪ್ರಾಣಿಗಳಿಗೆ ಕಿರಿಕಿರಿ, ಜಿಲ್ಲಾಡಳಿತಕ್ಕೆ ಪತ್ರ

ಮಂಗಳೂರು : ಪಿಲಿಕುಳ ಕಂಬಳಕ್ಕೆ ಕರೆಮುಹೂರ್ತ ನಡೆದ ಬೆನ್ನಲ್ಲೇ ಶಾಸಕ ಉಮಾನಾಥ ಕೋಟ್ಯಾನ್ ಮಾಧ್ಯಮದ ಮುಂದೆ ಜಿಲ್ಲಾಡಳಿತದಿಂದ ನಡೆಯುವ ಕಂಬಳಕ್ಕೆ ಕ್ಷೇತ್ರದ ಶಾಸಕನಾಗಿ ತನ್ನನ್ನೇ ದೂರವಿಟ್ಟು, ಅವಮಾನಿಸಲಾಗುತ್ತಿದೆ. ನನ್ನನ್ನು ಬಿಟ್ಟು ಹೇಗೆ ಕಂಬಳ ಮಾಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ್ದರು‌. ಇದೀಗ ಪಿಲಿಕುಳ ಜೈವಿಕ…

Read more

ಕೊಳಚೆ ನೀರಿಗೆ ಪರಿಹಾರ; ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು : ಕೊಣಾಜೆ ಗ್ರಾಮದ ಅಸೈಗೋಳಿಯಲ್ಲಿರುವ 7ನೇ ಪಡೆ ಕೆಎಸ್‌ಆರ್‌ಪಿಯ ವಸತಿಗೃಹದ ಕೊಳಚೆ ನೀರು ಸ್ಥಳೀಯ ಹಲವು ಮನೆಗಳ ಮುಂದೆ ಹರಿಯುತ್ತಿರುವುದಾಗಿ ಆರೋಪಿಸಿ ಅಸೈಗೋಳಿಯ ಕಾರುಣ್ಯಾ ಫೌಂಡೇಶನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ಗೆ ಮನವಿ ಸಲ್ಲಿಸಲಾಯಿತು. ಮನವಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ…

Read more

ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ಹೊಳೆ ಹೂಳಿನ ಸಮಸ್ಯೆ ಬಗೆಹರಿಸುವಂತೆ ಮನವಿ

ಕೋಟ : ಕೋಟದ ಮಣೂರಿನಿಂದ ಗಿಳಿಯಾರು, ಚಿತ್ರಪಾಡಿ ಕಾರ್ಕಡದವರೆಗೆ ಹೊಳೆ ಹೂಳಿನ ಸಮಸ್ಯೆಯಿಂದ ಕೃತಕ ನೆರೆ ಸೃಷ್ಟಿಯಾಗಿದ್ದು ರೈತರು ಬೆಳೆದ ಕೃಷಿ ಕೊಳೆಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಹೊಳೆಯ ಹೂಳೆತ್ತಬೇಕು ಎಂದು ಆಗ್ರಹಿಸಿ ಕೋಟದ ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ಕೋಟ ಹಿರೇಮಹಾಲಿಂಗೇಶ್ವರ…

Read more

ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ

ಬೈಂದೂರು : ಬೈಂದೂರು ತಾಲ್ಲೂಕು ನಾಗೂರು ಉಡುಪರ ಹಿತ್ತಲಿನ ತೋಟದಲ್ಲಿ ಇರುವ ಸಿಹಿ ನೀರಿನ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ಸ್ಥಳೀಯರು ಅದನ್ನು ನೋಡಿ ಹೌಹಾರಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಮೊಸಳೆಗಳ ಕಾಣಿಸುವುದು ಅಪರೂಪ ಎಂದು…

Read more

ಪಡುಬಿದ್ರಿಯಲ್ಲಿ ಕಡಲ ಆರ್ಭಟಕ್ಕೆ ಮೀನುಗಾರರ ಶೆಡ್, ತೆಂಗಿನ ಮರಗಳು ಕಡಲುಪಾಲು

ಪಡುಬಿದ್ರಿ : ಮೀನುಗಾರರ ಬಹುದಿನಗಳ ಮನವಿಗೆ ಪೂರಕವಾಗಿ ಸ್ಪಂದನೆ ದೊರಕದ ಹಿನ್ನಲೆಯಲ್ಲಿ, ಇದೀಗ ಮೀನುಗಾರಿಕಾ ಸಲಕರಣೆ ಕೊಠಡಿ ಸಹಿತ ಮೂರು ತೆಂಗಿನ ಮರಗಳು ಕಡಲ ಒಡಲು ಸೇರಿದ್ದು, ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳಿಂದ ಪಡುಬಿದ್ರಿ ನಡಿಪಟ್ಣದಲ್ಲಿ ಮೀನುಗಾರಿಕಾ ಸಲಕರಣೆಗಳನ್ನು ಶೇಖರಣೆ…

