Accident

ಅಂಬಾಗಿಲು ಬಳಿ ಲಾರಿ ಪಲ್ಟಿ : ಆರು ಮಂದಿಗೆ ಗಾಯ

ಉಡುಪಿ : ಉಡುಪಿಯ ಅಂಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಜರಿ ಸಾಮಾನುಗಳನ್ನು ಕೊಂಡೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅದರಲ್ಲಿದ್ದ ಕಾರ್ಮಿಕರು ಸೇರಿ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದೆ. ದುರ್ಘಟನೆ ಮಾಹಿತಿ ಪಡೆದ ಸಮಾಜ ಸೇವಕ…

Read more

ಆಯತಪ್ಪಿ ಬೋಟಿಗೆ ಬಿದ್ದ ಕಾರ್ಮಿಕ ಮೃತ್ಯು

ಮಲ್ಪೆ : ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟೊಂದರಲ್ಲಿ ಕಲಾಸಿಯಾಗಿ ಕಾರ್ಯ‌ನಿರ್ವಹಿಸುತಿದ್ದ ಕಾರ್ಮಿಕ ಆಯತಪ್ಪಿ ಬೋಟಿನಲ್ಲಿ ಬಿದ್ದು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ. ಬ್ರಹ್ಮಾವರದ ನರಸಿಂಹ (62) ಮೃತ ಕಾರ್ಮಿಕ. ನರಸಿಂಹ ಎಂಬವರು ಮಾ.19ರಂದು ನವೀನ್ ಎಂಬವರ ಮಾಲಕತ್ವದ ವೀರಾಂಜನೇಯ ಪರ್ಸಿನ್ ಬೋಟಿನಲ್ಲಿ…

Read more

ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು…

ಉಡುಪಿ : ಕಟ್ಟಡವೊಂದರ ಮೇಲೆ ಸೋಲಾರ್ ಪ್ಯಾನೆಲ್ ಸ್ವಚ್ಛಗೊಳಿಸುವಾಗ ಕಾರ್ಮಿಕರೊಬ್ಬರು ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಾ.4ರಂದು ಬೆಳಗ್ಗೆ ನಿಟ್ಟೂರು ಎಂಬಲ್ಲಿ ನಡೆದಿದೆ. ಮೃತರನ್ನು ಬಾಗಲಕೋಟೆ ಮೂಲದ ಹನುಮಂತ ಪುಂಡಲಿಕ ರುಗಿ ಎಂದು ಗುರುತಿಸಲಾಗಿದೆ. ಇವರು ಉಡುಪಿ ಬಾಳಿಗಾ ಫಿಶ್‌ನೆಟ್‌ನ ಪ್ರೊಸೆಸಿಂಗ್…

Read more

ಪರಾರಿಯಾಗಲು ಯತ್ನಿಸಿದ ಆರೋಪಿಯ ರಾದ್ಧಾಂತ : ಸರಣಿ ಅಪಘಾತ, ಪೊಲೀಸರಿಂದ ಸಿನಮೀಯ ಶೈಲಿಯಲ್ಲಿ ಬಂಧನ

ಮಣಿಪಾಲ : ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬ ರಾದ್ಧಾಂತ ನಡೆಸಿ ಸರಣಿ ಅಪಘಾತಕ್ಕೆ ಕಾರಣನಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಎಂದು ತಿಳಿದುಬಂದಿದೆ.ಆರೋಪಿ ಇಸಾಕ್ ಮಣಿಪಾಲದಲ್ಲಿ ಪೊಲೀಸರನ್ನು ನೋಡಿ ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ,…

Read more

ಅಪಾರ್ಟ್ಮೆಂಟ್‌ನ 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು

ಉಡುಪಿ : 14ನೇ ಮಹಡಿಯಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಬ್ರಹ್ಮಗಿರಿಯ ಗ್ರಾಸ್ ಲ್ಯಾಂಡ್ ದಿ ಕಾಸ್ಟ್ಲೆ ಅಪಾರ್ಟ್ಮೆಂಟ್‌ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೃತ ದುರ್ದೈವಿಯನ್ನು ಲೇಕ್ ರಾಜ್ (29) ಎಂದು ಗುರುತಿಸಲಾಗಿದೆ. ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆಯತಪ್ಪಿ 14ನೇ…

Read more

ಕುಂದಾಪುರದ ತ್ರಾಸಿಯಲ್ಲಿ ಬೆಂಕಿ ಅವಘಡ : ರಿಪೇರಿಗಾಗಿ ನಿಲ್ಲಿಸಿದ್ದ ವಾಹನಗಳು ಸುಟ್ಟು ಭಸ್ಮ…!

