ಸುಶ್ಮಿತಾ ‌ಆಚಾರ್ಯಗೆ ಮಿಸ್ ಕೋಸ್ಟಲ್ – 2024 ಕಿರೀಟ

ಉಡುಪಿ : ಸುಶ್ಮಿತಾ ಆಚಾರ್ಯ ಅವರು ಈ ವರ್ಷದ ಮಿಸ್ ಕೋಸ್ಟಲ್ – 2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಉಡುಪಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿಭಾವಂತೆಯಾಗಿರುವ ಸುಶ್ಮಿತಾ ಆಚಾರ್ಯ, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಈ ಮೊದಲು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಸದ್ಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ‘ಸುಜಾಸ್‌’ನ ಜಯಲಕ್ಷ್ಮೀ ಇವರಿಗೆ ಮಾರ್ಗದರ್ಶನ ಮಾಡಿದ್ದರು. ಇವರು ಮುಲ್ಕಿಯ ಕೆ.ಸತೀಶ್ ಆಚಾರ್ಯ, ಸ್ವಾತಿ ಆಚಾರ್ಯ ದಂಪತಿ ಪುತ್ರಿ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