Crime Report

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು

ಮಂಗಳೂರು : ಕೊಟ್ಟಾರಚೌಕಿ ಬಳಿಯ ಮಾಲೆಮಾರ್‌ನ ಕಚೇರಿಯೊಂದರ ಎದುರು ನಿಲ್ಲಿಸಲಾಗಿದ್ದ ಬಜಾಜ್‌ ಪಲ್ಸರ್‌ ಬೈಕ್‌ ಕಳವಾಗಿದೆ ಎಂದು ಕಾವೂರು ಠಾಣೆಗೆ ದೂರು ನೀಡಲಾಗಿದೆ. ವಿಶ್ವಾಸ್‌ ಎನ್ನುವವರು ಕೆಲಸ ಮಾಡುತ್ತಿದ್ದ ಕಚೇರಿಯ ಎದುರು ಮಾ.6ರಂದು ಸಂಜೆ 6 ಗಂಟೆಗೆ ಬೈಕನ್ನು ನಿಲ್ಲಿಸಿದ್ದು, ಮರುದಿನ…

Read more

ಜೂಜು ಅಡ್ಡೆಗೆ ದಾಳಿ; 10 ಮಂದಿ ಅರೆಸ್ಟ್

ಕಾರ್ಕಳ : ಇಲ್ಲಿನ ಸರಕಾರಿ ಆಸ್ಪತ್ರೆಯ ಎದುರು ಮಾ.23ರಂದು ಅಂದರ್‌-ಬಾಹರ್‌ ಇಸ್ಪೀಟು ಆಡುತ್ತಿದ್ದ 10 ಮಂದಿಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಚಂದ್ರಶೇಖರ, ಹನುಮಂತ, ಮಾರುತಿ, ಮಂಜುನಾಥ, ಸೋಮಣ್ಣ, ವೆಂಕಪ್ಪ, ಪ್ರವೀಣ, ಹನುಮೇಶ, ಪರ್ವತ ಹಾಗೂ ನೀರ್ಪಾದಿ ಎಂದು…

Read more

ನ್ಯಾಯಾಲಯಕ್ಕೆ ಹಾಜರಾಗದೆ 34 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಕಾರ್ಕಳ : ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು 34 ವರ್ಷ ಬಳಿಕ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ತೆಂಕ ಎಡಪದವಿನ ಲಿಯೋ ರೋಚ್ (64) ಎಂದು ಗುರುತಿಸಲಾಗಿದೆ.…

Read more

ಅಕ್ರಮವಾಗಿ ಪರವಾನಿಗೆ ಇಲ್ಲದೆ ಬಂಡೆ ಸ್ಪೋಟ – ಇಬ್ಬರ ಬಂಧನ

ಬೈಂದೂರು : ಬೈಂದೂರು ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಹೊಳೆ ಗ್ರಾಮದ ಅರಮನೆ ಕೊಡ್ಲು ಎಂಬಲ್ಲಿ ಬಂಡೆ ಸ್ಪೋಟಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅನಂತಮೂರ್ತಿ ಭಟ್ ಮತ್ತು ಪ್ರವೀಣ್ ಬಂಧಿತರು. ಅನಂತಮೂರ್ತಿ ಭಟ್ ಎಂಬುವರ ಜಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೆ…

Read more

ಅಜೆಕಾರು ಕೊಲೆ ಆರೋಪಿಯಿಂದ ಜಾಮೀನು ಅರ್ಜಿ ಸಲ್ಲಿಕೆ

ಅಜೆಕಾರು : ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಕೊಲೆಗೈದ ಪ್ರಕರಣದ ಆರೋಪಿ ದಿಲೀಪ್ ಹೆಗ್ಡೆ(28) ಜಾಮೀನು ಕೋರಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳದಲ್ಲಿ…

Read more

ಪೆಟ್ರೋಲ್ ಬಂಕ್ ಮೇಲ್ವಿಚಾರಕನಿಂದ ವಂಚನೆ ಆರೋಪ; ದೂರು ದಾಖಲು

ಮಂಗಳೂರು : ಪೆಟ್ರೋಲ್ ಬಂಕ್‌ನ ಸೂಪರ್ವೈಸರ್ನೊಬ್ಬ ವೈಯಕ್ತಿಕ ಖಾತೆಯ ಕ್ಯುಆರ್ ಕೋಡ್‌ನ್ನು ಹಾಕಿ 58.85 ಲಕ್ಷ ರೂ. ವಂಚಿಸಿರುವ ಬಗ್ಗೆ ದೂರು ನೀಡಲಾಗಿದೆ. ಬಂಗ್ರಕೂಳೂರಿನ ರಿಲಯನ್ಸ್ ಔಟ್ಲೆಟ್ ಫ್ಯುಯೆಲ್ ಬಂಕ್‌ನ‌ಲ್ಲಿ ಸೂಪರ್‌ವೈಸರ್ ಆಗಿದ್ದ ಮೋಹನದಾಸ್ ಎಂಬಾತ ಬಂಕ್‌ನ ಹಣಕಾಸು ವ್ಯವಹಾರ ನಿರ್ವಹಣೆಯ…

