Crime

ಬೀಚ್ ಸಮೀಪ ನಿಷೇಧಿತ ಎಂಡಿಎಂಎ ಪೌಡರ್‌ ಮಾರಾಟಕ್ಕೆ ಯತ್ನಿಸಿದ ನಾಲ್ಕು ಮಂದಿ ಪೊಲೀಸ್ ವಶಕ್ಕೆ

ಉಡುಪಿ : ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್‌ ಮಾರಾಟಕ್ಕೆ ಯತ್ನಿಸಿದ ನಾಲ್ಕು ಮಂದಿಯನ್ನು ಸೆನ್‌ ಅಪರಾಧ ದಳ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಬೈಂದೂರು ತಾಲೂಕು ಮರವಂತೆ ಬೀಚ್‌ ಸಮೀಪ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇಧಿತ ಮಾದಕ ವಸ್ತು…

Read more

ಗೋವಾದಿಂದ ಮಂಗಳೂರು ಹಾಗೂ ಕೇರಳಕ್ಕೆ ಹೈಡ್ರೋವಿಡ್ ಗಾಂಜಾ ಸಾಗಾಟ : ಓರ್ವನ ಬಂಧನ; 73 ಲಕ್ಷ ರೂಪಾಯಿ ಮೌಲ್ಯದ ಹೈಡ್ರೋವಿಡ್ ಗಾಂಜಾ ಜಪ್ತಿ

ಮಂಗಳೂರು : ಮಂಗಳೂರು ನಗರ ಪೊಲೀಸರ ಸಿಸಿಬಿ ಘಟಕವು ಗೋವಾದಿಂದ ಮಂಗಳೂರು ಮತ್ತು ಕೇರಳಕ್ಕೆ ಹೈಡ್ರೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ವಶಕ್ಕೆ ಪಡೆದು 73 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ…

Read more

ಹೂಡಿಕೆ ಹೆಸರಿನಲ್ಲಿ ವಂಚನೆ : ಓರ್ವನ‌ ಬಂಧನ

ಮಂಗಳೂರು : ವಾಟ್ಸಾಪ್‌ನಲ್ಲಿ ವ್ಯಕ್ತಿಯನ್ನು ಪರಿಚಯಿಸಿಕೊಂಡು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬ ಆಮಿಷವೊಡ್ಡಿ 10 ಲಕ್ಷ ರೂ. ವಂಚನೆ ಎಸಗಿದ್ದ ಪ್ರಕರಣದಲ್ಲಿ ಕೇರಳ ಮೂಲದ ಯುವಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳ ತ್ರಿಶೂರ್‌ನ ಮಟ್ಟೂರು ನೂಲುವ್ಯಾಲಿಯ…

Read more

ಪರವಾನಿಗೆ ಇಲ್ಲದ ಪಿಸ್ತೂಲ್ ಮಿಸ್‌ಫೈರ್ ಯುವಕನಿಗೆ ಗುಂಡೇಟು – ಪ್ರಕರಣ ದಾಖಲು

ಮಂಗಳೂರು : ಪರವಾನಿಗೆ ಇಲ್ಲದ ಪಿಸ್ತೂಲ್ ಮಿಸ್‌ಫೈರ್ ಆಗಿ ಯುವಕನಿಗೆ ಗುಂಡೇಟು ತಗುಲಿದ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.6ರಂದು ವಾಮಂಜೂರು ಬಳಿಯ ಸೆಕೆಂಡ್ ಹ್ಯಾಂಡ್ ಸೇಲ್ಸ್ ಬಝಾರ್‌‌ ಮಾಲಕ ಅದ್ದು ಅಲಿಯಾಸ್ ಬದ್ರುದ್ದೀನ್ (34) ಎಂಬಾತ ಪರವಾನಿಗೆ…

Read more

6 ಲಕ್ಷ RTGS ಮಾಡಿಸಿಕೊಂಡು, ಚಿನ್ನ ಖರೀದಿ ಸಂಸ್ಥೆಗೆ ವಂಚನೆ…!