Read more

ವಾರಾಹಿ ನೀರಿಗಾಗಿ ಗ್ರಾಮ ಮಟ್ಟದಲ್ಲಿ ಜನಾಂದೋಲನಕ್ಕೆ ಸಿದ್ಧತೆ : ಶಾಸಕ ಗುರುರಾಜ್ ಗಂಟಿಹೊಳೆ ‌ನೇತೃತ್ವದಲ್ಲಿ ಹೋರಾಟ ಸಮಿತಿ ರಚನೆ

ಸಿದ್ದಾಪುರ : ವಾರಾಹಿ‌ ನದಿ ನೀರು ಒದಗಿಸುವ ಯೋಜನೆ ಬೈಂದೂರು ‌ಕ್ಷೇತ್ರ ವ್ಯಾಪ್ತಿಯಲ್ಲಿ ‌ಇದ್ದರೂ ಇಲ್ಲಿನ ಯಾವುದೇ ಗ್ರಾಮಕ್ಕೆ ಇದರ ನೀರು ಸಿಗುತ್ತಿಲ್ಲ. ಹೀಗಾಗಿ ಕಾಲುವೆಗಳ ಮೂಲಕ ಬೈಂದೂರು ಕ್ಷೇತ್ರದ ಹೆಚ್ಚಿನ ಗ್ರಾಮಗಳ ಕೃಷಿ ಚಟುವಟಿಕೆಗೆ ವಾರಾಹಿ ನೀರು ಒದಗಿಸುವಂತೆ ಮಾಡುವಲು…

Read more

ತೆಂಕನಿಡಿಯೂರು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅವೈಜ್ಞಾನಿಕವಾಗಿ ಹೂತಿರುವ ಕಸ ತಕ್ಷಣ ತೆರವು ಮಾಡಿ : ಯಶ್‌ಪಾಲ್ ಸುವರ್ಣ ಸೂಚನೆ

ಉಡುಪಿ : ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲಾರ್ಕಲಬೆಟ್ಟುವಿನ ತ್ಯಾಜ್ಯ ಸಂಸ್ಕರಣಾ ಘಟಕದ ಒಳಗಡೆ ಗ್ರಾಮಕ್ಕೆ ನೀರು ಪೂರೈಸುವ ಬೋರ್‌ವೆಲ್ ಬಳಿ ದೊಡ್ಡ ಹೊಂಡ ತೋಡಿ ಕಸ ಹಾಕಿ ವಿಲೇವಾರಿ ಮಾಡಿದ ಪರಿಣಾಮ ಮಳೆ ನೀರಿಗೆ ಸಮೀಪದ ನೂರಾರು ಮನೆ ಬಾವಿ,…

Read more

ಸುಬ್ರಹ್ಮಣ್ಯದಲ್ಲಿ ಲೋಡುಗಟ್ಟಲೆ ಕಸದ ರಾಶಿ, ಕೊಳೆಯುತ್ತಿದೆ ಕಸಗಳು, ಗಬ್ಬು ವಾಸನೆ; ರೋಗ ಹರಡುವ ಭೀತಿಯಲ್ಲಿ ಸಾರ್ವಜನಿಕರು

ದಿನಂಪ್ರತಿ ಸಾವಿರಾರು ಜನರು ಬರುವ ಸುಬ್ರಹ್ಮಣ್ಯದಲ್ಲಿ ಕಸ ವಿಲೇವಾರಿ ಘಟಕದಲ್ಲಿ ಲೋಡುಗಟ್ಟಲೆ ಕಸದ ರಾಶಿ ಬಿದ್ದು ಕೊಳೆಯಲು ಆರಂಭವಾಗಿದೆ, ಇಂಜಾಡಿ ಬಳಿಯ ಈ ಘಟಕದಲ್ಲಿ ಗಬ್ಬು ವಾಸನೆ ಹರಡುತ್ತಿದ್ದು ಸಾರ್ವಜನಿಕರಿಗೆ ರೋಗ ಭೀತಿ ಎದುರಾಗಿದೆ. ಗ್ರಾ.ಪಂ. ವತಿಯಿಂದ ನಿರ್ವಹಿಸಲ್ಪಡುವ ಕಸ ವಿಲೇವಾರಿ…

Read more