Accident Report

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹೃದಯ ಸ್ತಂಭನ – ಸವಾರ ಸಾವು

ಮಣಿಪಾಲ : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹೃದಯ ಸ್ತಂಭನಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಘವೇಂದ್ರ (49) ಮೃತ ಸವಾರ. ಅಲೆವೂರು ಗ್ರಾಮದ ಮಂಚಿಕೆರೆಯ ಮಣಿಪಾಲ-ಅಲೆವೂರು ರಸ್ತೆಯಲ್ಲಿ ಕೆ. ಅಶ್ವಥ್‌ ಅವರೊಂದಿಗೆ ಪುರೋಹಿತ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಅವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗಲೇ…

Read more

ವಿದ್ಯುತ್ ಹರಿದು ವ್ಯಕ್ತಿ ಸ್ಥಳದಲ್ಲೇ ಸಾವು

ಶಿರ್ವ : ಇಲ್ಲಿನ ನಡಿಬೆಟ್ಟು ಸಮೀಪ ವ್ಯಕ್ತಿಯೊಬ್ಬರು ಸಿಯಾಳ ಕೊಯ್ಯಲು ಹೋಗಿ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಶಿರ್ವದ ನಡಿಬೆಟ್ಟು ಸಮೀಪದ ಪನಿಯಾರ ಮನೆಯ ಕೆಲಸಗಾರ ಸುರೇಶ್ ಶೆಟ್ಟಿ (68) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮನೆಯ ಯಜಮಾನ…

Read more

ಏಕಾಏಕಿ ಕುಸಿದ ಮನೆಯ ಮೇಲ್ಛಾವಣಿ – ಅಜ್ಜಿ, ಮೊಮ್ಮಗಳು ಪ್ರಾಣಾಪಾಯದಿಂದ ಪಾರು

ಮಂಗಳೂರು: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಗರದ ಹೊರವಲಯದಲ್ಲಿರುವ ಬಜಾಲ್ ಫೈಸಲ್ ನಗರದಲ್ಲಿ ಮನೆಯೊಂದು ಕುಸಿದು ಅಜ್ಜಿ – ಮೊಮ್ಮಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಮಧ್ಯಾಹ್ನ 12.30ಸುಮಾರಿಗೆ ಯಮುನಾ ಎಂಬವರಿಗೆ ಸೇರಿದ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದಿದೆ. ಈ…

Read more

ಟ್ಯಾಂಕರ್ ಹರಿದು ಸ್ಕೂಟರ್ ಸವಾರ ಸ್ಥಳದಲ್ಲಿಯೇ ದಾರುಣ ಸಾವು

ಮಂಗಳೂರು : ನಗರದ ನಂತೂರು ಪದವು – ಜಂಕ್ಷನ್ ನಡುವಿನ ಎನ್ಎಚ್66ನಲ್ಲಿ ಟ್ಯಾಂಕ‌ರ್ ಹರಿದು ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರು ನಗರದ ಅಡ್ಯಾರು ಕಣ್ಣಗುಡ್ಡೆ ನಿವಾಸಿ ಶಿವಾನಂದ ಶೆಟ್ಟಿ(42) ಮೃತಪಟ್ಟವರು. ಶಿವಾನಂದ ಶೆಟ್ಟಿ ಅಡ್ಯಾರ್ ಕಣ್ಣೂರಿನಲ್ಲಿ…

Read more

ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಬಸ್; ವಿದ್ಯಾರ್ಥಿಗಳಿಗೆ ಗಾಯ

ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಚರಂಡಿಗಿಳಿದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಕೊಲ್ಲೂರು ಸಮೀಪದ ದಳಿಮುರ್ಕ್ಕು ಬಳಿ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಬಸ್ ಶಿವಮೊಗ್ಗ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ…

Read more

ಶಾಮಿಯಾನ ಹಾಕುತ್ತಿದ್ದ ವೇಳೆ ಕರೆಂಟ್ ಶಾಕ್; ಓರ್ವ ಮೃತ್ಯು, ನಾಲ್ವರಿಗೆ ಗಾಯ

ಬಂಟ್ವಾಳ : ಖಾಸಗಿ ಸ್ಥಳವೊಂದರಲ್ಲಿ ಶಾಮಿಯಾನ ಹಾಕುತಿದ್ದ ವೇಳೆ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ಬಿಹಾರ ಮೂಲದ ಯುವಕನೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಕಡೇಶ್ವಾಲ್ಯ ಗ್ರಾಮದ ಕಾಡಬೆಟ್ಟು ಎಂಬಲ್ಲಿ ಶನಿವಾರ ಮದ್ಯಾಹ್ನ ನಡೆದಿದೆ. ಮೃತ ದುರ್ದೈವಿಯನ್ನು ಬಿಹಾರ ಮೂಲದ…

Read more

ಕೆ.ಎಸ್.ಆರ್.ಟಿ.ಸಿ ಬಸ್ಸು ಹಾಗೂ ಬೈಕ್ ನಡುವಿನ ಅಪಘಾತಕ್ಕೆ ಸವಾರ ಬಲಿ

ಬಂಟ್ವಾಳ : ರಾ.ಹೆ.75ರ ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ರವಿವಾರ ನಡೆದಿದೆ. ದ್ವಿಚಕ್ರ ವಾಹನ ಸವಾರ ಬೆಂಜನಪದವು ನಿವಾಸಿ ನಯನ್ ಕುಮಾರ್ ಮೃತಪಟ್ಟ ದುರ್ಧೈವಿ. ಕಡೆಗೋಳಿ ಭಾಗದಿಂದ…

Read more