Accident

ರಾಷ್ಟ್ರೀಯ ಹೆದ್ದಾರಿ ಏರು ರಸ್ತೆ ಹತ್ತಲಾಗದೆ ಹಿಮ್ಮುಖ ಚಲಿಸಿದ ಲಾರಿ – ಹಲವು ವಾಹನಗಳು ಜಖಂ; ಓರ್ವ ಪ್ರಾಣಾಪಾಯದಿಂದ ಪಾರು!

ಪರ್ಕಳ : ಉಡುಪಿಯ ಮಣಿಪಾಲ ಸಮೀಪದ ಪರ್ಕಳದಲ್ಲಿ ಗ್ರಾನೈಟ್ ತುಂಬಿದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಗ್ಯಾರೇಜಿನಲ್ಲಿ ಇದ್ದ ಹಲವು ವಾಹನಗಳ ಮೇಲೆ ಬಿದ್ದಿದೆ. ಇದೇ ವೇಳೆ ಹಿಂಬದಿಯಲ್ಲಿದ್ದ ಸ್ಥಳೀಯರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಕೆಳಪರ್ಕದಲ್ಲಿ ಸಂಭವಿಸಿದೆ. ಕೆಳಪರ್ಕಳ ರಾಷ್ಟ್ರೀಯ ಹೆದ್ದಾರಿಯ…

Read more

ಓಮ್ನಿ -ಕಾರು ಮಧ್ಯೆ ಭೀಕರ ಅಪಘಾತ; ಚಾಲಕನಿಗೆ ಗಂಭೀರ ಗಾಯ

ಕಾರ್ಕಳ : ಓಮ್ನಿ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಓಮ್ನಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳದ ಗೋಮಟೇಶ್ವರ ಬೆಟ್ಟ ಬಳಿ ಶನಿವಾರ ನಡೆದಿದೆ. ಗಾಯಾಳುವನ್ನು ಮೂಡುಬಿದಿರೆಯ ಒಂಟಿಕಟ್ಟೆ ನಿವಾಸಿ ಸಂದೇಶ್‌ (35) ಎಂದು ಗುರುತಿಸಲಾಗಿದೆ. ಜೋಡುಕಟ್ಟೆಯಿಂದ ಕಾರ್ಕಳ ಕಡೆಗೆ…

Read more

ಸಿಮೆಂಟ್‌ ಲಾರಿ ಪಲ್ಟಿಯಾಗಿ ಚಾಲಕ ಸಾವು

ಬೈಂದೂರು : ಇಲ್ಲಿನ ಒತ್ತಿನೆಣೆ ತಿರುವಿನಲ್ಲಿ ಸಿಮೆಂಟ್‌ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಝಾರ್ಖಂಡ್‌ ಮೂಲದ ಚಾಲಕ ದಾಮೋದರ ಯಾದವ್‌ (55) ಮೃತಪಟ್ಟವರು. ಲೋಕಾಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read more

ಕಾರು ಹಾಗೂ ಆಟೋ ರಿಕ್ಷಾ ಮಧ್ಯೆ ಅಪಘಾತ : ಇಬ್ಬರು ಪ್ರಯಾಣಿಕರಿಗೆ ಗಾಯ

ಉಪ್ಪಿನಂಗಡಿ : ಕಾರು ಹಾಗೂ ಅಟೋ ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿ ರಿಕ್ಷಾದಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಇಲ್ಲಿನ ನೆಕ್ಕಿಲಾಡಿಯಲ್ಲಿ ಸಂಭವಿಸಿದೆ. ಉಪ್ಪಿನಂಗಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಪೆರ್ನೆ ಕಡೆ ಸಾಗುತ್ತಿದ್ದ ನಝೀರ್ ಜೋಗಿಬೆಟ್ಟು ಎಂಬವರ ಆಟೋ ರಿಕ್ಷಾಕ್ಕೆ…

Read more

ದೈವ ಕ್ಷೇತ್ರ ಉತ್ಸವದ ಸಂದರ್ಭ ಸಂಗ್ರಹಿಸಿಟ್ಟ ಪಟಾಕಿಯಲ್ಲಿ ಸ್ಫೋಟ; 154 ಜನರಿಗೆ ಗಾಯ

ಕಾಸರಗೋಡು : ನೀಲೇಶ್ವರ ಸಮೀಪದ ಅಂಜುತಂಬಲಂ ವೀರರ್ಕಾವ್ ದೈವ ಕ್ಷೇತ್ರ ಉತ್ಸವದ ಸಂದರ್ಭದಲ್ಲಿ ಪಟಾಕಿ ಸಂಗ್ರಹ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಟ್ಟು 154 ಜನರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ 97 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಎಂಟು ಮಂದಿಯ ಸ್ಥಿತಿ…

Read more

ಅದಮಾರು ಶಾಲಾ ವಿದ್ಯಾರ್ಥಿಗೆ ಅಟೋ ರಿಕ್ಷಾ ಢಿಕ್ಕಿ – ಕಾಲುಗಳಿಗೆ ಗಂಭೀರ ಗಾಯ; ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆ

