ಮೃತ ಸುಹಾಸ್‌ ಶೆಟ್ಟಿಯನ್ನು ರೌಡಿ ಶೀಟ‌ರ್ ಎಂದು ಬಿಂಬಿಸಲು ವ್ಯವಸ್ಥಿತ ಹುನ್ನಾರ – ಸುನಿಲ್ ಕುಮಾರ್

ಕಾರ್ಕಳ : ಹಿಂದುತ್ವಕ್ಕಾಗಿ ಬದುಕಿದ ಸುಹಾಸ್‌ ಶೆಟ್ಟಿಯನ್ನು ರೌಡಿ ಶೀಟ‌ರ್ ಎಂದು ಬಿಂಬಿಸಲು ವ್ಯವಸ್ಥಿತ ಹುನ್ನಾರ ಮಾಡಲಾಗಿದೆ ಎಂದು ಶಾಸಕ ಸುನಿಲ್ ಕುಮಾ‌ರ್ ಆಪಾದಿಸಿದ್ದಾರೆ.

ಪೊಲೀಸ್ ವ್ಯವಸ್ಥೆ, ಸ್ಥಳೀಯಾಡಳಿತ, ಮುಖ್ಯಮಂತ್ರಿ, ಗೃಹ ಸಚಿವರು, ಉಸ್ತುವಾರಿ ಸಚಿವರು ಒಂದಾಗಿ, ಹೇಳಿಕೆಯಲ್ಲಿ, ಭಾಷಣದಲ್ಲಿ, ಜಾಲತಾಣದಲ್ಲಿ ಇದನ್ನೇ ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು. ಇದು ಸುಹಾಸ್‌ಗೆ ಮಾತ್ರವಲ್ಲ, ಜೆಹಾದಿ ಮನಃಸ್ಥಿತಿಯ ವಿರುದ್ಧ ಯಾರೆಲ್ಲ ಹೋರಾಡಿ ಪ್ರಾಣಾರ್ಪಣೆ ಮಾಡಿದ್ದಾರೋ ಅವರೆಲ್ಲರಿಗೂ ಇದೇ ಹಣೆಪಟ್ಟಿ ಕಟ್ಟುವ ಪ್ರಯತ್ನ ನಡೆಸಲಾಗಿದೆ. ಸುಹಾಸ್‌ನಂಥವರ ಕೊಲೆಗೆ ಸಂಚು ರೂಪಿಸುವ ಪಿಎಫ್‌ಐ ಉಗ್ರರಿಗೆ ಸಂಪುಟ ಉಪಸಮಿತಿ ಶಿಫಾರಸ್ಸಿನ ಮೇರೆಗೆ ಪ್ರಕರಣ ವಾಪಾಸ್‌ ಭಾಗ್ಯ ನೀಡಲಾಗಿದೆ ಎಂದು ಟೀಕಿಸಿದ್ದಾರೆ.

ಸುಹಾಸ್ ಬದುಕಿದ್ದರೆ ಆತನ ವಿರುದ್ಧ ದಾಖಲಾದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದರು. ಆದರೆ ಅದಕ್ಕೆ ಅವಕಾಶ ನೀಡದೆ ಏಕಮುಖವಾಗಿ ರೌಡಿ ಶೀಟರ್‌ಪಟ್ಟವನ್ನು ಕಾಂಗ್ರೆಸ್ಸಿಗರು ನೀಡಿದ್ದಾರೆ ಎಂದು ಪ್ರಕಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಟೋಲ್ ಸುಲಿಗೆಗೆ ಸದ್ಯ ಬ್ರೇಕ್; ಬಸ್ ಮಾಲಕರು ಖುಷ್

ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ದಾಳಿ, ಓರ್ವ ಸೆರೆ

ರಂಗಭೂಮಿ ಉಡುಪಿ ಸಂಸ್ಥೆ ರಂಗಭೂಮಿಗೆ ಮಾದರಿ : ಟಿ. ಅಶೋಕ್ ಪೈ