ಮಾಹೆಯಲ್ಲಿ ಶಾಸ್ತ್ರೀಯ ಕನ್ನಡ ಪಠ್ಯಗಳ ಕುರಿತ ವಿಚಾರಸಂಕಿರಣ

ಮಣಿಪಾಲ : ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರ, ಭಾಷಾ ವಿಭಾಗ ಮತ್ತು ಮಾಹೆ ವತಿಯಿಂದ ಜರಗಿದ ಎರಡು ದಿನಗಳ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯ ಅಂಗವಾಗಿ ‘ಕನ್ನಡ ಶಾಸ್ತ್ರೀಯ ಪಠ್ಯಗಳ ಹೊಸ ಓದು’ ಎಂಬ ವಿಷಯದ ಕುರಿತ ವಿಚಾರಸಂಕಿರಣ ನಡೆಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಪ್ರಸಿದ್ಧ ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಶಾಸ್ತ್ರೀಯ ಪಠ್ಯಗಳ ಹೊಸ ಅರಿವಿನ ಸಾಧ್ಯತೆಯನ್ನು ತೆರೆದಿಟ್ಟರು. ಶಾಸ್ತ್ರೀಯ ಪಠ್ಯಗಳ ಉಗಮ ಮತ್ತು ಪ್ರಸರಣಕ್ಕೆ ಜನಪದವೇ ಮೂಲವಾಗಿದ್ದು ಹಳೆಗನ್ನಡ ಕಾವ್ಯಗಳು ವಾಚನ, ಪ್ರದರ್ಶನಗಳಂಥ ಮಾಧ್ಯಮಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿವೆ. ಹಾಗಾಗಿ, ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲಿ ಶಾಸ್ತ್ರೀಯ ಪಠ್ಯಗಳನ್ನು ಬೋಧನೆ ಮಾಡುವಾಗ ನವೀನ ಮಾದರಿಯನ್ನು ಅನುಸರಿಸುವ ಅಗತ್ಯವಿದ್ದು ಜನಪದೀಯ ವಿಧಾನಗಳನ್ನು ಅಳವಡಿಸಿಕೊಳ್ಳಬಹುದಾಗಿದೆ’ ಎಂದರು.

ಗಾಂಧಿಯನ್‌ ಸೆಂಟರ್‌ ಫಾರ್‌ ಫಿಲಾಸಫಿಕಲ್‌ ಆರ್ಟ್ಸ್‌ ಮತ್ತು ಸಯನ್ಸ್ ವಿಭಾಗದ ಮುಖ್ಯಸ್ಥ ಡಾ. ವರದೇಶ್‌ ಹಿರೇಗಂಗೆ, ಭಾಷಾ ವಿಭಾಗದ ಮುಖ್ಯಸ್ಥ ಡಾ. ರಾಹುಲ್‌ ಪುಟ್ಟಿ ಅವರು ಉಪಸ್ಥಿತರಿದ್ದರು. ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರದ ಸಂಯೋಜಕ ಡಾ. ಪೃಥ್ವಿರಾಜ ಕವತ್ತಾರು ಸ್ವಾಗತಿಸಿ, ಪ್ರಸ್ತಾವನೆ ಗೈದರು. ವಿದ್ವಾನ್‌ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಅವರು ಗಮಕವಾಚನದ ಮೂಲಕ ಪಂಪ ಮತ್ತು ರನ್ನರ ಕೃತಿಗಳ ಪದ್ಯಗಳನ್ನು ಪ್ರಸ್ತುತಿಪಡಿಸಿದರು. ಸಂಶೋಧನ ಸಹಾಯಕರಾದ ಅಭಿಲಾಷಾ ಎಸ್‌. ಕಾರ್ಯಕ್ರಮ ನಿರ್ವಹಿಸಿದರು. ಪದ್ಮಾಸಿನಿ ಉದ್ಯಾವರ ವಂದನಾರ್ಪಣೆಗೈದರು.

Related posts

ನಿಯಮ ಮೀರಿ ಸರಕಾರಿ ಜಮೀನಿನಲ್ಲಿ ಕಾಮಗಾರಿ : ತಹಶೀಲ್ದಾರ್‌ರಿಂದ ತಡೆ

ಬಾಲಕ ನಾಪತ್ತೆ ಪ್ರಕರಣ – ಶನಿವಾರ ಫರಂಗಿಪೇಟೆ ಬಂದ್‌ಗೆ ಕರೆ…

ವಾಮಾಚಾರ ಪ್ರಕರಣ – ಪ್ರಸಾದ್ ಅತ್ತಾವರ, ಆತನ ಪತ್ನಿ ತನಿಖೆಗೆ ಸಹಕರಿಸುತ್ತಿಲ್ಲ : ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್‌