ಸುರತ್ಕಲ್ ಬೀಚ್ ರೋಡ್ ಕುಸಿತ, ಶಾಸಕರ ಭೇಟಿ

ಸುರತ್ಕಲ್ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸುರತ್ಕಲ್ ಲೈಟ್ ಹೌಸ್ ಮತ್ತು ಎನ್‌ಐಟಿಕೆ ಸಂಪರ್ಕಿಸುವ ರಸ್ತೆ ಕುಸಿದಿದ್ದು ಶಾಸಕ ಡಾ. ಭರತ್ ಶೆಟ್ಟಿ ವೈ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆ.29ರಂದು ಬಿರುಕು ಬಿಟ್ಟ ಸ್ಥಿತಿಯಲ್ಲಿತ್ತು. ಶನಿವಾರ ರಸ್ತೆಯ ಅಡಿಭಾಗ ಕುಸಿದು ಡಾಮರು ರಸ್ತೆಯೂ ಅಪಾಯದಲ್ಲಿದೆ. ವಾಹನ ಸಂಚಾರ ನಿಷೇಧಿಸಲಾಗಿದ್ದು, ಹೆಚ್ಚಿನ ಹಾನಿಯಾಗದಂತೆ ಮರಳು ಚೀಲವಿಟ್ಟು ಸುರಕ್ಷತೆ ಒದಗಿಸಲು ಶಾಸಕ ಡಾ. ಭರತ್ ಶೆಟ್ಟಿ ವೈ ಸೂಚಿಸಿದರಲ್ಲದೆ, ರಸ್ತೆಯ ನಿರ್ಮಾಣಕ್ಕೂ ಪೂರಕ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು. ಮನಪಾ ಸದಸ್ಯರಾದ ಶ್ವೇತ ಪೂಜಾರಿ, ಶೋಭಾ ರಾಜೇಶ್, ಬಿಜೆಪಿ ಪ್ರಮುಖರಾದ ದಿನಕರ್ ಇಡ್ಯಾ, ರಾಜೇಶ್ ಮುಕ್ಕ, ರಾಘವೇಂದ್ರ ಶೆಣೈ , ಪುಷ್ಪರಾಜ್ ಮುಕ್ಕ ಮತ್ತಿತರರಿದ್ದರು.

Related posts

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