ಉಡುಪಿ : ಚಿನ್ನ ಖರೀದಿ ಸಂಸ್ಥೆಗೆ ಆರು‌ ಲಕ್ಷ ರೂಪಾಯಿ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ. ದೂರುದಾರ ಕಾರ್ತಿಕ (32), ಮಂಡ್ಯ ಜಿಲ್ಲೆಯ ಇವರು ಮೈಸೂರಿನಲ್ಲಿ ಧನ ಗಣಪತಿ ಗೋಲ್ಡ್ & ಡೈಮಂಡ್‌ ಫೈನಾನ್ಸ್‌‌ನಲ್ಲಿ ಫೀಲ್ಡ್‌ ಆಫೀಸರ್‌ ಆಗಿ ಕೆಲಸ ಮಾಡಿಕೊಂಡಿದ್ದಾರೆ.…

Read more

ಸ್ನಾನ ಮಾಡುತ್ತಿದ್ದ ಅಪ್ರಾಪ್ತೆಯ ವೀಡಿಯೊ ಚಿತ್ರೀಕರಿಸಿದ ಅಪರಾಧಿಗೆ ಜೈಲು ಶಿಕ್ಷೆ

ಮಂಗಳೂರು : ಶೌಚಗೃಹದಲ್ಲಿ ಸ್ನಾನ ಮಾಡುತ್ತಿದ್ದ ಅಪ್ರಾಪ್ತೆಯ ವೀಡಿಯೊ ಚಿತ್ರೀಕರಣ ಮಾಡಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ) ಎಫ್‌ಟಿಎಸ್‌ಸಿ-1 ನ್ಯಾಯಾಲಯದ ಕಾಮುಕನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2024ರ ಮಾ.10ರಂದು ಬಜ್ಪೆ…

Read more

ಜೈಲಿನೊಳಗಡೆ ಮೊಬೈಲ್, ಸಿಗರೇಟ್ ಪೊಟ್ಟಣ ಎಸೆಯಲು ಯತ್ನಿಸಿದ ಆರೋಪಿ ಅರೆಸ್ಟ್

ಮಂಗಳೂರು : ನಗರದ ಜೈಲಿನೊಳಗಡೆ ಮೊಬೈಲ್ ಹಾಗೂ ಸಿಗರೆಟ್ ಎಸೆಯಲು ಯತ್ನಿಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಿಮೊಗರು ನಿವಾಸಿ ಪ್ರಜ್ವಲ್(21) ಎಂಬಾತ ಬಂಧಿತ ಆರೋಪಿ. ರವಿವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಆರೋಪಿ ಪ್ರಜ್ವಲ್ ಜೈಲು ಸಮೀಪದ ಕೆನರಾ ಕಾಲೇಜಿನ ಮುಖ್ಯದ್ವಾರದ ಒಳಗೆ…

Read more

ಈಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆಗೆ ದಾಳಿ; 30 ಲಕ್ಷ ರೂ. ಲೂಟಿ

ವಿಟ್ಲ: ನಾವು ಈಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿ ಬರೋಬ್ಬರಿ 30 ಲಕ್ಷ ರೂ. ಲೂಟಿ ಮಾಡಿದ ಘಟನೆ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ…

Read more

ಚಾಕು ತೋರಿಸಿ ಮೆಡಿಕಲ್ ಶಾಪ್‌ನಲ್ಲಿ ಹಣ ಸುಲಿಗೆಗೈದ ಆರೋಪಿ ಅರೆಸ್ಟ್

ಮಂಗಳೂರು : ಚಾಕು ತೋರಿಸಿ ಮೆಡಿಕಲ್ ಶಾಪ್‌ನ ಕ್ಯಾಶ್ ಡ್ರಾವರ್‌ನಲ್ಲಿದ್ದ ಹಣ ಸುಲಿಗೆಗೈದ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೊಂದೇಲ್‌ನ ಪಟ್ರಕೋಡಿ ನಿವಾಸಿ ಸುನೀಲ್(31) ಬಂಧಿತ ಆರೋಪಿ. ಡಿಸೆಂಬರ್ 28ರಂದು ಮಧ್ಯಾಹ್ನ ಮಂಗಳೂರಿನ ನಾಗುರಿ ಮೆಡಿಕಲ್ ಶಾಪ್‌ವೊಂದಕ್ಕೆ ಆರೋಪಿ…

Read more

ಪಡುಬಿದ್ರಿಯಲ್ಲಿ ಮಟ್ಕಾ ದಾಳಿ, ಇಬ್ಬರು ಆರೋಪಿಗಳ ಬಂಧನ

ಪಡುಬಿದ್ರಿ : ಇಲ್ಲಿನ ಮಾರ್ಕೆಟ್‌ ಪ್ರದೇಶದ ತರಕಾರಿ ಅಂಗಡಿಯೊಂದರ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದ ಆರೋಪಿಗಳನ್ನು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ನೇತೃತ್ವದ ತಂಡ ಇಂದು ಬಂಧಿಸಿದೆ. ಚಂದ್ರ ಅವರಾಲು ಮಟ್ಟು ಹಾಗೂ ಮುರಳೀಧರ ಸಾಲ್ಯಾನ್‌ ಪಡಹಿತ್ಲು ಬಂಧಿತ ಆರೋಪಿಗಳು. ಬಂಧಿತರಿಂದ 1,835…

Read more