Accident

ಹೆಮ್ಮಾಡಿಯಲ್ಲಿ ಹೆಜ್ಜೇನು ದಾಳಿ : ಓರ್ವ ಮೃತ್ಯು, ಮೂವರಿಗೆ ಗಾಯ

ಕುಂದಾಪುರ : ಸೇನಾಪುರದ ಬಳಿ ಹೆಜ್ಜೇನು ದಾಳಿಯ ಪರಿಣಾಮವಾಗಿ ಮೂವರು ಗಾಯಗೊಂಡು, ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಹೆಮ್ಮಾಡಿಯ ನಿವಾಸಿಯಾಗಿರುವ ಯೂಸುಫ್ ಸಾಹೇಬ್ (62) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಗುಜರಿ ವ್ಯಾಪಾರವನ್ನು ಮಾಡಿಕೊಂಡಿದ್ದ ಅವರು ಬಗ್ವಾಡಿಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಏಕಿಯಾಗಿ ಹೆಜ್ಜೇನು…

Read more

ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

ಸುರತ್ಕಲ್‌ : ಅಡುಗೆ ಮನೆಯ ಸಿಲಿಂಡರ್‌ನಿಂದ ಗ್ಯಾಸ್‌ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡು ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ತಡಂಬೈಲ್‌ ವೆಂಕಟರಮಣ ಕಾಲನಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಮನೆಯ ಯಜಮಾನ ವಾಮನ ಅವರ ಪತ್ನಿ ವಸಂತಿ (68) ಮತ್ತು ವಾಮನ ಅವರ ಅಕ್ಕ…

Read more

ಟಯರ್ ಸ್ಫೋಟಗೊಂಡು ಟೆಂಪೋ ಟ್ರಾವೆಲರ್ ಪಲ್ಟಿ

ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಹೂ ತರುತ್ತಿದ್ದ ಟೆಂಪೋ ಟ್ರಾವೆಲರ್ ಪಲ್ಟಿಯಾದ ಘಟನೆ ಫರಂಗಿಪೇಟೆಯಲ್ಲಿ ಗುರುವಾರ ಮುಂಜಾನೆ 7ಗಂಟೆಯ ವೇಳೆ ನಡೆದಿದೆ. ಅಡ್ಯಾರ್‌ನಲ್ಲಿ ಕಾರ್ಯಕ್ರಮ ನಿಮಿತ್ತ ಹೂ ಅಲಂಕಾರ ನಡೆಸುವುದಕ್ಕಾಗಿ ಬೆಂಗಳೂರಿನಿಂದ ಅಲಂಕಾರಿಕ ಹೂ ತುಂಬಿಸಿಕೊಂಡು ಹೊರಟಿದ್ದ ಟ್ರಾವೆಲರ್ ಫರಂಗಿಪೇಟೆ ಬರುವಷ್ಟರಲ್ಲಿ…

Read more

ಉಚ್ಚಿಲದಲ್ಲಿ ಕೆಎಸ್ಆರ್‌ಟಿ‌ಸಿ ಬಸ್ ಡಿಕ್ಕಿ; ಪಾದಾಚಾರಿ ಸಾವು

ಉಚ್ಚಿಲ : ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಉಚ್ಚಿಲ ಪೇಟೆಯಲ್ಲಿ ಸಂಭವಿಸಿದೆ.ಮೃತಪಟ್ಟವರನ್ನು ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಶಿವಪ್ಪ ಪೂಜಾರಿ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಉಚ್ಚಿಲದ…

Read more

ಭೀಕರ ಅಪಘಾತಕ್ಕೆ ಸುಳ್ಯದ ವ್ಯಕ್ತಿ ಬಲಿ…!

ಕಾಸರಗೋಡು : ಸುಳ್ಯ – ಕಾಸರಗೋಡು ರಸ್ತೆಯ ಕುಂಟಾರು – ಮುರೂರು ಮಧ್ಯೆ ಓಮ್ನಿ ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟ ಘಟನೆ ಡಿ. 10ರ ಮಂಗಳವಾರ ನಡೆದಿದೆ. ಮೃತ ದುರ್ದೈವಿಯನ್ನು ಸುಳ್ಯದ ಅಜ್ಜಾವರ ಕರ್ಲಪ್ಪಾಡಿ…

Read more

ನೆಕ್ಕಿಲಾಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಆಂಬ್ಯುಲೆನ್ಸ್ : ಚಾಲಕ ಅಪಾಯದಿಂದ ಪಾರು…!