ಕುಂದಾಪುರ : ಕುರುಚಲು ಗಿಡಗಳಿರುವ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಲ್ಲೇ ಸಮೀಪದಲ್ಲಿ ರಿಪೇರಿ‌ಗಾಗಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿರುವ ಘಟನೆ ರವಿವಾರ ಸಂಜೆ ತ್ರಾಸಿ ಜಂಕ್ಷನ್ ಬಳಿ ನಡೆದಿದೆ. ಕುರುಚಲು ಗಿಡಗಳಿಗೆ ಬೆಂಕಿ ತಗುಲಿ ಹೊತ್ತಿಕೊಂಡಿದ್ದು, ಬಳಿಕ ಬೆಂಕಿಯು ಅಲ್ಲೇ…

Read more

ನಿರ್ಮಾಣ ಹಂತದ ಮನೆಯ ಸ್ಲಾಬ್ನಿಂದ ಆಯತಪ್ಪಿ ಬಿದ್ದು ಮನೆ ಯಜಮಾನ ಮೃತ್ಯು…!

ಕೋಟ : ಬೇಳೂರು ಎಂಬಲ್ಲಿ ನಿರ್ಮಾಣ ಹಂತದ ಮನೆಯ ಸ್ಲಾಬ್ನಿಂದ ಆಯತಪ್ಪಿ ಕೆಳಗೆ ಬಿದ್ದು ಮನೆ ಯಜಮಾನ ಮೃತಪಟ್ಟ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಸ್ಥಳೀಯ ನಿವಾಸಿ ಗೋಪಾಲ(62) ಎಂದು ಗುರುತಿಸಲಾಗಿದೆ. ಗೋಪಾಲ ಇವರು ಫೆ.10ರಂದು ರಾತ್ರಿ 9.15ರ ಸುಮಾರಿಗೆ ಹೊಸ…

Read more

ಸ್ಕೂಟರ್‌ಗೆ ಟೆಂಪೋ ಢಿಕ್ಕಿ; ಚಿಕಿತ್ಸೆ ಫಲಿಸದೇ ಸ್ಕೂಟರ್ ಸವಾರೆ ಮೃತ್ಯು…!

ಮೂಲ್ಕಿ : ಕಿನ್ನಿಗೋಳಿಯಲ್ಲಿ ಟೆಂಪೋ ರಿಕ್ಷಾ-ಸ್ಕೂಟರ್‌ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್‌ ಸವಾರೆ ಮಮತಾ ಬಂಗೇರ (42) ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಿಲ್ಪಾಡಿ ಗ್ರಾಮ ಪಂಚಾಯತ್‌ ಬಳಿಯ ಕೆ.ಎಸ್‌.ರಾವ್‌ ನಗರ ತಿರುವಿನ…

Read more

ಅಪಘಾತಗೊಂಡ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ : ಪೊಲೀಸರಿಂದ ತನಿಖೆ

ಉಡುಪಿ : ಅಪಘಾತವಾದ ವಾಹನದಲ್ಲಿ ಎಮ್ಮೆಗಳು ಪತ್ತೆಯಾಗಿ, ಇದೊಂದು ಅಕ್ರಮ ಜಾನುವಾರು ಸಾಗಾಟದ ಪ್ರಕರಣ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಯ ಅಂಬಾಗಿಲು ಪರಿಸರದಲ್ಲಿ ನಡುರಾತ್ರಿ 2.55 ವೇಳೆಗೆ ಪಿಕ್‌ಅಪ್ ವಾಹನ ಅಂಬಾಗಿಲು ಸರ್ಕಲ್‌ನಲ್ಲಿ ನಿಯಂತ್ರಣ ತಪ್ಪಿ, ಪಲ್ಟಿ ಹೊಡೆದಿತ್ತು.…

Read more

ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

ಬಂಟ್ವಾಳ : ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಚರಂಡಿಗೆ ಬಿದ್ದ ಪರಿಣಾಮ ಡೀಸೆಲ್ ಸೋರಿಕೆಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ. ಉರುಳಿಬಿದ್ದ ವೇಳೆ ಟ್ಯಾಂಕರ್‌ನಲ್ಲಿ ಸಣ್ಣ ರಂಧ್ರ ಉಂಟಾಗಿದ್ದು, ಡಿಸೇಲ್ ಸೋರಿಕೆ…

Read more