Read more

6 ಲಕ್ಷ RTGS ಮಾಡಿಸಿಕೊಂಡು, ಚಿನ್ನ ಖರೀದಿ ಸಂಸ್ಥೆಗೆ ವಂಚನೆ…!

ಉಡುಪಿ : ಚಿನ್ನ ಖರೀದಿ ಸಂಸ್ಥೆಗೆ ಆರು‌ ಲಕ್ಷ ರೂಪಾಯಿ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ. ದೂರುದಾರ ಕಾರ್ತಿಕ (32), ಮಂಡ್ಯ ಜಿಲ್ಲೆಯ ಇವರು ಮೈಸೂರಿನಲ್ಲಿ ಧನ ಗಣಪತಿ ಗೋಲ್ಡ್ & ಡೈಮಂಡ್‌ ಫೈನಾನ್ಸ್‌‌ನಲ್ಲಿ ಫೀಲ್ಡ್‌ ಆಫೀಸರ್‌ ಆಗಿ ಕೆಲಸ ಮಾಡಿಕೊಂಡಿದ್ದಾರೆ.…

Read more

ಎಂಆರ್‌ಪಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ; ಪ್ರಕರಣ ದಾಖಲು

ಕಾರ್ಕಳ : ಎಂಆರ್‌ಪಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಲ್ಲಡ್ಕ ಗ್ರಾಮದ ಸುಚಿತ್ (29) ಉದ್ಯೋಗ ಹುಡುಕುತ್ತಿದ್ದು, ಅವಿನಾಶ್ ಎಂಬಾತ ತನ್ನ ಮಂಗಳೂರು ಕದ್ರಿಯಲ್ಲಿರುವ ಸನ್ನಿಧಿ ಇಂಟಿರಿಯರ್ ಡಿಸೈನ್‌ನಲ್ಲಿ…

Read more

ಕಾರಿನ ಗಾಜು ಒಡೆದ 7.30ಲಕ್ಷ ಮೌಲ್ಯದ ಚಿನ್ನಾಭರಣ, ಲ್ಯಾಪ್‌ಟಾಪ್ ಕಳವು – 24ಗಂಟೆಗಳೊಳಗೆ ಆರೋಪಿ ವಶಕ್ಕೆ

ಮಂಗಳೂರು : ನಗರದ ಕಂಕನಾಡಿಯ ಮಾರುಕಟ್ಟೆ ಬಳಿ ನಿಲ್ಲಿಸಿದ್ದ ಹುಂಡೈ ಕ್ರೆಟಾ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಆರೋಪಿಯನ್ನು ಕದ್ರಿ ಪೋಲೀಸರು ಪ್ರಕರಣ ನಡೆದ 24ಗಂಟೆಗಳೊಳಗೆ ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ‌. ಅಡ್ಯಾರ್ ನಿವಾಸಿ ಅಬ್ದುಲ್…

Read more

ಆನ್‌ಲೈನ್ ಗೇಮ್‌ಗಾಗಿ ಲಕ್ಷಾಂತರ ಸಾಲ : ಹಣ ತರುವಂತೆ ಪತ್ನಿಯ ಮೇಲೆ ಹಲ್ಲೆ, ಜೀವ ಬೆದರಿಕೆ : ಪತಿ, ಆತನ ಮನೆಯವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ…!

ಉಡುಪಿ : ಪತಿ ಹಾಗೂ ಆತನ ಮನೆಯವರು ಹಣ ನೀಡುವಂತೆ ಪೀಡಿಸಿ, ಜೀವ ಬೆದರಿಕೆ ಒಡ್ಡಿದ ಬಗ್ಗೆ ತೆಂಕನಿಡಿಯೂರು ಗ್ರಾಮದ ಸ್ವಾತಿ ನೀಡಿದ ದೂರಿನಂತೆ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಯೋಗೀಶ್‌ ಆನ್‌ಲೈನ್‌ ಗೇಮಿಂಗ್‌ನಲ್ಲಿ ಹಣ…

Read more