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ಇಂದು ಬೆಳಿಗ್ಗೆ 34 ನೆಕ್ಕಿಲಾಡಿಯಲ್ಲಿ ನಡೆದಿದೆ. ಪುತ್ತೂರಿನಿಂದ ನೆಕ್ಕಿಲಾಡಿ ಕಡೆಗೆ ಬರುತ್ತಿದ್ದ ಆ್ಯಂಬುಲೆನ್ಸ್ ಇಲ್ಲಿನ ವನಸುಮ ನರ್ಸರಿ ರಸ್ತೆಯಲ್ಲಿ ನೇರ ಸಾಗಿ ಮನೆಯೊಂದರ ವರಾಂಡಕ್ಕೆ ನುಗ್ಗಿದೆ. ಘಟನೆಯಿಂದ…

Read more

ದೋಣಿ ಅಪಘಾತ – ಅಪಾಯದಿಂದ ಪಾರಾದ ಮೀನುಗಾರರು

ಉಳ್ಳಾಲ : ಮೀನುಗಾರಿಕೆ ನಡೆಸಿ ಮರಳುತ್ತಿದ್ದಾಗ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಗಿಲ್‌ನೆಟ್‌ ನಾಡದೋಣಿ ಮಗುಚಿಬಿದ್ದು, ಬಲೆ ಮತ್ತು ಮೀನು ಸಮುದ್ರಪಾಲಾಗಿದೆ. ದೋಣಿಯಲ್ಲಿದ್ದ ಮೂವರು ಮೀನುಗಾರರು ಪಾರಾಗಿದ್ದಾರೆ. ಉಳ್ಳಾಲ ತಾಲೂಕಿನ ಪೆರ್ಮನ್ನೂರು ಗ್ರಾಮದ ಕಲ್ಲಾಪು ನಿವಾಸಿ ಮೊಯಿದ್ದೀನ್‌ ಅವರು ಕ್ರಿಸ್ತಿಯಾ ಗೋರ್ಬನ್‌…

Read more

ಬೈಕ್ ಕಾರು ಡಿಕ್ಕಿ – ತಾಯಿ ಮಗಳಿಗೆ ಗಾಯ

ಹಿರಿಯಡ್ಕ : ಸ್ಥಳೀಯರಾದ ದೀಪಕ್‌ (39) ಎಂಬವರು ತಮ್ಮ‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಚಾಲಕ ಯಾವುದೇ ಸೂಚನೆ ನೀಡದೆ ರಸ್ತೆಯ ಬಲಭಾಗಕ್ಕೆ ಚಲಾಯಿಸಿದ ಪರಿಣಾಮ ಬೈಕ್ ಮತ್ತು ಕಾರು ಡಿಕ್ಕಿಯಾದ ಘಟನೆ ಬೊಮ್ಮರಬೆಟ್ಟು ಗ್ರಾಮದಲ್ಲಿ ಸಂಭವಿಸಿದೆ. ಈ ವೇಳೆ…

Read more

ನಗರಸಭೆ ಪಂಪ್ ಹೌಸ್‌ಗೆ ನುಗ್ಗಿದ ಕಾರು – ಪ್ರಯಾಣಿಕರು ಪಾರು

ಮಣಿಪಾಲ : ಉಡುಪಿಯ ಮಣಿಪಾಲ ಸಮೀಪ ಈಶ್ವರ ನಗರದಲ್ಲಿರುವ ನಗರಸಭೆಯ ಕುಡಿಯುವ ನೀರಿನ ಪಂಪ ಹೌಸ್‌ನೊಳಗೆ ಏಕಾಏಕಿ ಕಾರು ನುಗ್ಗಿದೆ. ಮಣಿಪಾಲದಿಂದ ಶಿವಮೊಗ್ಗ ಕಡೆಗೆ ಹೊರಟ ಕಾರು ಇದಾಗಿದ್ದು, ಇಲ್ಲಿನ ರಸ್ತೆ ಅವಸ್ಥೆ ಕುರಿತು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಮಾರುತಿ ಬೆಲೆನೋ…

Read more

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – ಬೈಕ್ ಸವಾರ ಮೃತ್ಯು

ಬಂಟ್ವಾಳ : ಬಿ.ಸಿ.ರೋಡ್ – ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ವಗ್ಗ ಉಗ್ಗಬೆಟ್ಟು ಎಂಬಲ್ಲಿ ಕೆಎಸ್ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಪಡಂಗಡಿ ಗ್ರಾಮದ ಕನ್ನಡಿ ಕಟ್ಟೆ ಡೆಕ್ಕಲೊಟ್ಟು ನಿವಾಸಿ…

Read more