ಪಡುಬಿದ್ರಿ : ಅಟೋ ರಿಕ್ಷಾ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅದಮಾರು ಪೂರ್ಣಪ್ರಜ್ಞಾ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ಒಂದನೇ ತರಗತಿ ವಿದ್ಯಾರ್ಥಿಗೆ ರಿಕ್ಷಾ ಢಿಕ್ಕಿಹೊಡೆದ ಪರಿಣಾಮ ಎರಡೂ ಕಾಲಿಗೂ ಗಂಭೀರ ಗಾಯಗಳಾದ ಘಟನೆ ಶಾಲಾ ಆವರಣದಲ್ಲೇ ಸಂಭವಿಸಿದೆ. ಗಾಯಗೊಂಡ ಬಾಲಕ ಎರ್ಮಾಳು…

Read more

ತುಳು ನಾಟಕ ಕಲಾವಿದರ ತಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ಕಲಾವಿದರು ಪಾರು

ಮಣಿಪಾಲ : ಮಣಿಪಾಲದ ಈಶ್ವರ ನಗರದ ನಗರಸಭೆಯ ಪಂಪ್‌ಹೌಸ್‌ ಬಳಿ ಭಾನುವಾರ ಸಂಜೆ ವೇಳೆ ನಾಟಕ ಕಲಾವಿದರ ಕಾರೊಂದು ಅಪಘಾತಕ್ಕೀಡಾಗಿದ್ದು, ಯಾವುದೇ ಗಾಯಗಳಾಗದೇ ಎಲ್ಲರೂ ಅಪಾಯದಿಂದ ಪಾರಾದ ಘಟನೆ ಸಂಭವಿಸಿದೆ. ಉಡುಪಿಯ ಹೀರೆಬೆಟ್ಟುವಿನಲ್ಲಿ ಇಂದು ಪ್ರದರ್ಶನಗೊಳ್ಳಲಿದ್ದ ‘ಏರ್ಲಾ ಗ್ಯಾರಂಟಿ ಅತ್ತು’ ನಾಟಕ…

Read more

ಸ್ಕೂಟರ್-ಲಾರಿ ಮಧ್ಯೆ ಅಪಘಾತ; ಇಬ್ಬರಿಗೆ ಗಂಭೀರ ಗಾಯ

ಉಡುಪಿ : ಸ್ಕೂಟರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಅಂಬಲಪಾಡಿ ರಾಷ್ಟೀಯ ಹೆದ್ದಾರಿ 66ರಲ್ಲಿ ಗುರುವಾರ ನಡೆದಿದೆ. ಗಾಯಗೊಂಡವರನ್ನು ಪಡುಬಿದ್ರೆ ನಿವಾಸಿಗಳಾದ ನಿಕಿಲ್ ಹಾಗೂ ಸಂದೀಪ್‌ ಎಂದು ಗುರುತಿಸಲಾಗಿದೆ. ಸವಾರ ನಿಕಿಲ್…

Read more

ನಂತೂರು ಸರ್ಕಲ್‌ನಲ್ಲಿ ಅಪಘಾತ; ಕಂಕನಾಡಿ ಆಸ್ಪತ್ರೆಯ ಉದ್ಯೋಗಿ ಕ್ರಿಸ್ಟಿ ಕ್ರಾಸ್ತಾ ಸ್ಥಳದಲ್ಲೇ ಮೃತ್ಯು

ದಕ್ಷಿಣ ಕನ್ನಡ : ಕಂಕನಾಡಿ ಆಸ್ಪತ್ರೆಯ ಉದ್ಯೋಗಿ ಕೋಡಿಕಲ್ ನಿವಾಸಿ ಕ್ರಿಸ್ಟಿ ಕ್ರಾಸ್ತಾ(27) ತನ್ನ ದ್ವಿಚಕ್ರ ವಾಹನದಲ್ಲಿ ಮನೆ ಕಡೆ ಹೋಗುತ್ತಿದ್ದ ಸಂದರ್ಭ ನಂತೂರು ಸರ್ಕಲಲ್ಲಿ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಅದೇ ಸಂದರ್ಭ ಕೇರಳ ಕಡೆಗೆ ತೆರಳುತ್ತಿದ್ದ ಮೀನು ತುಂಬಿದ…

Read more

ಧರ್ಮಸ್ಥಳಕ್ಕೆ ಹೊರಟವರ ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ – ಆರು ಮಂದಿಗೆ ಗಾಯ

ಅಜೆಕಾರು : ಧರ್ಮಸ್ಥಳ ಕ್ಷೇತ್ರಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿರುವ ಘಟನೆ ಅಜೆಕಾರು ಎಂಬಲ್ಲಿ ಸಂಭವಿಸಿದೆ. ಹುಬ್ಬಳ್ಳಿ ಮೂಲದ ಆರು ಮಂದಿ ಇನೋವಾ ಕಾರಿನಲ್ಲಿ ಆಗುಂಬೆಯಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ರವಿವಾರ ನಸುಕಿನ ಜಾವ ಸುಮಾರು…

Read more